ಚಲಿಸುವ ರೈಲು ಹತ್ತಲು ಹೋಗಿ ಮಹಿಳೆ ಕೆಳಗೆ ಬಿದ್ದಿರುವಂತಹ ಘಟನೆ ಸಂಭವಿಸಿದೆ. ತಿರುಪತಿಟು ಕೊಲ್ಹಾಪುರ ಎಕ್ಸಪ್ರೆಸ್ ರೈಲು ಹತ್ತುವ ವೇಳೆ ಬಳ್ಳಾರಿಯ ರೈಲ್ವೆ ನಿಲ್ದಾಣದಲ್ಲಿ ನಸುಕಿನ ಜಾವ ಈ ಘಟನೆ ನಡೆದಿದೆ.
ಬಾಗಲಕೋಟೆ: ಹೃದಯಾಘಾತದಿಂದ ಟಗರು ಸಾವನ್ನಪ್ಪಿರುವಂತಹ ಘಟನೆ ನಡೆದಿದೆ.
ಹೃದಯಾಘಾತದಿಂದ ಸಾವನ್ನಪ್ಪಿದೆ. ಬಾಗಲಕೋಟೆ ತಾಲ್ಲೂಕಿನ ಸೀಗಿಕೇರಿ ಗ್ರಾಮದ ನಾಟಕಕಾರ,ಕಲಾವಿದ ಹೆಚ್.ಎನ್. ಸೇಬಣ್ಣವರ ಎಂಬುವರಿಗೆ ಸೇರಿದ ಟಗರು ಇದ್ದಾಗಿದ್ದು, ಕಾಳಗಕ್ಕೆ ಹೆಸರುವಾಸಿಯಾಗಿತ್ತು. ಮುನ್ನೂರಕ್ಕೂ ಹೆಚ್ಚು ಟಗರುಗಳಿಗೆ ಡಿಚ್ಚಿ ಹೊಡೆದು ಲವ್ಲಿಬಾಯ್ ಟಗರು ಸೋಲಿಸಿ, ಬೈಕ್, ಹೋರಿ, ಚಿನ್ನ ,ಬೆಳ್ಳಿ ನಗದು ಸೇರಿ ಹತ್ತು ಲಕ್ಷ ರೂ. ಬಹುಮಾನ ಗಳಿಸಿತ್ತು. 8 ಲಕ್ಷಕ್ಕೆ ಕೇಳಿದ್ದರೂ ಮಾಲೀಕ ಮಾರಿರಲಿಲ್ಲ. 6 ವರ್ಷದ ಲವ್ಲಿಬಾಯ್ ದೇಹಕ್ಕೆ ಮಾಲೆ , ಹಣೆಗೆ ಬೆಳ್ಳಿ ಖಡಗ, ದೇಹಕ್ಕೆ ಭಂಡಾರ ಬಳಿದು, ಪ್ರಶಸ್ತಿಗಳನ್ನು ಪಾರ್ಥೀವ ಶರೀರದ ಮುಂದೆ ಇಟ್ಟು ಗ್ರಾಮದಲ್ಲಿ ಶ್ರದ್ದಾಂಜಲಿಗೆ ವ್ಯವಸ್ಥೆ ಮಾಡಲಾಗಿದೆ. ಟಗರು ಅಭಿಮಾನಿಗಳ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಅಂತಿಮ ದರ್ಶನ ಪಡೆಯಲು ಜನರು ಬರುತ್ತಿದ್ದಾರೆ.