ಮುಂಬೈ: ಠಾಕ್ರೆ ಕುಟುಂಬ ಮತ್ತು ಮಹಾರಾಷ್ಟ್ರ ಸರ್ಕಾರಕ್ಕೆ ಬೆದರಿಕೆ ಹಾಕಿರುವ ಬಿಜೆಪಿ ನಾಯಕ ಮತ್ತು ಕೇಂದ್ರ ಸಚಿವ ನಾರಾಯಣ ರಾಣೆಗೆ ಶಿವಸೇನೆ ಸಂಸದ ಸಂಜಯ್ ರಾವತ್ ತಿರುಗೇಟು ನೀಡಿದ್ದಾರೆ. ಬೆದರಿಕೆ ಒಡ್ಡುವುದನ್ನು ನಿಲ್ಲಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನೀವು ಕೇಂದ್ರ ಸಚಿವರಾಗಿರಬಹುದು ಆದರೆ ಇದು ಮಹಾರಾಷ್ಟ್ರ. ಈ ವಿಚಾರವನ್ನು ಮರೆಯಬೇಡಿ. ನಾವು ನಿಮ್ಮ ತಂದೆ. ಇದರ ಅರ್ಥವೇನೆಂದು ನಿಮಗೆ ಚೆನ್ನಾಗಿ ತಿಳಿದಿದೆ ಎಂದು ರಾವತ್ ವಾಗ್ದಾಳಿ ನಡೆಸಿದ್ದಾರೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಉಪನಗರ ಬಾಂದ್ರಾದಲ್ಲಿರುವ ಖಾಸಗಿ ನಿವಾಸ ಮಾತೋಶ್ರೀಯಲ್ಲಿ ನಾಲ್ವರಿಗೆ ಜಾರಿ ನಿರ್ದೇಶನಾಲಯದ ಸೂಚನೆಯೊಂದು ಸಿದ್ಧವಾಗಿದೆ ಎಂದು ಕೇಂದ್ರ ಸಚಿವ ರಾಣೆ ಹೇಳಿಕೆ ನೀಡಿದ್ದರು.
ಈ ಹೇಳಿಕೆಗೆ ಪ್ರತಿಯಾಗಿ ಟಾಂಗ್ ನೀಡಿರುವ ರಾವತ್, ನಿಮ್ಮ ಜಾತಕ ನಮ್ಮ ಬಳಿ ಇದೆ ಎಂದು ನಾರಾಯಣ ರಾಣೆ ಹೆದರಿಸುತ್ತಿದ್ದಾರೆ.