ಭಾರತ ವಿಕಾಸ್ ಪರಿಷತ್ ಬೆಳಗಾವಿ ಶಾಖೆಯ 25 ವರ್ಷಗಳ ರಜತ ಮಹೋತ್ಸವ ಕಾರ್ಯಕ್ರಮ ಇದೇ ಫೆ.27ರಂದು ಬೆಳಗಾವಿಯ ಮಂಡೋಳಿ ರಸ್ತೆಯಲ್ಲಿರುವ ಗ್ಯಾಲಕ್ಸಿ ಹಾಲನ್‍ಲ್ಲಿ ಆಯೋಜಿಸಲಾಗಿದೆ ಎಂದು ಡಾ.ಜೆ.ಜಿ.ನಾಯಿಕ್ ತಿಳಿಸಿದ್ದಾರೆ.
ಗುರುವಾರ ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಡಾ.ಜೆ.ಜಿ.ನಾಯಿಕ್ ಫೆ.27ರಂದು ಬೆಳಿಗ್ಗೆ 8.30ರಿಂದ ಸಾಯಂಕಾಲ 8.30ರವರೆಗೆ ಭಾರತ ವಿಕಾಸ್ ಪರಿಷತ್‍ನ ರಜತ ಮಹೋತ್ಸವ ಕಾರ್ಯಕ್ರಮ ಆಚರಿಸುತ್ತಿದ್ದೇವೆ.
ಭಾರತ ವಿಕಾಸ್ ಪರಿಷತ್ ನಡೆದು ಬಂದ ದಾರಿ 25 ವರ್ಷಗಳಲ್ಲಿ ನಾವು ಮಾಡಿರುವ ಕಾರ್ಯಗಳ ಕುರಿತು ಬೆಳಿಗ್ಗೆ ಒಂದು ಗಂಟೆ ಪ್ರೆಜೆಂಟೇಶನ್ ಮಾಡುತ್ತಿದ್ದೇವೆ. ಸಾಯಂಕಾಲ 5 ಗಂಟೆಗೆ ಜವಾಬ್ದಾರಿಯನ್ನು ಮನಸಾರೆ ಸ್ವೀಕರಿಸುವ ಕಾರ್ಯಕ್ರಮ ನಡೆಯಲಿದೆ. ಅದೇ ರೀತಿ ನೂತನ ಪದಾಧಿಕಾರಿಗಳ ಪದಗ್ರಹಣ, ವಿವಿಧ ಶಾಲೆಗಳ ಮುಖ್ಯೋಪಾಧ್ಯಾಯರು, ದಾನಿಗಳಿಗೆ ಸತ್ಕಾರ ಕಾರ್ಯಕ್ರಮ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳು ನೆರವೇರಲಿವೆ ಎಂದು ತಿಳಿಸಿದರು.