Breaking News

ಜೇಮ್ಸ್​ ಸಿನಿಮಾಗೆ ಶಿವಣ್ಣ ವಾಯ್ಸ್​;

Spread the love

ಬೆಂಗಳೂರು: ಪುನೀತ್​ ರಾಜ್​ಕುಮಾರ್​ ನಟನೆಯ ಕೊನೇ ಚಿತ್ರ ಜೇಮ್ಸ್​ ಮಾರ್ಚ್​ 17 ಅಪ್ಪು ಬರ್ತಡೆ ಪ್ರಯುಕ್ತ ಬಿಡುಗಡೆಗೆ ಸಿದ್ದವಾಗಿದೆ. ಈ ಸಿನಿಮಾಗೆ ಡಬ್ಬಿಂಗ್​ ಮಾಡುವ ಮುನ್ನವೇ ಪುನೀತ್​ ರಾಜ್​ಕುಮಾರ್​ ನಮ್ಮನ್ನ ಅಗಲಿದ್ರು. ಹಾಗಾಗಿ ಸಿನಿಮಾಗೆ ಡಬ್ಬಿಂಗ್​ ಮಾಡೋದು ಹೇಗೆ ಅನ್ನೋದು ದೊಡ್ಡ ಸಮಸ್ಯೆ ಆಗಿ ಪರಿಣಮಿಸಿತ್ತು.

ಆರಂಭದಲ್ಲಿ ಶಿವರಾಜ್​ಕುಮಾರ್​ ಸಿನಿಮಾಗೆ ಡಬ್ ಮಾಡ್ತಾರೆ ಅನ್ನೋ ಸುದ್ದಿಗಳು ಕೇಳಿಬಂದಿತ್ತಾದರೂ ಪುನೀತ್​ ಅವರ ವಾಯ್ಸೇ ಇದ್ರೆ ಉತ್ತಮ ಅಂತಾ ಜೇಮ್ಸ್​ ಚಿತ್ರ ತಂಡ ಸಾಕಷ್ಟು ಪ್ರಯತ್ನ ಪಟ್ಟಿತ್ತು. ಅದಕ್ಕಾಗಿ ಶೂಟಿಂಗ್​ ವೇಳೆ ಮಾತಾಡಿದ ವಾಯ್ಸನ್ನೇ ಸಿನಿಮಾದಲ್ಲಿ ಬಳಸಲು ಅದರ ಸ್ಯಾಂಪಲ್​ ವಿದೇಶಕ್ಕೂ ಕಳಿಸಲಾಗಿತ್ತು. ಆದರೆ ಅದು ಸಾಧ್ಯವಾಗದ ಕಾರಣ ಸಿನಿಮಾಗೆ ಶಿವಣ್ಣ ಅವರಿಂದ ವಾಯ್ಸ್​ ಡಬ್​ ಮಾಡಿಸಲಾಗಿದೆ.

ಆದರೆ ಪ್ರತಿಯೊಬ್ಬ ಕನ್ನಡಿಗರಿಗೂ ಅಪ್ಪು ವಾಯ್ಸ್​ ಚೆನ್ನಾಗಿ ಗೊತ್ತಿರೋದ್ರಿಂದ ಸಿನಿಮಾದಲ್ಲಿ ಅವರ ಪಾತ್ರಕ್ಕೆ ಬೇರೆಯವರ ವಾಯ್ಸ್​ ಇದ್ದಾಗ ಅದನ್ನ ಜೀರ್ಣಿಸಿಕೊಳ್ಳೋದು ಕಷ್ಟ. ಹಾಗಾಗಿ ಪುನೀತ್​ ರೀತಿ ಮಾತಾಡುವ ಮಿಮಿಕ್ರಿ ಆರ್ಟಿಸ್ಟ್​ಗಳಿಂದ ಡಬ್​ ಮಾಡಿಸಬೇಕಿತ್ತು. ಆಗ ಪುನೀತ್​ ಮಾತಾಡಿದ ರೀತಿಯೇ ಇರುತ್ತಿತ್ತು ಅಂತಾ ಅಭಿಮಾನಿಗಳು ಹೇಳುತ್ತಿದ್ದಾರೆ. ಶಿವಣ್ಣ ಮತ್ತು ಪುನೀತ್​ ವಾಯ್ಸ್​ ಎಲ್ಲರಿಗೂ ಗೊತ್ತಿರೋದ್ರಿಂದ ಸಿನಿಮಾದಲ್ಲಿ ಅದು ಸ್ಪಷ್ಟವಾಗಿ ಗೊತ್ತಾಗಲಿದೆ. ಇದು ಸಹಜವಾಗಿಯೇ ಪುನೀತ್​ ಅಭಿಮಾನಿಗಳಿಗೆ ಬೇಸರ ತರಿಸಿದೆ.


Spread the love

About Laxminews 24x7

Check Also

ಮೈಸೂರಿನಿಂದ ಉದಯಪುರಕ್ಕೆ ತೆರಳುತ್ತಿದ್ದ ರೈಲಿನ ಇಂಜಿನ್​ನಲ್ಲಿ ಬೆಂಕಿ ಕಾಣಿಸಿಕೊಂಡು ಆತಂಕ ಸೃಷ್ಟಿಯಾಗಿತ್ತು.

Spread the loveರಾಮನಗರ: ಬೊಂಬೆನಗರಿ ಚನ್ನಪಟ್ಟಣದ ಬಳಿ ಚಲಿಸುತ್ತಿದ್ದ ರೈಲಿನ ಇಂಜಿನ್​​ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಘಟನೆ ಇಂದು (ಗುರುವಾರ) ನಡೆದಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ