Breaking News

ಸರ್ಕಾರ ಪಾಪರ್ ಬಿದ್ದಿದ್ದರೆ ನಾನೇ ಟೀಚರ್​​ಗೆ ಸಂಬಳ ಕೊಡುತ್ತೀನಿ.: ಹೆಚ್​.ಡಿ.ರೇವಣ್ಣ

Spread the love

ಬೆಂಗಳೂರು: ಖಾಸಗಿ ಕಾಲೇಜಿಗೆ ಅನುಮತಿ ಕೊಡಲು ಸಚಿವರಿಗೆ ಆಗುತ್ತದೆ. ಆದರೆ ಸರ್ಕಾರಿ ಕಾಲೇಜಿಗೆ ಅಲ್ಲ. ಕೆಲವರಿಗೆ 300-400 ಕೋಟಿ ರೂ. ನಿಯಮ ಮೀರಿ ಕೊಟ್ಟಿದ್ದಾರೆ. ಕಾನೂನು ಬಾಹಿರವಾಗಿ ಹಣ ಎಲ್ಲಿ ಕೊಟ್ಟಿದ್ದಾರೆ ಅಂತ ಗೊತ್ತಿದೆ ಎಂದು ಬೆಂಗಳೂರಿನಲ್ಲಿ ಮಾಜಿ ಸಚಿವ ಹೆಚ್​.ಡಿ.ರೇವಣ್ಣ ಆರೋಪ ಮಾಡಿದ್ದಾರೆ.

ಹೊಳೆನರಸೀಪುರ ಕಾಲೇಜಿಗೆ 2 ಸ್ನಾತಕೋತ್ತರ ಕೋರ್ಸ್ ವಿಚಾರಕ್ಕೆ ಸಂಬಂಧಪಟ್ಟಂತೆ ಬೆಂಗಳೂರಿನಲ್ಲಿ ಮಾಜಿ ಸಚಿವ ಹೆಚ್​.ಡಿ.ರೇವಣ್ಣ ಪ್ರತಿಕ್ರಿಯೆ ನೀಡಿದ್ದಾರೆ. ಹೆಚ್​.ಡಿ. ಕುಮಾರಸ್ವಾಮಿ ನೀಡಿದ್ದನ್ನು ಅಶ್ವತ್ಥ್ ನಾರಾಯಣ ರದ್ದು ಮಾಡಿದ್ದಾರೆ. ಅಂದರೆ ನಮಗೆ ಕೊಟ್ಟ ಎಲ್ಲ ಅನುದಾನ ಬಿಜೆಪಿ ಸರ್ಕಾರ ತಡೆ ಹಿಡಿದಿದೆ. ಬಡವರ ಮಕ್ಕಳು ಓದುವ ಕಾಲೇಜಿಗೆ ಯಾಕೆ ರಾಜಕೀಯ? ಉದ್ದೇಶಪೂರ್ವಕವಾಗಿ ಯಾಕೆ ಇದನ್ನು ಸಚಿವರು ತಿರಸ್ಕರಿಸಿದ್ದಾರೆ.

ಸರ್ಕಾರ ಪಾಪರ್ ಬಿದ್ದಿದ್ದರೆ ನಾನೇ ಟೀಚರ್​​ಗೆ ಸಂಬಳ ಕೊಡುತ್ತೀನಿ. ಬೇಕಿದ್ದರೆ ಛಾಪಾ ಕಾಗದದ ಮೇಲೆ ಬರೆದುಕೊಡಲು ಸಿದ್ಧ ಎಂದು ತಿಳಿಸಿದ್ದಾರೆ.


Spread the love

About Laxminews 24x7

Check Also

ರಾಜ್ಯದಲ್ಲಿ ವಿವಿಧ ಬೆಳೆಗಳ ಬಿತ್ತನೆ ನಡೆಯುತ್ತಿದ್ದು, ರಾಸಾಯನಿಕ ಗೊಬ್ಬರದ ಬೇಡಿಕೆ ಹೆಚ್ಚಿದೆ. ಈ ಬಗ್ಗೆ ಕೃಷಿ ಸಚಿವ ಚಲುವರಾಯಸ್ವಾಮಿ ಸ್ಪಷ್ಟನೆ

Spread the loveಮೈಸೂರು: ಪ್ರಸಕ್ತ ಸಾಲಿಗೆ ರಾಸಾಯನಿಕ ಗೊಬ್ಬರದ ಕೊರತೆಯಿಲ್ಲ. ಆದರೆ, ಕೇಂದ್ರ ಸರ್ಕಾರ ಮುಂದಿನ ವರ್ಷದಿಂದ ಯೂರಿಯಾ ಪೂರೈಕೆಯನ್ನು ಶೇ.50ರಷ್ಟು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ