ಲಕ್ನೋ: ಅಖಿಲೇಶ್ ಯಾದವ್ ಅವರು ತಮ್ಮ ಜೀವನುದ್ದಕ್ಕೂ ಚಿಕ್ಕ ಹುಡುಗನಾಗಿಯೇ(ಬಾಬು) ಇರುತ್ತಾನೆ ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಖಿಲೇಶ್ ಯಾದವ್ ಅವರನ್ನು ವ್ಯಂಗ್ಯವಾಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರಿಗೆ ಸರ್ಕಾರದ ಯೋಜನೆಗಳನ್ನು ಮೇಲ್ವಿಚಾರಣೆ ನಿರ್ವಹಿಸಲು ಇ-ಡ್ಯಾಶ್‍ಬೋರ್ಡ್ ಬಳಸುತ್ತಿದ್ದಾರೆ ಎನ್ನುವುದು ತಿಳಿದಿರಲಿಲ್ಲ ಎಂದು ವ್ಯಂಗ್ಯವಾಡಿದರು.
ಅಖಿಲೇಶ್ ಯಾದವ್ ಅವರು ಗ್ಯಾಜೆಟ್‍ಗಳನ್ನು ಸರಿಯಾಗಿ ನಿರ್ವಹಿಸದ ಕಾರಣ ಟ್ಯಾಬ್ಲೆಟ್‍ಗಳು ಮತ್ತು ಸ್ಮಾರ್ಟ್‍ಫೋನ್ ಗಳ ವಿತರಣೆಯನ್ನು ವಿಳಂಬ ಮಾಡಿದರು ಎಂದು ಅಖಿಲೇಶ್ ಯಾದವ್ ಅವರ ‘ಬಾಬಾ ಮುಖ್ಯಮಂತ್ರಿಯಾಗಿದ್ದಾರೆ’ ಎಂಬ ಹೇಳಿಕೆಗೆ ತಿರುಗೇಟು ನೀಡಿದರು.