ಈ ಹಿಂದಿನ ಲಾಕ್‌ಡೌನ್ ಹಾಗೂ ಅನಂತರ ನಿರ್ಬಂಧಗಳ ಸಡಿಲಿಕೆ ಬಳಿಕ ಇತ್ತೀಚೆಗಷ್ಟೇ ದೈನಂ ದಿನ ಜನ ಜೀವನ ಸಾಮಾನ್ಯ ಸ್ಥಿತಿಗೆ ತಲುಪಿತ್ತು. ಅಷ್ಟರಲ್ಲಿ ಮತ್ತೊಮ್ಮೆ ಹಿಂದಿನ ಕರಾಳ ಸ್ಥಿತಿಯ ಭೀತಿ ಜನರನ್ನು ಕಾಡಲಾರಂಭಿಸಿದೆ.
ಲಾಕ್‌ಡೌನ್ ಹೊರತಾದ ಇತರ ದಾರಿಗಳ ಮೂಲಕ ಕೊರೊನಾ ನಿಯಂತ್ರಿಸಲು ಸರಕಾರ ಆಲೋಚಿಸಬೇಕು. ಕೊರೊನಾಹೆಚ್ಚಾಯಿತೆಂದು ಮತ್ತೆ ಮತ್ತೆ ನಿರ್ಬಂಧವಿಧಿಸುವುದರಲ್ಲಿ ಅರ್ಥವಿಲ್ಲ ಎಂಬುದು ಕರಾವಳಿಯ ಜನರ ಒಟ್ಟಾರೆಅಭಿಪ್ರಾಯ.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ವಾರ್ಷಿಕ ಜಾತ್ರೆ, ಉತ್ಸವ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ದೀಪಾವಳಿ ಬಳಿಕ ಆರಂಭಗೊಂಡಿದ್ದು, ಮಕರ ಸಂಕ್ರಮಣ ಬಳಿಕ ಹೆಚ್ಚಿನ ಸಂಖ್ಯೆ ಯಲ್ಲಿ ನಡೆಯಲಿದೆ. ಈ ಸಂದರ್ಭ ದಲ್ಲಿಯೇ ಲಾಕ್‌ಡೌನ್ ಗುಮ್ಮ ಎಲ್ಲರಲ್ಲೂ ಆತಂಕ ಮೂಡಿಸಿದೆ.
ಹಲವಾರು ಪ್ರಮುಖ ಕಾರ್ಯಕ್ರಮಗಳು ನಿಗದಿಯಾಗಿದ್ದು, ಅದಕ್ಕೆ ತಕ್ಕಂತೆ ಸಿದ್ಧತೆಗಳೂ ನಡೆದಿವೆ. ಈ ಹಂತದಲ್ಲಿ ಅದಕ್ಕೆಲ್ಲ ಅವಕಾಶ ನಿರಾಕರಣೆಯಾದರೆ ಅದು ಆರ್ಥಿಕತೆಯ ಮೇಲೂ ಅಡ್ಡ ಪರಿಣಾಮ ಬೀರಲಿದೆ.
ಕರಾವಳಿಯ ಆರ್ಥಿಕತೆಗೆ ಪೂರಕವಾಗಿ ರುವ ಪ್ರವಾಸೋದ್ಯಮದ ಮೇಲೆ ವೀಕೆಂಡ್ ಕರ್ಫ್ಯೂಭಾರೀ ಹೊಡೆತ ನೀಡುತ್ತದೆ.
ಕರಾವಳಿಯ ಪ್ರವಾಸಿ ತಾಣಗಳಿಗೆ, ಧಾರ್ಮಿಕ ಕ್ಷೇತ್ರ ಗಳಿಗೆ ವಾರಾಂತ್ಯದಲ್ಲಿ ಹೆಚ್ಚು ಜನರು ಭೇಟಿ ನೀಡುವುದರಿಂದ ವ್ಯಾಪಾರ ವ್ಯವಹಾರಗಳಿಗೆ ಬಲ ಸಿಗುತ್ತಿತ್ತು. ಆದರೆ ಅದೇ ಸಮಯ ಕರ್ಫ್ಯೂ ಹೇರುವುದರಿಂದ ಎಲ್ಲವೂ ಸ್ಥಗಿತವಾಗಲಿದೆ.