ಕೀವ್: ಉಕ್ರೇನ್ ಹಾಗೂ ರಷ್ಯಾ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆ ಮಧ್ಯೆ ಸಾಮಾಜಿಕ ಮಾಧ್ಯಮದಲ್ಲಿ ಉಕ್ರೇನ್ ನಾಗರಿಕರ ಹೃದಯ ವಿದ್ರಾವಕ ಫೋಟೋಗಳೇ ತುಂಬಿ ತುಳುಕುತ್ತಿವೆ. ಉಕ್ರೇನ್‍ನ ಮೆಟ್ರೋ ಸುರಂಗಮಾರ್ಗದಲ್ಲಿ ದಂಪತಿ ವಿದಾಯ ಹೇಳುವ ವೈರಲ್ ಫೋಟೋದಿಂದ ಹಿಡಿದು ತಂದೆ ಹಾಗೂ ಮಗಳು ಅತ್ತು ಒಬ್ಬರನ್ನೊಬ್ಬರು ಅಪ್ಪಿಕೊಳ್ಳುವ ದೃಶ್ಯಗಳು ನೆಟ್ಟಿಗರನ್ನು ಬೆಚ್ಚಿಬೀಳಿಸಿವೆ.
ಇದೀಗ ಉಕ್ರೇನ್ ಸೇನೆಗೆ ಸೇರಲು ಸರದಿ ಸಾಲಿನಲ್ಲಿ ನಿಂತಿರುವ 80 ವರ್ಷದ ವ್ಯಕ್ತಿಯೊಬ್ಬರ ಫೋಟೋ ವೈರಲ್ ಆಗುತ್ತಿದೆ. ಕೈಯಲ್ಲೊಂದು ಬ್ಯಾಗ್ ಹಿಡಿದು ಸೈನ್ಯಕ್ಕೆ ಸೇರಲು ಸಿದ್ಧರಾಗಿ ನಿಂತಿರುವ ಮುದಿ ಜೀವದ ಫೋಟೋ ಎಂತಹವರ ಕಣ್ಣಲ್ಲಿಯೂ ನೀರು ತರಿಸುವಂತಿದೆ