ಉಡುಪಿ: ಕರಾವಳಿಯ ಪೊಲೀಸರು ಇದೀಗ ಉಡುಪಿಯಲ್ಲಿ ಸದ್ದಡಗಿಸುವ ಕೆಲಸ ಮಾಡಿದ್ದಾರೆ. ಅರ್ಥಾತ್, ಕರ್ಕಶವಾಗಿ ಅಥವಾ ನಿಗದಿತ ಮಟ್ಟಕ್ಕಿಂತ ಹೆಚ್ಚಿನ ಸದ್ದು ಬರುವಂತೆ ಮಾರ್ಪಡಿಸಿದ್ದ ಬೈಕ್ ಸೈಲೆನ್ಸರ್‌ಗಳನ್ನು ರಸ್ತೆಯಲ್ಲಿ ರೋಡ್ರೋಲರ್ನಿಂದ ಹೊಸಕಿ ಹಾಕಿಸಿದ್ದಾರೆ.
ಹೌದು.. ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ವಶಪಡಿಸಿಕೊಂಡಿದ್ದ ದ್ವಿಚಕ್ರ ವಾಹನಗಳ ಸೈಲೆನ್ಸರ್‌ಗಳನ್ನು ಸೋಮವಾರ ರೋಡ್‌ರೋಲರ್ ಬಳಸಿ ನಿಷ್ಕ್ರಿಯಗೊಳಿಸಲಾಯಿತು.
ಜ.1ರಿಂದ 25ರವರೆಗೆ ವಿಶೇಷ ಕಾರ್ಯಾಚರಣೆ ಮೂಲಕ 71 ದ್ವಿಚಕ್ರ ವಾಹನಗಳ ವಿರುದ್ಧ ಪ್ರಕರಣ ದಾಖಲಿಸಿ ಕರ್ಕಶ ಶಬ್ದ ಮಾಡುತ್ತಿದ್ದ ಸೈಲೆನ್ಸರ್‌ಗಳನ್ನು ವಶಪಡಿಸಿಕೊಳ್ಳಲಾಗಿತ್ತು. ದಂಡ ವಸೂಲಿ ಮಾಡಿ ವಾಪಸ್ ನೀಡಿದರೆ ಮರು ಬಳಕೆ ಸಾಧ್ಯತೆ ಇರುವುದರಿಂದ ಪೊಲೀಸರು ಸೋಮವಾರ ಆ ಸೈಲೆನ್ಸರ್‌ಗಳನ್ನು ರೋಡ್ ರೋಲರ್ ಬಳಸಿ ಧ್ವಂಸಗೊಳಿಸಿ ನಿಷ್ಕ್ರಿಯಗೊಳಿಸಿದರು.