ಬೆಳಗಾವಿ: ಓರ್ವ ಯುವಕನ ಮೇಲೆ ಐವರ ಗ್ಯಾಂಗ್ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಬೆಳಗಾವಿ ನ್ಯೂಗಾಂಧಿ ನಗರದಲ್ಲಿ ನಡೆದಿದೆ.
ಹಳೆ ದ್ವೇಷದ ಹಿನ್ನೆಲೆಯಲ್ಲಿ ನಿನ್ನೆ ನಿನ್ನೆ ರಾತ್ರಿ ಐವರು ಕೈಫ್ ತನ್ವೀರ್ ಬಾಗವಾನ( 20) ಎಂಬಾತನ ಮೇಲೆ ಏಕಾಏಕಿ ಹಲ್ಲೆ ನಡೆಸಿದ್ದಾರೆ.
ಹಲ್ಲೆ ದೃಶ್ಯಗಳನ್ನು ಕಂಡ ಸ್ಥಳೀಯರು ಕಿರುಚಾಡಿದ್ದು, ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಮುಸ್ತಾಕ ಎಂಬಾತನ ನೇತೃತ್ವದಲ್ಲಿ ಕೈಫ್ ತನ್ವೀರ್ ಕೊಲೆ ಯತ್ನ ನಡೆದಿದೆ ಎಂದು ಆರೋಪಿಸಲಾಗಿದೆ.
ಸದ್ಯ ಗಂಭೀರ ಗಾಯಗೊಂಡಿರುವ ಕೈಫ್ನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನೆ ಸಂಬಂಧ ಬೆಳಗಾವಿ ಮಾರಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.