ಬೆಂಗಳೂರು: ಮಾಡಿ ಕೊಟ್ಟಂತ ಕೆಲಸದ ಹಣ ಕೊಟ್ಟಿಲ್ಲ ಅಂತ ಇಂಜಿನಿಯರ್ ( Engineer ) ಒಬ್ಬರನ್ನು ಅಪಹರಿಸಿದ್ದಂತ ಆರೋಪಿಗಳನ್ನು 3 ಗಂಟೆಯಲ್ಲಿ ಪತ್ತೆ ಹಚ್ಚಿ, ಸುಖಾಂತ್ಯಗೊಳಿಸಲಾಗಿದೆ. ತ್ವರಿತವಾಗಿ ಆರೋಪಿಗಳನ್ನು ಬಂಧಿಸಿ, ಇಂಜಿನಿಯರ್ ಪತ್ತೆಹಚ್ಚಿದಂತ ಯಲಹಂಕ ಠಾಣೆ ಇನ್ಸ್ ಪೆಕ್ಟರ್ ಹರಿಯಬ್ಬೆ ಸತ್ಯನಾರಾಯಣ ( Yalahanka Police Station Inspection Hariyabbe Sathyanarayan ) ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ಒಡಿಶಾ ಮೂಲಕ ಸಿವಿಲ್ ಇಂಜಿನಿಯರ್ ಮಾನಸ್ ಜೊತೆಗೆ ನಂದ ಹಾಗೂ ಸುನೀಲ್ ಎಂಬುವರು ಕಟ್ಟಡದ ಕಾಂಟ್ರಾಕ್ಟರ್ ಕೆಲಸ ಮಾಡುತ್ತಿದ್ದರು. ನಗರ ವಿವಿಧೆಡೆ ಕಟ್ಟಡಗಳನ್ನು ಗುತ್ತಿಗೆ ಪಡೆದಿದ್ದಂತ ಮೂವರು, ಚೆನ್ನಾಗಿಯೇ ಕೆಲಸ ಮಾಡುತ್ತಿದ್ದರು.
ಇತ್ತೀಚಿಗೆ ಹಣಕಾಸಿನ ವಿಚಾರಕ್ಕಾಗಿ ನಂದ ಮತ್ತು ಮಾನಸ್ ನಡುವೆ ಗಲಾಟೆ ಆಗಿತ್ತು. ಇದೇ ಸಿಟ್ಟಿನಲ್ಲಿದ್ದಂತ ಸಂದರ್ಭದಲ್ಲಿಯೇ, ಇಂಜಿನಿಯರ್ ಮಾನಸ್ ಬಳಿ ಬಾಕಿ 30 ಲಕ್ಷ ಹಣ ಕೇಳೋದಕ್ಕೆ ಹೋದಂತ ನಂದ, ಸುನೀಲ್ ಗೆ ನೀವು ಸರಿಯಾಗಿ ಕೆಲಸ ಮಾಡಿಲ್ಲ. ಬೇರೆಯವರಿಗೆ ಕೊಟ್ಟಿದ್ದರೆ ಚೆನ್ನಾಗಿ ಮಾಡ್ತಾ ಇದ್ದರು ಎಂದು ಬೈದಿದ್ದಾರೆ. ಹಣ ಕೊಡೋದಕ್ಕೂ ನಿರಾಕರಿಸಿದ್ದಾರೆ.
ಈ ಘಟನೆಯಿಂದ ಮತ್ತಷ್ಟು ಸಿಟ್ಟುಗೊಂಡಂತ ನಂದ ಮತ್ತು ಸುನೀಲ್ ಸೇರಿ ನಿನ್ನೆ ಯಲಹಂಕದ ರೈತರ ಸಂತೆ ಬಳಿಯಿಂದಲೇ ಇಂಜಿನಿಯರ್ ಮಾನಸ್ ಅಪಹರಿಸಿ, ಬಾಕಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಮಾನಸ್ ಜೊತೆಗಿದ್ದಂತ ಯುವತಿ ಪೊಲೀಸರಿಗೆ ಅಪಹರಣ ತಕ್ಷಣವೇ ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದರು.