ಸರ್ಕಾರವು ಬಡವರಿಗೆಂದು ಜಾರಿಗೆ ತಂದಿರುವ ವಸತಿ ಯೋಜನೆಯಲ್ಲಿ ಫಲಾನುಭವಿಗಳಿಗೆ ಆದಾಯದ ಮಿತಿಯನ್ನು₹ 32,000ಕ್ಕೆ ನಿಗದಿಪಡಿಸಲಾಗಿದೆ. ಆದರೆ ಇದು ಇಂದಿನ ದಿನಗಳಲ್ಲಿ ಅವೈಜ್ಞಾನಿಕವಾಗಿದ್ದು, ಕಂದಾಯ ಇಲಾಖೆ ಅಧಿಕಾರಿಗಳು ಇಷ್ಟು ಕಡಿಮೆ ಪ್ರಮಾಣದ ಆದಾಯ ಪ್ರಮಾಣಪತ್ರ ನೀಡಲು ನಿರಾಕರಿಸುತ್ತಿದ್ದಾರೆ.
ವಸತಿ ಯೋಜನೆಯಡಿ ನೀಡಬೇಕಾದ ಆದಾಯದ ಮಿತಿಯನ್ನು ಹೆಚ್ಚಿಸುವ ಮೂಲಕ ಸರ್ಕಾರವು ಬಡವರಿಗಾಗಿರುವ ತೊಂದರೆಯನ್ನು ಸರಿಪಡಿಸಬೇಕಾಗಿದೆ.