Breaking News

ಎಲ್ಲಿದ್ದೀರಾ ಕಾಮನ್‌ಮ್ಯಾನ್‌ ಸಿಎಂ ಸಾರ್‌.. ನಿಮ್ಮ ಪಕ್ಷದ ಶಾಸಕನಿಂದ ನನಗೆ ಮಗುವಾಗಿದೆ, ನ್ಯಾಯ ಕೊಡ್ಸಿ..

Spread the love

ಕಲಬುರಗಿ: ಶಾಸಕರಿಗೆ ಬ್ಲ್ಯಾಕ್‌ಮೇಲ್‌ ಮಾಡುತ್ತಿರುವ ಪ್ರಕರಣ ಮತ್ತೆ ಸದ್ದು ಮಾಡುತ್ತಿದೆ. ಇದೀಗ ಕಲಬುರಗಿ ಬಿಜೆಪಿ ಶಾಸಕರ ಸರದಿ. ಸಾಮಾಜಿಕ ಜಾಲತಾಣದ ಮೂಲಕ ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದ ಆರೋಪದ ಮೇಲೆ ವಿಧಾನಸೌಧ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

 

‘ನಿಮ್ಮ ಪಕ್ಷದ ಶಾಸಕರಿಂದ ಮೋಸ ಹೋದ ಮಹಿಳೆ ನಾನು. ನಮಗೆ ಮತ್ತು ನಿಮ್ಮ ಶಾಸಕರಿಗೆ ಹುಟ್ಟಿರುವ ಮಗುವಿಗೆ ನ್ಯಾಯಕ್ಕಾಗಿ ಹೋರಾಡಲು ಮುಂದೆ ಬಂದಿದ್ದೇನೆ. ನಿಮ್ಮ ಭೇಟಿ ಮಾಡಲು ಸಾಕಷ್ಟು ಬಾರಿ ಬಂದಿದ್ದು, ಅವಕಾಶ ಸಿಕ್ಕಿಲ್ಲ. ನಾನು ಮುಂದೆ ತೆಗೆದುಕೊಳ್ಳುವ ಪ್ರತಿ ಹೆಜ್ಜೆಗೂ ನಿಮ್ಮ ಸಹಕಾರ ಇರಲಿದೆ ಎಂದು ನಂಬಿದ್ದೇನೆ’ ಎಂದು ಮಹಿಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಫೇಸ್​ಬುಕ್​ ಪೇಜ್​ನಲ್ಲಿ ಬರೆದಿದ್ದಾರೆ.

‘ಎಲ್ಲಿದ್ದೀರಾ ಕಾಮನ್​ ಮ್ಯಾನ್​ ಸಿಎಂ ಸಾರ್​, ಓರ್ವ ಹೆಣ್ಣು ಮಗಳಿಗೆ ನಿಮ್ಮ ಪಕ್ಷದ ಶಾಸಕ ಮಾಡಿರುವ ಮೋಸ ಗಮನಿಸಿ, ನ್ಯಾಯ ಕೊಡಿಸಿ’ ಎಂದೂ ಮನವಿ ಮಾಡಿದ್ದಾರೆ.

ಮಹಿಳೆ ತನಗೆ ಮೋಸವಾಗಿದೆ ಎಂದು ಸುಳ್ಳು ಹೇಳುತ್ತಿದ್ದು, ಆಕೆ ಬ್ಲ್ಯಾಕ್‌ಮೇಲ್‌ ಮಾಡುತ್ತಿರುವುದಾಗಿ ಆರೋಪಿಸುತ್ತಿರುವ ಬಿಜೆಪಿ ಶಾಸಕ ಮಹಿಳೆ ವಿರುದ್ಧ ಕ್ರಮ ಕೈಗೊಳ್ಳುವಂತೆ ವಿಧಾನಸೌಧ ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಪೊಲೀಸರು, ತಮಿಳುನಾಡಿನಲ್ಲಿ ನಾಲ್ವರನ್ನು ವಶಕ್ಕೆ ಪಡೆದು ನಗರಕ್ಕೆ ಕರೆತಂದು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ತಿಳಿದುಬಂದಿದೆ.

ಈ ಮಹಿಳೆ ತನಗೆ ಕೆಲಸ ಮಾಡಿಕೊಡಿ ಎಂದು ಶಾಸಕರ ಬಳಿ ಹೋಗಿದ್ದಾರೆ. ನಂತರ ಅವರ ಮೊಬೈಲ್‌ ಸಂಖ್ಯೆಯನ್ನು ಪಡೆದು ಅವರೊಂದಿಗೆ ಸಂಪರ್ಕದಲ್ಲಿದ್ದಾರೆ. ಶಾಸಕರ ಖಾಸಗಿ ವಿಡಿಯೋ ತೆಗೆದು ಹಣ ಕೊಡುವಂತೆ ಒತ್ತಾಯಿಸಿದ್ದಾಳೆ. ಶಾಸಕರು ಹಣ ಕೊಡಲು ನಿರಾಕರಿಸಿದಾಗ ವಿಡಿಯೋ ಲೀಕ್‌ ಮಾಡುವುದಾಗಿ ಬೆದರಿಕೆ ಹಾಕಿದ್ದಾಳೆ


Spread the love

About Laxminews 24x7

Check Also

ಸಿಎಂ ಹುದ್ದೆಯ ರೇಸಿನಿಂದ ಹಿಂದೆ ಸರಿದವರು

Spread the love ಕಳೆದ ವಾರ ವಿದಾನಮಂಡಲ ಅಧಿವೇಶನ ನಡೆಯುತ್ತಿದ್ದ ಸಂದರ್ಭದಲ್ಲಿ ಕುತೂಹಲಕಾರಿ ವಿಷಯವೊಂದು ಹೊರಬಿತ್ತು.ಅದರ ಪ್ರಕಾರ ಕರ್ನಾಟಕದಲ್ಲಿ ಮತ್ತೊಮ್ಮೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ