ಬೆಂಗಳೂರು: ರಾಷ್ಟ್ರಧ್ವಜ ಇಲ್ಲದೇ ಇರುವುದನ್ನು ಇದೆ ಎಂದು ಹೇಳಿ ಸಮಸ್ಯೆ ಸೃಷ್ಟಿಸಿದವರು ಡಿ.ಕೆ ಶಿವಕುಮಾರ್, ರಾಷ್ಟ್ರ ಧ್ವಜಕ್ಕೆ ಅಪಮಾನ ಮಾಡಿದ ಡಿಕಿಶಿ ರಾಜೀನಾಮೆ ಕೊಡಲಿ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯಿತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಕಿಡಿಕಾರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ಯಾರು ರಾಷ್ಟ್ರದ್ರೋಹ ಮಾಡಿದ್ದಾರೋ ಅವರು ರಾಜೀನಾಮೆ ಕೊಡಲಿ. ಹೀಗಾಗಿ ಡಿಕೆಶಿಯೇ ರಾಜೀನಾಮೆ ಕೊಡಲಿ ನಾನು ರಾಷ್ಟ್ರಭಕ್ತ ಎಂದರು.
ತಿರಂಗ ಯಾತ್ರೆ ಮಾಡಿದವನು ನಾನು, ತುರ್ತುಪರಿಸ್ಥಿತಿ ವೇಳೆ ಜೈಲಿಗೆ ಹೋಗಿ ಬಂದವನು ನಾನು. ಕೆಂಪುಕೋಟೆಯಲ್ಲಿ ಕೇಸರಿ ಧ್ವಜ 300ರಿಂದ 500 ವರ್ಷದಲ್ಲಿ ಹಾರಿಸಬಹುದು ಎಂದು ಹೇಳಿದ್ದೀವಿ ಅಷ್ಟೇ ಎಂದು ಹೇಳಿದ್ದಾರೆ.
Laxmi News 24×7