ರಾಜ್ಯದ 31 ಜಿಲ್ಲೆಗಳ ಅಪರ ಜಿಲ್ಲಾಧಿಕಾರಿಗಳಿಗೆ ಶೀಘ್ರದಲ್ಲೇ ಹೊಸ ಕಾರು ಸಿಗಲಿದೆ. 9 ಲಕ್ಷ ರೂ. (Ex showroom) ಬೆಲೆಯೊಳಗೆ ಕಾರು ಖರೀದಿಸಲು ಸರ್ಕಾರ ಸಮ್ಮತಿ ನೀಡಿದೆ.
ಜಿಲ್ಲೆಗಳಲ್ಲಿ ಓಡಾಟ, ಪ್ರಗತಿ ಪರಿಶೀಲನೆ ನಡೆಸಲು ವಾಹನದ ಅವಶ್ಯಕತೆ ಇರುವುದರಿಂದ ಹೊಸ ಕಾರುಗಳ ಖರೀದಿಗೆ ಸರ್ಕಾರ ಓಕೆ ಎಂದಿದೆ.
ವಿಶೇಷ ಭೂಸ್ವಾಧೀನಾಧಿಕಾರಿಗಳ ಕಾರ್ಯಾಲಯ ಬೆಂಗಳೂರು ನಗರ ಜಿಲ್ಲೆಯಲ್ಲಿ ಠೇವಣಿ ಇಟ್ಟಿರುವ ಮೊತ್ತದ ಮೇಲೆ ಆಕರಣೆಯಾಗಿರುವ ಬಡ್ಡಿ ಮೊತ್ತದಿಂದ 279 ಲಕ್ಷ ರೂ.ಗಳ ವೆಚ್ಚ ಭರಿಸುವಂತೆ ಆದೇಶದಲ್ಲಿ ತಿಳಿಸಲಾಗಿದೆ.
Laxmi News 24×7