ಡೀಸೇಲ್ ಹಾಕಿಸಿಕೊಳ್ಳಲು ಕ್ಯಾಂಟರ್‍ವೊಂದು ಯೂಟರ್ನ್ ತೆಗೆದುಕೊಳ್ಳುವ ಸಂದರ್ಭದಲ್ಲಿ ಅಪಘಾತ ಸಂಭವಿಸಿದ ಪರಿಣಾಮ ವ್ಯಕ್ತಿಯೋರ್ವ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಬೆಳಗಾವಿ ತಾಲೂಕಿನ ಭೂತರಾಮನಹಟ್ಟಿಯ ಮುಕ್ತಿ ಮಠದ ಮುಂದಿರುವ ಪೆಟ್ರೋಲ್ ಪಂಪ್ ಮುಂದೆ ನಡೆದಿದೆ.
ಬೆಳಗಾವಿ ತಾಲೂಕಿನ ಮುಕ್ತಿಮಠ ಬಳಿಯಿರುವ ಪೆಟ್ರೋಲ್ ಪಂಪಿನ ಕಡೆ ಕ್ಯಾಂಟರ್ ವೊಂದು ಯು ಟರ್ನ್ ತೆಗೆದುಕೊಂಡಿದ್ದಕ್ಕಾಗಿ ಭಾರಿ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಬೈಕ್ ಸವಾರ ಗಾಯಗೊಂಡಿದ್ದರೆ, ಹಿಂಬದಿ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಕಾಕತಿ ಪೆÇೀಲೀಸ್ ಠಾಣೆಯ ವ್ಯಾಪ್ತಿಯಲ್ಲಿನ ಭೂತರಾಮನಹಟ್ಟಿ ಬಳಿಯ ಮುಕ್ತಿಮಠ ಮೃಗಾಲಯದ ಹತ್ತಿರ ಇಂದು ಸಂಜೆ ಸಂಭವಿಸಿದೆ.
ಹುಕ್ಕೇರಿ ತಾಲೂಕಿನ ನರಸಿಂಗಪೂರ ಗ್ರಾಮದ 24 ವರ್ಷದ ಶ್ರೀಧರ ಬೆನ್ನಿ ಎಂಬ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಬೈಕ್ ಸವಾರ ಬೆಳಗಾವಿ ತಾಲೂಕಿನ ಸುತಗಟ್ಟಿ ಗ್ರಾಮದ ಶಾನೂರ ಬಸಪ್ಪ ಹಂಚಿನಮನಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ.
ಬೆಂಗಳೂರು ಕಡೆಯಿಂದ ಮಹಾರಾಷ್ಟ್ರ ಕಡೆಗೆ ಹೊರಟಿದ್ದ ಬೆಂಗಳೂರು ಮೂಲದ ಗಂಗಾಧರಸ್ವಾಮೀ ಎಂಬುವ ಕ್ಯಾಂಟರ್ ಚಾಲಕ ಡಿಸೈಲ್ ಹಾಕಿಸಿಕೊಳ್ಳಲು ಯು ಟರ್ನ್ ಹೊಡೆದಿದ್ದಾನೆ. ಆಗ ಪುಣೆ ಕಡೆಯಿಂದ ಸರಕು ತುಂಬಿಕೊಂಡು ಬೆಂಗಳೂರಿಗೆ ಹೊರಟಿದ್ದ ಮತ್ತೊಂದು ಕ್ಯಾಂಟರ್ ವಾಹನ ಇದಕ್ಕೆ ಡಿಕ್ಕಿ ಹೊಡೆದು ಸರ್ವಿಸ್ ರಸ್ತೆ ಮೇಲಿಂದ ನರಸಿಂಗಪೂರ ಕಡೆಗೆ ಹೊರಟಿದ್ದ ಬೈಕ್ ಮೇಲೆ ಹರಿಹಾಯ್ದಿದೆ. ಪರಿಣಾಮ ಹಿಂಬದಿ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಬೈಕ್ ಸವಾರ ಗಾಯಗೊಂಡಿದ್ದಾನೆ. ಮುಂದೆ ಚಾಲಕನ ನಿಯಂತ್ರಣ ತಪ್ಪಿ ಮಕ್ತಿಮಠ ಹತ್ತಿರದ ರಾಣಿ ಚನ್ನಮ್ಮ ಕಿರು ಮೃಗಾಲಯದ ಮುಂದೆ ಇರುವ ಮರಕ್ಕೆ ಮತ್ತು ಕಟ್ಟೆಗೆ ಡಿಕ್ಕಿ ಹೊಡೆದಿದ್ದರಿಂದ ಮರದ ರೆಂಬೆಗಳು ಮುರಿದು ಹಾಗೂ ಭಾಗಶಃ ಕಟ್ಟೆ ಒಡೆದು ಹೋಗಿದ್ದು, ವಾಹನ ಅಲ್ಲಿಯೇ ನಿಂತಿದ್ದರಿಂದ ಭಾರಿ ಅನಾಹುತ ತಪ್ಪಿದೆ.