ಬೆಂಗಳೂರು: ಮದ್ಯ ಸೇವನೆಗಾಗಿ ಹಣ ಸಂಗ್ರಹಿಸಲು ರಾತ್ರೋರಾತ್ರಿ ವಿವಿಧ ಅಂಗಡಿಗಳಲ್ಲಿ ಕಳ್ಳತನ ಮಾಡಿ ನಗದು ದೋಚುತ್ತಿದ್ದ ವ್ಯಕ್ತಿಯನ್ನು ಸುಬ್ರಮಣ್ಯಪುರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಕಾರ್ತಿಕ್ ಎಂಬಾತ ಬಂಧಿತ ಆರೋಪಿ. ಪ್ರಕರಣದ ಮತ್ತೋರ್ವ ಆರೋಪಿ ತಲೆಮರೆಸಿಕೊಂಡಿದ್ದು, ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.ಈ ಆರೋಪಿಗಳು ಹೊಟೇಲ್ಗಳು, ವಿವಿಧ ಮಳಿಗೆಗಳ ಬೀಗ ಹೊಡೆದು ಒಳನುಗ್ಗಿ ಕ್ಷಣಾರ್ಧದಲ್ಲಿ ಅಲ್ಲಿದ್ದ ಹಣ ಎಗರಿಸುತ್ತಿದ್ದರು. ಕಾರ್ತಿಕ್ ಜೊತೆಗೆ ಮತ್ತೊಬ್ಬ ಆರೋಪಿ ಕುಡಿತದ ಚಟಕ್ಕೆ ಬಿದ್ದಿದ್ದ. ಇಬ್ಬರೂ ಸುಲಭವಾಗಿ ಹಣ ಮಾಡುವ ಗೀಳಿಗೆ ಬಿದ್ದಿದ್ದರು. ಕಳ್ಳತನದ ಹಣದಲ್ಲಿ ಮದ್ಯ ಭರಪೂರ ಸೇವಿಸುತ್ತಿದ್ದರು. ಬೈಕ್ ಕದ್ದು ಅದೇ ಬೈಕ್ನಲ್ಲಿ ಸಂಚರಿಸಿ ಅಂಗಡಿಗಳಿಗೆ ನುಗ್ಗಿ ಹಣ, ಬೆಳ್ಳಿಯ ವಸ್ತುಗಳನ್ನು ಹೊತ್ತೊಯ್ಯುತ್ತಿದ್ದರು.