Breaking News

ಪಾರ್ವತಮ್ಮ ರಾಜ್ ಕುಮಾರ್-ಪುನೀತ್ ಹೆಸರಿನಲ್ಲಿ ಮೈಸೂರು ವಿವಿಯಲ್ಲಿ 2 ಚಿನ್ನದ ಪದಕ

Spread the love

ಪುನೀತ್ ರಾಜ್ ಕುಮಾರ್ ಹೆಸರಿನಲ್ಲಿ ಪ್ರತಿ ವರ್ಷವೂ ಮೈಸೂರು ವಿಶ್ವವಿದ್ಯಾಲಯದಲ್ಲಿ ಓದಿದ ಪ್ರತಿಭಾವಂತರಿಗೆ 2 ಚಿನ್ನದ ಪದಕವನ್ನು ನೀಡುವುದಾಗಿ ರಾಘವೇಂದ್ರ ರಾಜ್ ಕುಮಾರ್ ಘೋಷಿಸಿದ್ದಾರೆ. ಇಂದು ಮೈಸೂರಿನ ವಿವಿಯಲ್ಲಿ ನಡೆಯುತ್ತಿರುವ 102ನೇ ವಾರ್ಷಿಕ ಘಟಿಕೋತ್ಸವದಲ್ಲಿ ಮಾತನಾಡಿದ ರಾಘವೇಂದ್ರ ರಾಜ್ ಕುಮಾರ್ ‘ಪುನೀತ್ ಮತ್ತು ಪಾರ್ವತಮ್ಮ ರಾಜ್ ಕುಮಾರ್ ಹೆಸರಿನಲ್ಲಿ ಎರಡು ಚಿನ್ನದ ಪದಕಗಳನ್ನು ನೀಡುವುದಾಗಿ ತಿಳಿಸಿದರು. ಪಾರ್ವತಮ್ಮ ರಾಜಕುಮಾರ್ ಅವರ ಹೆಸರಿನಲ್ಲಿ, ಬ್ಯೂಸಿನೇಸ್ ಮ್ಯಾನೇಜ್ಮೆಂಟ್ ವಿಭಾಗದಲ್ಲಿ ಬಂಗಾರದ ಪದಕ ಮತ್ತು ಪುನೀತ್ ರಾಜಕುಮಾರ್  ಹೆಸರಿನಲ್ಲಿ ಲಲಿತಾ ಕಲೆಗಳ ವಿಷಯದಲ್ಲಿ ಬಂಗಾರದ ಪದಕ ನೀಡುವುದಾಗಿ ಅಶ್ವಿನಿ ಪುನೀತ್ ರಾಜಕುಮಾರ್ ಅವರಿಂದ ಘೋಷಣೆ ಆಯಿತು.  ಮುಂದಿನ ವರ್ಷದಿಂದ ಪದಕ ವಿತರಣೆ ಮಾಡಲಾಗುವುದು ಎಂದಿದೆ ಡಾ.ರಾಜ್ ಕುಟುಂಬ.

ಘಟಿಕೋತ್ಸವದಲ್ಲಿ ಮಾತನಾಡಿದ ರಾಘವೇಂದ್ರ ರಾಜ್ ಕುಮಾರ್, ಜೀವನ ಒಂದು ಚಕ್ರ ಇದ್ದಂತೆ. ನಮ್ಮ ತಂದೆಗೂ ಇದೇ ವಿವಿಯಲ್ಲಿ ಗೌರವ ಡಾಕ್ಟರೇಟ್ ಕೊಟ್ಟಿದ್ರು. ಇಂದು ನನ್ನ ತಮ್ಮನಿಗೂ ಇದೇ ವಿವಿಯಲ್ಲಿ ಗೌರವ ಡಾಕ್ಟರೇಟ್ ಸಿಕ್ಕಿದೆ. ನನಗೆ ಇದು ವೇದಿಕೆ ರೀತಿ ಕಾಣುಸ್ತಿಲ್ಲ. ಸರಸ್ವತಿಯ ಮಂದಿರ ತರ ಕಾಣ್ತಿದೆ. ನಿಮ್ಮ ಕೆಲಸವನ್ನ ಶ್ರದ್ದೆಯಿಂದ ಮಾಡಿದ್ರೆ ಪ್ರಶಸ್ತಿಗಳು ಹುಡುಕಿ ಬರುತ್ತವೇ ಅಂತ ಪುನೀತ್ ಯಾವಾಗಲೂ ಹೇಳ್ತಿದ್ದ. ಹೂವಿನಿಂದ ನಾರು ಸ್ವರ್ಗ ಸೇರಿದಂತೆ ನನ್ನ ತಮ್ಮನಿಂದ ನಾನು ಸ್ವರ್ಗ ನೋಡುತ್ತಿದ್ದೇನೆ. ಈ ಗೌರವ ಡಾಕ್ಟರೇಟ್‌ ನಮ್ಮ ಕುಟುಂಬದ ಜವಾಬ್ದಾರಿಯನ್ನ ಹೆಚ್ಚಿಸಿದೆ. ಅಶ್ವಿನಿ ಮಾರ್ಗದರ್ಶನದಲ್ಲಿ ನಾವೆಲ್ಲರೂ ಸಾಮಾಜಿಕ ಸೇವೆ ಮುಂದುವರೆಸುತ್ತೇವೆ ಎಂದು ನುಡಿದರು.ಮಂಗಳವಾರ ಕ್ರಾಫರ್ಡ್ ಹಾಲ್ ನಲ್ಲಿ ನಡೆದ ಘಟಿಕೋತ್ಸವ ಸಮಾರಂಭ ಹಾಗೂ ಪದವಿ ಪ್ರದಾನ ಕಾರ್ಯಕ್ರಮದಲ್ಲಿ ಮೂವರು ಸಾಧಕರಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಗೌರವ ಡಾಕ್ಟರೇಟ್ ಪ್ರದಾನ ಮಾಡಿದರು. ಮೊದಲಿಗೆ ಹಿರಿಯ ವಿಜ್ಞಾನಿ ಹಾಗೂ ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ ವಿಶ್ರಾಂತ ಮಹಾ ನಿರ್ದೇಶಕ ಡಾ.ವಾಸುದೇವ್ ಕಲ್ಕುಂಟೆ ಅತ್ರೆ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು


Spread the love

About Laxminews 24x7

Check Also

ವಿದೇಶಿ ಪ್ರಜೆಗಳಿಂದ ಮಾದಕ ದ್ರವ್ಯಗಳನ್ನ ಜಪ್ತಿ

Spread the loveಬೆಂಗಳೂರು : ಮಿಂಚಿನ ಕಾರ್ಯಾಚರಣೆ ನಡೆಸಿರುವ ರಾಜಾನುಕುಂಟೆ ಪೊಲೀಸರು ಮೂವರು ವಿದೇಶಿ ಪ್ರಜೆಗಳನ್ನು ಬಂಧಿಸುವ ಮೂಲಕ ಡ್ರಗ್ಸ್ ಜಾಲವನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ