ರಾಮದುರ್ಗ ತಾಲೂಕಿನಲ್ಲಿ ಮೂವರು ಮಕ್ಕಳ ನಿಗೂಢ ಸಾವು ಪ್ರಕರಣದಲ್ಲಿ ಮೂವರು ಕಂದಮ್ಮಗಳ ಸಾವಿನ ಅಸಲಿ ಕಾರಣ ಬೆಳಕಿಗೆ ಬಂದಿದೆ. ಆರೋಗ್ಯ ಸಿಬ್ಬಂದಿ ಯಡವಟ್ಟಿನಿಂದ ಮೂವರು ಕಂದಮ್ಮಗಳು ಬಲಿಯಾಗಿದ್ದು, ಲಸಿಕಾರಣದ ಮಾರ್ಗಸೂಚಿ ಉಲ್ಲಂಘನೆಯೇ ಮಕ್ಕಳ ಸಾವಿಗೆ ಕಾರಣ ಎಂಬ ಆರೋಪ ಕೇಳಿ ಬಂದಿದೆ.ಈ ಬಗ್ಗೆ ಬೆಳಗಾವಿಯಲ್ಲಿ ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಲಸಿಕಾಧಿಕಾರಿ ಡಾ.ಈಶ್ವರ ಗಡಾದ ಅವರು ಜನೆವರಿ 10ರಂದು ಲಸಿಕೆಯನ್ನ ತೆಗೆದುಕೊಂಡು ಹೋಗಿದ್ದ ಸಾಲಹಳ್ಳಿ ಪ್ರಾಥಮಿಕ ಕೇಂದ್ರ ಸಿಬ್ಬಂದಿ, ಅಂದೇ ಮರಳಿ ಸಾಲಹಳ್ಳಿ ಪ್ರಾಥಮಿಕ ಕೇಂದ್ರದಲ್ಲಿ ತಂದು ಇಡಬೇಕಿತ್ತು. ಆದ್ರೆ 11ನೇ ತಾರೀಖು ಮತ್ತು 12ನೇ ತಾರೀಖು ಇಟ್ಟುಕೊಂಡು ಸಿಬ್ಬಂದಿ ಲಸಿಕೆ ಹಾಕಿದ್ದಾರೆ. ಆ ಲಸಿಕೆಯನ್ನ ಕಿಲ್ಲಾ ತೋರಗಲ್ಲ ಗ್ರಾಮದ ಹೋಟೆಲ್‍ನ ಫ್ರೀಜನ್‍ಲ್ಲಿ ಇಟ್ಟಿದ್ದಾರೆ. ಆ ಕೋಲ್ಡಚೈನ್‍ನ್ನು ಸಿಬ್ಬಂದಿ ಸರಿಯಾಗಿ ನಿರ್ವಹಣೆ ಮಾಡಿರಲಿಲ್ಲ. 11ನೇ ತಾರೀಖಿನಿಂದ ರಾಮದುರ್ಗ ತಾಲೂಕಿನ ಮಲ್ಲಾಪುರ ಗ್ರಾಮದಲ್ಲಿ ಲಸಿಕೆ ಮಾಡಿದರು.ಆಗ ಮಲ್ಲಾಪುರ ಗ್ರಾಮದ ಒಂದೂವರೇ ವರ್ಷದ ಮಗು ಚೇತನ ಪೂಜಾರಿ 12ನೇ ತಾರೀಖು ಸಾವನ್ನಪ್ಪಿತ್ತು. 12ನೇ ತಾರೀಖು ಬೋಚಬಾಳ ಗ್ರಾಮದಲ್ಲಿ 21 ಮಕ್ಕಳಿಗೆ ಲಸಿಕೆ ನೀಡಲಾಗಿತ್ತು. ಈ ವೇಳೆ ನಾಲ್ವರು ಮಕ್ಕಳಲ್ಲೂ ಜ್ವರ, ವಾಂತಿ ಬೇಧಿ ಕಾಣಿಸಿಕೊಂಡಿತ್ತು. ಈ ಸಂದರ್ಭದಲ್ಲಿ ಪವಿತ್ರಾ ಹುಲಗೂರ 13ನೇ ತಾರೀಖು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯ ಸಾವನ್ನಪ್ಪಿದ್ದರು. ನಿನ್ನೆ ಮಧು ಕುರಗುಂದಿ ಬೆಳಗಾವಿ ಬಿಮ್ಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿತ್ತು. ಉಳಿದಿಬ್ಬರು ಮಕ್ಕಳು ಚಿಕಿತ್ಸೆ ಪಡೆಯುತ್ತಿದ್ದಾರೆ,ಇಬ್ಬರೂ ಮಕ್ಕಳ ಆರೋಗ್ಯದಲ್ಲಿ ಚೇತರಿಕೆ ಕಾಣಿಸಿಕೊಂಡಿದೆ. ಸಾಲಹಳ್ಳಿ ಎಎನ್‍ಎಂ ಸಲ್ಮಾ ಮಾತ್ ಹಾಗೂ ಸಾಲಹಳ್ಳಿ ಫಾರ್ಮಸಿಸ್ಟ್ ಜಯರಾಜ ಕುಂಬಾರ ನಿರ್ಲಕ್ಷ್ಯ ತೋರಿಸಿರುವುದು ಬೆಳಕಿಗೆ ಬಂದಿದೆ. ಇಂದು ಡಿಎಚ್‍ಒಗೆ ಪ್ರಾಥಮಿಮ ತನಿಖೆ ವರದಿ ನೀಡುವೆ. ನಿರ್ಲಕ್ಷ್ಯ ತೋರಿಸಿದ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮಕೈಗೊಳ್ಳಲಾಗುವುದು ಎಂದರು.
ಇನ್ನು ಪ್ರಾಥಮಿಕ ವರದಿಯಲ್ಲಿ ಚುಚ್ಚುಮದ್ದು ಮದ್ದು ಅಡ್ಡ ಪರಿಣಾಮ ಮತ್ತು ಲಸಿಕಾ ಕೋಲ್ಡ್ ಸ್ಟೋರೇಜ್‍ನ ಮಾರ್ಗಸೂಚಿ ಉಲ್ಲಂಘನೆ ಪತ್ತೆಯಾಗಿದೆ ಎಂದು ಡಾ.ಈಶ್ವರ ಗಡಾದ್ ಸ್ಪಷ್ಟಪಡಿಸಿದ್ದಾರೆ.
Check Also
ಕುಡಿದ ನಶೆಯಲ್ಲಿ ವ್ಯಕ್ತಿಯ ತಲೆ ಮೇಲೆ ಕಲ್ಲು ಹಾಕಿ ಬರ್ಬರ ಕೊಲೆ
Spread the loveಕುಡಿದ ನಶೆಯಲ್ಲಿ ವ್ಯಕ್ತಿಯ ತಲೆ ಮೇಲೆ ಕಲ್ಲು ಹಾಕಿ ಬರ್ಬರ ಕೊಲೆ ತಲೆ ಮೇಲೆ ಕಲ್ಲು ಎತ್ತಿ …