Breaking News

ಕೋ-ಜನರೇಷನ್​ಗೆ ಬೇಕಿದೆ ನವೀಕರಣ; 62 ಸಕ್ಕರೆ ಕಾರ್ಖಾನೆಗೆ ಆರ್ಥಿಕ ಸಂಕಷ್ಟ!

Spread the love

ಬೆಳಗಾವಿ :ರಾಜ್ಯಾದ್ಯಂತ ಕಾರ್ಯನಿರ್ವಹಿಸುತ್ತಿರುವ 72 ಸಕ್ಕರೆ ಕಾರ್ಖಾನೆಗಳ ಪೈಕಿ 60 ಸಕ್ಕರೆ ಕಾರ್ಖಾನೆಗಳು ಕೋಜನರೇಷನ್ ಮೂಲಕ ವಿದ್ಯುತ್ ಉತ್ಪಾದಿಸುತ್ತಿದ್ದರೂ, ರಾಜ್ಯ ಸರ್ಕಾರದ ನಿರ್ಲಕ್ಷ್ಯದಿಂದಾಗಿ ಆರ್ಥಿಕ ಸಂಕಷ್ಟ ಎದುರಿಸುತ್ತಿವೆ.

ನೆರೆ ರಾಜ್ಯದಲ್ಲಿರುವ ಸಕ್ಕರೆ ಕಾರ್ಖಾನೆಗಳಿಗೆ ಆರ್ಥಿಕ ಬಲ ನೀಡುವ ದೃಷ್ಠಿಯಿಂದ ಮಹಾರಾಷ್ಟ್ರ ಸರ್ಕಾರ, ಅಲ್ಲಿನ ಸಕ್ಕರೆ ಕಾರ್ಖಾನೆಗಳಿಗೆ ಪ್ರತಿ ಯುನಿಟ್​ಗೆ 5.80 ರೂ. ವಿದ್ಯುತ್ ದರ ನೀಡುತ್ತಲಿದೆ. ಆದರೆ ನಮ್ಮ ರಾಜ್ಯದಲ್ಲಿ ವಿದ್ಯುತ್ ಉತ್ಪಾದಿಸುವ ಸಕ್ಕರೆ ಕಾರ್ಖಾನೆಗಳ ಕೋ-ಜನರೇಷನ್ ವಿದ್ಯುತ್ ಉತ್ಪಾದನೆಯ ಒಪ್ಪಂದದ ಅವಧಿ ಮುಗಿದರೂ, ಇನ್ನೂ ಸರ್ಕಾರ ಅವುಗಳ ನವೀಕರಣ ಮಾಡಿಲ್ಲ. ಅದಕ್ಕಾಗಿ ವಿದ್ಯುತ್ ಉತ್ಪಾದಿಸುವ 60 ಕಾರ್ಖಾನೆಗಳಿಗೆ ನಿತ್ಯವೂ ಕೋಟ್ಯಂತರ ರೂ. ನಷ್ಟವಾಗುತ್ತಿದೆ. ಕೆಲ ಕಾರ್ಖಾನೆಗಳ ಮಾಲೀಕರು, ಕಡಿಮೆ ದರದಲ್ಲಿ ಕೆಪಿಟಿಸಿಎಲ್​ಗೆ ಮಾರಾಟ ಮಾಡುತ್ತಿದ್ದರೇ ಇನ್ನೂ ಕೆಲವರು, ಖಾಸಗಿ ಅವರಿಗೆ ಮಾರಾಟ ಮಾಡುತ್ತಿದ್ದಾರೆ.

‘ಪ್ರತಿ ಯುನಿಟ್​ಗೆ 6 ರೂ. ನೀಡಲಿ’: ರಾಜ್ಯದಲ್ಲಿ ಹೆಚ್ಚಾಗಿರುವ ಕೋವಿಡ್ ಅಲೆಗಳಿಂದಾಗಿ ಕೈಗಾರಿಕೆಗಳ ಮೇಲೆ ಸಾಕಷ್ಟು ಪ್ರತಿಕೂಲ ಪರಿಣಾಮ ಬೀರಿದೆ. ಹಾಗಾಗಿ ಕೋ-ಜನರೇಷನ್ ಮೂಲಕ ವಿದ್ಯುತ್ ಉತ್ಪಾದಿಸುವ ಘಟಕಗಳಿಗೆ ಪ್ರತಿ ಯುನಿಟ್​ಗೆ ಕನಿಷ್ಠ 6 ರೂ. ನೀಡಿದರೇ ಅನುಕೂಲವಾಗುತ್ತದೆ. ಮತ್ತೊಂದೆಡೆ ರಾಜ್ಯ ಸರ್ಕಾರ ನಿಗದಿ ಮಾಡಿರುವ ಕನಿಷ್ಠ ಬೆಂಬಲ ಬೆಲೆಯನ್ನು ಸಕ್ಕರೆ ಕಾರ್ಖಾನೆಗಳು ನೀಡುತ್ತಿವೆ. ಸ್ವಾಭಾವಿಕವಾಗಿ ಸಕ್ಕರೆ ಪೂರೈಕೆ ಜಾಸ್ತಿಯಾದಂತೆ ಸಕ್ಕರೆ ದರ ಕುಸಿಯಲಿದೆ. ಇನ್ನೊಂದೆಡೆ ಸಕ್ಕರೆ ಕಾರ್ಖಾನೆಗಳಿಗೆ ಕಾರ್ವಿುಕರ ವೇತನ, ಬ್ಯಾಂಕ್ ಸಾಲ, ಅವುಗಳ ಮೇಲಿನ ಬಡ್ಡಿ, ಕಾರ್ಖಾನೆಯ ಮೇಲ್ವಿಚಾರಣೆ, ಕೋ-ಜನರೇಷನ್ ನಿರ್ವಹಣೆ ವೆಚ್ಚ ಇತ್ಯಾದಿ ಖರ್ಚುಗಳಿಂದಾಗಿ ಕಾರ್ಖಾನೆಗಳು ಆರ್ಥಿಕ ಸಂಕಷ್ಟ ಎದುರಿಸುತ್ತಿವೆ. ಅದಕ್ಕಾಗಿ ರಾಜ್ಯ ಸರ್ಕಾರ ಕನಿಷ್ಠ ಪ್ರತಿ ಯುನಿಟ್​ಗೆ 6 ರೂ. ಗೂ ಅಧಿಕ ದರ ನೀಡಿದರೇ ಮಾತ್ರ ಸಕ್ಕರೆ ಕಾರ್ಖಾನೆಗಳಿಗೆ ಅನುಕೂಲವಾಗಲಿದೆ ಎಂದು ದಕ್ಷಿಣ ಭಾರತ ಸಕ್ಕರೆ ಕಾರ್ಖಾನೆಗಳ ಒಕ್ಕೂಟದ ಅಧ್ಯಕ್ಷ ಜಗದೀಶ ಗುಡಗುಂಟಿ ಅಭಿಪ್ರಾಯಪಟ್ಟಿದ್ದಾರೆ.

1743.39 ಮೆಗಾವಾಟ್ ಕರೆಂಟ್ ಉತ್ಪಾದನೆ: ರಾಜ್ಯಾದ್ಯಂತ 60 ಸಕ್ಕರೆ ಕಾರ್ಖಾನೆಗಳು 1743.39 ಮೆಗಾವಾಟ್ ಕರೆಂಟ್ ಉತ್ಪಾದನೆ ಮಾಡುತ್ತಿವೆ. ಬೆಳಗಾವಿ ಜಿಲ್ಲೆಯ 20 ಸಕ್ಕರೆ ಕಾರ್ಖಾನೆಗಳು 589.32 ಮೆ.ವಾ.ವಿದ್ಯುತ್ ಉತ್ಪಾದಿಸುತ್ತಿವೆ. ಬಾಗಲಕೋಟೆ ಜಿಲ್ಲೆಯಲ್ಲಿರುವ 12 ಸಕ್ಕರೆ ಕಾರ್ಖಾನೆಗಳು 458.86 ಮೆ.ವಾ. ವಿದ್ಯುತ್ ಉತ್ಪಾದಿಸುತ್ತಿವೆ.

ಹೆಚ್ಚುವರಿಯಾಗಿ 252 ರೂ. ರೈತರಿಗೆ: ಒಂದು ಟನ್ ಕಬ್ಬಿನಿಂದ ಬರುವ ಬಗ್ಯಾಸ್​ನಿಂದಾಗಿ ಕೋ-ಜನರೇಷನ್ ಮೂಲಕ 70 ಯುನಿಟ್ ಕರೆಂಟ್ ಉತ್ಪಾದನೆಯಾಗುತ್ತದೆ. ಯುನಿಟ್​ಗೆ 6 ರೂ. ನೀಡಿದರೆ 70 ಯುನಿಟ್​ಗೆ 420 ರೂ. ದೊರೆಯಲಿದೆ. ಇದರಲ್ಲಿ ಶೇ.60 ಕಬ್ಬುಕಳುಹಿಸಿದ ರೈತರಿಗೆ ನೀಡಿದರೇ 252 ರೂ. ಹೆಚ್ಚುವರಿಯಾಗಿ ಸಿಕ್ಕು, ಬೆಳೆಗಾರರಿಗೂ ಲಾಭವಾಗಲಿದೆ ಎಂಬುದು ತಜ್ಞರು ಅಭಿಮತ.

  ವಿದ್ಯುತ್ ಉತ್ಪಾದನೆ ಕಂಪನಿ ಸ್ಥಾಪಿಸಿ: ರಾಜ್ಯದಲ್ಲಿ ವಿದ್ಯುತ್ ಉತ್ಪಾದಿಸುವ 62 ಸಕ್ಕರೆ ಕಾರ್ಖಾನೆ ಗಳು ಒಂದಾಗಿ ಸ್ವತಂತ್ರ ವಿದ್ಯುತ್ ಉತ್ಪಾದನೆ ಕಂಪನಿ ಸ್ಥಾಪನೆ ಮಾಡುವ ಅಗತ್ಯವಿದೆ. ರಾಜ್ಯ ಸರ್ಕಾರ ಪ್ರತಿ ವರ್ಷ ವಿದ್ಯುತ್ ದರ ನಿಗದಿಪಡಿಸಿ, ಕಬ್ಬು ನುರಿಸುವ ಹಂಗಾಮಿನಲ್ಲಿ ಉತ್ಪಾದನೆಯಾದ ಶೇ.60 ವಿದ್ಯುತ್ ಆದಾಯ ರೈತರಿಗೆ, ಶೇ.40ಅನ್ನು ಕಾರ್ಖಾನೆ ಮಾಲೀಕರಿಗೆ ನೀಡುವುದರಿಂದ ಇಬ್ಬರಿಗೂ ಅನುಕೂಲ ಆಗಲಿದೆ ಎನ್ನುತ್ತಾರೆ ಮಾಜಿ ಸಂಸದ ರಮೇಶ ಕತ್ತಿ .

ವಿದ್ಯುತ್ ಉತ್ಪಾದನೆ ಕಂಪನಿ ಸ್ಥಾಪಿಸಿ: ರಾಜ್ಯದಲ್ಲಿ ವಿದ್ಯುತ್ ಉತ್ಪಾದಿಸುವ 62 ಸಕ್ಕರೆ ಕಾರ್ಖಾನೆ ಗಳು ಒಂದಾಗಿ ಸ್ವತಂತ್ರ ವಿದ್ಯುತ್ ಉತ್ಪಾದನೆ ಕಂಪನಿ ಸ್ಥಾಪನೆ ಮಾಡುವ ಅಗತ್ಯವಿದೆ. ರಾಜ್ಯ ಸರ್ಕಾರ ಪ್ರತಿ ವರ್ಷ ವಿದ್ಯುತ್ ದರ ನಿಗದಿಪಡಿಸಿ, ಕಬ್ಬು ನುರಿಸುವ ಹಂಗಾಮಿನಲ್ಲಿ ಉತ್ಪಾದನೆಯಾದ ಶೇ.60 ವಿದ್ಯುತ್ ಆದಾಯ ರೈತರಿಗೆ, ಶೇ.40ಅನ್ನು ಕಾರ್ಖಾನೆ ಮಾಲೀಕರಿಗೆ ನೀಡುವುದರಿಂದ ಇಬ್ಬರಿಗೂ ಅನುಕೂಲ ಆಗಲಿದೆ ಎನ್ನುತ್ತಾರೆ ಮಾಜಿ ಸಂಸದ ರಮೇಶ ಕತ್ತಿ .


Spread the love

About Laxminews 24x7

Check Also

ಮೃತ ಸರ್ಕಾರಿ ವೈದ್ಯಾಧಿಕಾರಿ ಕೊಠಡಿಯಲ್ಲಿ ಮಾಟಮಂತ್ರ: ಸಾವಿನ ಸುತ್ತ ಅನುಮಾನದ ಹುತ್ತ

Spread the loveಕೋಲಾರ, ಜುಲೈ 07: ಜಿಲ್ಲೆ ಮಾಲೂರು ತಾಲ್ಲೂಕಿನ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ವಸಂತ್ ಕುಮಾರ್ ಅವರು ತಮ್ಮ ಉತ್ತಮ ಸೇವೆಯಿಂದಲೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ