Breaking News

ಒಂದೇ ಒಂದು ಫೋಟೋಶೂಟ್‍ನಿಂದ ಬದಲಾದ ಕಾರ್ಮಿಕನ ಜೀವನ: ಛಾಯಾಗ್ರಾಹಕನ ಜೀವ ಉಳಿಸಿದ್ದ ಮಮ್ಮಿಕ್ಕ..!

Spread the love

ರಾತ್ರಿ, ಬೆಳಗಾಗೋದ್ರೊಳಗೆ ದಿನಗೂಲಿ ಕಾರ್ಮಿಕನಾಗಿದ್ದ ಕೇರಳದ ಮಮ್ಮಿಕ್ಕ ಮನೆ ಮಾತಾದ ಕಥೆ ನಿಮಗೆಲ್ಲರಿಗೂ ತಿಳಿದಿದೆ. ಕಡು ಬಡತನದಲ್ಲಿ ಜೀವನ ಸಾಗಿಸುತ್ತಿದ್ದ 60ರ ಹರೆಯದ ಈತನಿಗೆ ಒಮ್ಮೆಲೇ ಅದೃಷ್ಟ ಲಕ್ಷ್ಮೀ ಒಲಿದಿರುವುದು ನಿಜಕ್ಕೂ ಸಂತೋಷದ ವಿಷಯ.

ನೀವು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದರೆ, ಮಮ್ಮಿಕ್ಕ ಅವರ ಲೇಟೆಸ್ಟ್ ಫೋಟೋಗಳ್ನು ಬಹುಶಃ ನೋಡಿರುತ್ತೀರಿ.

ಅಂತರ್ಜಾಲದಲ್ಲಿ ಹೊಸ ಸೆನ್ಸೇಷನ್ ಸೃಷ್ಟಿಸಿದ್ದಾರೆ ಈ ಮಮ್ಮಿಕ್ಕ. ಛಾಯಾಗ್ರಾಹಕ ಅದ್ಯಾವ ಸಮಯದಲ್ಲಿ ಫೋಟೋ ಕ್ಲಿಕ್ಕಿಸಿದ್ರೋ ಗೊತ್ತಿಲ್ಲ, ಚಂಡಮಾರುತದಂತೆ ಫೋಟೋ ವೈರಲ್ ಆಗಿದ್ದು, ಮಮ್ಮಿಕ್ಕರ ಗೆಟಪ್ ಬದಲಾಗಿದೆ. ಒಂದೇ ಒಂದು ಫೋಟೋಶೂಟ್ ಈತನ ಜೀವನವನ್ನೇ ಬದಲಾಯಿಸಿದೆ. ಸದ್ಯ, ಇವರ ಮೇಕ್ ಓವರ್ ಎಲ್ಲರಿಗೂ ಅಚ್ಚರಿ ಸೃಷ್ಟಿಸಿದ್ದಂತೂ ಸುಳ್ಳಲ್ಲ.

ಇನ್ನು ಫೋಟೋಗ್ರಾಫರ್ ಶರೀಕ್ ಹಾಗೂ ಮಮ್ಮಿಕ್ಕ ಅವರ ಪರಿಚಯ ಇಂದು ನಿನ್ನೆಯದಲ್ಲ. ಇವರ ಬಗ್ಗೆ ಕೆಲವು ಇಂಟ್ರೆಸ್ಟಿಂಗ್ ವಿಚಾರವನ್ನು ಶರೀಕ್ ಹಂಚಿಕೊಂಡಿದ್ದಾರೆ. ಮಮ್ಮಿಕ್ಕ ಅವರ ಬಾಲ್ಯದಿಂದಲೂ ಶರೀಕ್ ಅವರ ಜೊತೆ ಉತ್ತಮ ಒಡನಾಟವಿತ್ತಂತೆ. ಇವರಿಬ್ಬರೂ ನೆರೆಹೊರೆಯವರಾಗಿದ್ದರು. ಬಾಲ್ಯದಿಂದಲೂ ಇಬ್ಬರೂ ಆತ್ಮೀಯ ಗೆಳೆಯರಾಗಿದ್ದರು. ಒಮ್ಮೆ ಫೋಟೋಗ್ರಾಫರ್ ಶರೀಕ್ ಒಂಭತ್ತು ವರ್ಷದವರಿದ್ದಾಗ, ನದಿಯಲ್ಲಿ ಈಜಲು ಹೋಗಿ ನೀರಿನಲ್ಲಿ ಕೊಚ್ಚಿ ಹೋಗಿದ್ದರು. ಅಂದು ಮಮ್ಮಿಕ್ಕ ಇವರನ್ನು ರಕ್ಷಿಸಿದ್ದರಂತೆ. ಅಂದಿನಿಂದ ತಾವು ಉತ್ತಮ ಬಾಂಧವ್ಯ ಹೊಂದಿದ್ದಾಗಿ ಶರೀಕ್ ಹೇಳಿದ್ದಾರೆ.


Spread the love

About Laxminews 24x7

Check Also

ಜನರಲ್ಲಿ ವೈಚಾರಿಕತೆ, ವೈಜ್ಞಾನಿಕತೆ ಬೆಳೆಯದಿದ್ದರೆ, ಕೇವಲ ಮೌಢ್ಯ ನಿಷೇಧ ಕಾನೂನಿನ ಮೂಲಕ ನಿರೀಕ್ಷಿತ ಬದಲಾವಣೆ ಸಾಧ್ಯವಿಲ್ಲ ಎಂದ ಸಿಎಂ

Spread the loveಬೆಂಗಳೂರು: ”ದ್ವಿಭಾಷಾ ಸೂತ್ರ ನನ್ನ ಅಭಿಪ್ರಾಯವಾಗಿದೆ. ಅದನ್ನು ಸರ್ಕಾರದ ಅಭಿಪ್ರಾಯ ಮಾಡುವ ದಿಕ್ಕಿನಲ್ಲಿ ಪ್ರಯತ್ನಿಸುತ್ತೇನೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ