ಉಡುಪಿ:ಕನ್ನಡ ಚಿತ್ರರಂಗದ ಮೊಗ್ಗಿನ ಮನಸ್ಸಿನ ಹುಡುಗಿ ಶುಭಾ ಪೂಂಜಾ ಬುಧವಾರ(ಜನವರಿ 05) ಶಿರ್ವದ ನಿವಾಸದಲ್ಲಿ ಸುಮಂತ್ ಜತೆ ಹಸೆಮಣೆ ಏರಿದ್ದಾರೆ. ಕೋವಿಡ್ ಹಿನ್ನೆಲೆಯಲ್ಲಿ ನಿವಾಸದಲ್ಲಿ ಸರಳವಾಗಿ ವಿವಾಹ ಕಾರ್ಯಕ್ರಮ ನೆರವೇರಿರುವುದಾಗಿ ಮೂಲಗಳು ತಿಳಿಸಿವೆ.
ಕಳೆದ ವರ್ಷವೇ ವಿವಾಹವಾಗುವ ವದಂತಿ ಇತ್ತು, ಆದರೆ ಲಾಕ್ ಡೌನ್ ನಿಂದಾಗಿ ವಿವಾಹ ಮುಂದೂಡಲಾಗಿತ್ತು. ಇಂದು ಸುಮಂತ್ ಮತ್ತು ಶುಭಾ ಪೂಂಜಾ ಹಸೆಮಣೆ ಏರುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಶಿರ್ವದ ಮಜಲಬೆಟ್ಟು ಬೀಡುವಿನಲ್ಲಿರುವ ತಮ್ಮ ನಿವಾಸದಲ್ಲಿ ಶುಭ ಪೂಂಜಾ ಸರಳವಾಗಿ ವಿವಾಹವಾಗಿದ್ದಾರೆ. ಈ ಸಂದರ್ಭದಲ್ಲಿ ಮನೆಯರು, ಆತ್ಮೀಯರು, ಸ್ನೇಹಿತರು ಉಪಸ್ಥಿತರಿದ್ದರು ಎಂದು ಮೂಲಗಳು ಹೇಳಿವೆ.