ಅಣ್ಣಿಗೇರಿ: ಪಟ್ಟಣದ ಗದಗ ಚತುಷ್ಪಥ ರಸ್ತೆಯಲ್ಲಿ ಶುಕ್ರವಾರ ಕಾರ್ ಮತ್ತು ಬೈಕ್ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಗದಗ ತಾಲ್ಲೂಕು ಮಲ್ಲಸಮುದ್ರದ ಇಬ್ರಾಹಿಂಸಾಬ ಬುವಾಜಿ (30) ಮತ್ತು ಪುತ್ರಿ ಇಸ್ಮತಬಾನು ಬುವಾಜಿ (4) ಮೃತಪ್ಟಟಿದ್ದಾರೆ.
ಗಾಯಗೊಂಡಿರುವ ಇಬ್ರಾಹಿಂಸಾಬ ಅವರ ಹೆಂಡತಿ ನಸ್ರೀನಬಾನು (27) ಮತ್ತು ಪುತ್ರ ನೌಮಾನ (2) ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಲ್ಲಸಮುದ್ರ ಗ್ರಾಮದಿಂದ ನವಲಗುಂದ ಹತ್ತಿರದ ಯಮನೂರಿನ ಚಾಂಗದೇವರ ದರ್ಶನಕ್ಕೆ ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ.
ಹಿಂದಿನ ಪ್ರಕರಣವೇ ಕಾರಣ: ಅಪಘಾತ ನಡೆದ ಸ್ಥಳದ ಸಮೀಪದಲ್ಲೇ ಮೂರು ದಿನಗಳ ಹಿಂದೆ ಎರಡು ಲಾರಿಗಳ ಮಧ್ಯೆ ಅಪಘಾತ ಸಂಭವಿಸಿತ್ತು. ವಾಹನಗಳನ್ನು ತೆರವು ಮಾಡದ ಕಾರಣ ಅಲ್ಲಿ ಏಕಮುಖ ಸಂಚಾರ ಏರ್ಪಟ್ಟಿತ್ತು. ಅಪಘಾತ ಸಂಭವಿಸಲು ಇದೇ ಕಾರಣವಾಗಿದೆ