ಗಾಂಧಿನಗರ: ಹಣೆಗೆ ತಿಲಕವಿಟ್ಟು ಕಾಂಗ್ರೆಸ್ ಮುಖಂಡ ರಾಹುಲ್ ಅವರು ಗುಜರಾತ್‍ನ ದ್ವಾರಕಾಧೀಶದ ಶ್ರೀಕೃಷ್ಣ ದೇವಾಲಯಕ್ಕೆ ಭೇಟಿ ನೀಡಿದರು.
ರಾಹುಲ್‍ಗಾಂಧಿ ಅವರು ಮಧ್ಯಾಹ್ನ ಸುಮಾರಿಗೆ ವಿಶೇಷ ವಿಮಾನದ ಮೂಲಕ ಗಾಂಧಿ ಜಾಮ್ ನಗರಕ್ಕೆ ಬಂದ ಅವರನ್ನು ಗುಜರಾತ್ ಕಾಂಗ್ರೆಸ್ ಅಧ್ಯಕ್ಷ ಜಗದೀಶ್ ಠಾಕೂರ್, ಮಾಜಿ ರಾಜ್ಯಾಧ್ಯಕ್ಷ ಅಮಿತ್ ಚಾವ್ಡಾ ಮತ್ತು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸುಖರಾಮ್ ರಥ್ವಾ ಸೇರಿದಂತೆ ಪಕ್ಷದ ಹಲವಾರು ಹಿರಿಯ ನಾಯಕರು ಸ್ವಾಗತಿಸಿದರು.
ನಂತರ ಅವರು ದ್ವಾರಕಾಧೀಶದ ಶ್ರೀಕೃಷ್ಣ ದೇವಾಲಯಕ್ಕೆ ತಲುಪಿದರು. ಅಲ್ಲಿ ರಾಹುಲ್ ಗಾಂಧಿ ಅವರನ್ನು ಸಾಂಪ್ರದಾಯಿಕ ಜಾನಪದ ನೃತ್ಯದ ಮೂಲಕ ಸ್ವಾಗತಿಸಲಾಯಿತು. ರಾಹುಲ್ ಗಾಂಧಿ ಹಣೆಗೆ ತಿಲಕವನ್ನು ಇಟ್ಟುಕೊಂಡು, ಪೂಜಾ ಸಾಮಾಗ್ರಿ ಹಾಗೂ ಧಾರ್ಮಿಕ ಧ್ವಜವನ್ನು ತಲೆಯ ಮೇಲೆ ಇಟ್ಟುಕೊಂಡು ದೇವಾಲಯವನ್ನು ಪ್ರವೇಶಿಸಿದರು.