Breaking News

ಅರಣ್ಯ ಸಚಿವ ಉಮೇಶ್​ ಕತ್ತಿ ತವರು ಜಿಲ್ಲೆ ಬೆಳಗಾವಿಯಲ್ಲಿ ಖದೀಮರಿಂದ ಜಪ್ತಿ ಮಾಡಲಾಗಿದ್ದ ಅರಣ್ಯ ಸಂಪತ್ತು ಕಳ್ಳತನ

Spread the love

ಬೆಳಗಾವಿ : ಅರಣ್ಯ ಸಚಿವ ಉಮೇಶ್​ ಕತ್ತಿ ತವರು ಜಿಲ್ಲೆ ಬೆಳಗಾವಿಯಲ್ಲಿ ಖದೀಮರಿಂದ ಜಪ್ತಿ ಮಾಡಲಾಗಿದ್ದ ಅರಣ್ಯ ಸಂಪತ್ತು ಕಳ್ಳತನವಾಗಿರುವ ಘಟನೆ ನಡೆದಿದೆ.

ನಗರದ ಆರ್‌ಎಫ್‌ಒ ಕಚೇರಿ ಆವರಣದ ಗೋದಾಮಿನಲ್ಲಿ 2019-20ನೇ ಸಾಲಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ವಿವಿಧ ಅರಣ್ಯ ಸಂಪತ್ತನ್ನು ಇಲಾಖೆ ಸಿಬ್ಬಂದಿ ಜಪ್ತಿ ಮಾಡಿ ಗೋದಾಮಿನಲ್ಲಿ ಇಟ್ಟಿದ್ದರು.

 

complaint copy

ಶ್ರೀಗಂಧ, ನೀರಗಂಧ, ಗುವಾಡಾ ಸೇರಿದಂತೆ ವಿವಿಧ ಜಾತಿಯ ಕಟ್ಟಿಗೆ ತುಂಡು, ವನ್ಯ ಮೃಗಗಳ ಚರ್ಮ, ಕೊಂಬು ಸೇರಿ ಸಾಗಾಟಕ್ಕೆ ಬಳಸಿದ ವಾಹನಗಳು ಹಾಗೂ ಆಯುಧಗಳನ್ನು ಸಂಗ್ರಹಿಸಿಟ್ಟಿದ್ದರು.ಫೆಬ್ರವರಿ 12ರಂದು ಇಲಾಖೆ ಅಧಿಕಾರಿಗಳು ಒಮ್ಮೆ ಹೋಗಿ ಗೋದಾಮಿನಲ್ಲಿದ್ದ ವಸ್ತುಗಳನ್ನು ಪರಿಶೀಲಿಸಿದ್ದರು. ಇದಾದ 10 ದಿನಗಳ ಬಳಿಕ ಗೋದಾಮಿಗೆ ಹೋಗಿ ನೋಡಿದಾಗ ಕಳ್ಳತನವಾಗಿರುರುವುದು ಪತ್ತೆಯಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿ ನಡೆ ತೀವ್ರ ಅನುಮಾನಕ್ಕೆ ಎಡೆ ಮಾಡಿ‌ಕೊಟ್ಟಿದೆ.


Spread the love

About Laxminews 24x7

Check Also

ಮೃತ ಸರ್ಕಾರಿ ವೈದ್ಯಾಧಿಕಾರಿ ಕೊಠಡಿಯಲ್ಲಿ ಮಾಟಮಂತ್ರ: ಸಾವಿನ ಸುತ್ತ ಅನುಮಾನದ ಹುತ್ತ

Spread the loveಕೋಲಾರ, ಜುಲೈ 07: ಜಿಲ್ಲೆ ಮಾಲೂರು ತಾಲ್ಲೂಕಿನ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ವಸಂತ್ ಕುಮಾರ್ ಅವರು ತಮ್ಮ ಉತ್ತಮ ಸೇವೆಯಿಂದಲೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ