ಬೆಂಗಳೂರು: ಮಾಜಿ ಸಂಸದ ಎಲ್ ಆರ್ ಶಿವರಾಮೇಗೌಡ ( Ex MP L R Shivaramegowdha ) ದಿವಂಗತ ಹಿರಿಯ ನಾಯಕ ಜಿ ಮಾದೇಗೌಡ ( G Madegowdha ) ಬಗ್ಗೆ ಮಾತನಾಡಿದ್ದಂತ ಆಡಿಯೋ ವೈರಲ್ ಆಗಿತ್ತು. ಶಾಸಕನಾಗೋದಕ್ಕೆ 30 ಕೋಟಿ ಖರ್ಚು ಮಾಡಿದ್ದೆ ಎಂಬುದು ವೈರಲ್ ಆದಂತ ಆಡಿಯೋದಲ್ಲಿತ್ತು.
ಜೊತೆಗೆ ಮಾದೇಗೌಡರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದೂ ಹೊರಬಿದ್ದಿತ್ತು.
ಈ ಬಗ್ಗೆ ಪ್ರತಿಕ್ರಿಯಿಸಿರುವಂತ ಅವರು, ವೈರಲ್ ಆಗಿರುವಂತ ಆಡಿಯೋ ನನ್ನದೇ, ನಾನು ಮಾದೇಗೌಡರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿಲ್ಲ. ಅವರಿಗೆ ಹೆದರಿಯೂ ನಮ್ಮೂರಿನಲ್ಲಿ ಕುಳಿತಿಲ್ಲ. ನಾ ಏನಾದರೂ 420 ಕೆಲಸ ಮಾಡಿದ್ರೇ ದಾಖಲೆ ಸಹಿತ ಬನ್ನಿ ಎಂಬುದಾಗಿ ಕಿಡಿಕಾರಿದರು.