ಬ್ಯಾಂಕಿಂಗ್ ಕ್ಷೇತ್ರ(Banking Sector)ದಲ್ಲಿ ನೌಕರಿ ಮಾಡಬಯಸುತ್ತಿರುವವರಿಗೆ ಇದೊಂದು ಸುವರ್ಣಾವಕಾಶವಾಗಿದೆ. ಡಿಸೆಂಬರ್ 24ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅಭ್ಯರ್ಥಿಗಳು ಆನ್‌ಲೈನ್(Online) ಮೂಲಕ ಅರ್ಜಿ ಹಾಕಬೇಕು. ಜನವರಿ 7, 2022 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.
ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
| ಸಂಸ್ಥೆ | ಬ್ಯಾಂಕ್ ಆಫ್ ಇಂಡಿಯಾ | 
| ಹುದ್ದೆಯ ಹೆಸರು | ಸೆಕ್ಯುರಿಟಿ ಆಫೀಸರ್ | 
| ಒಟ್ಟು ಹುದ್ದೆಗಳು | 25 | 
| ವಿದ್ಯಾರ್ಹತೆ | ಪದವಿ | 
| ವಯೋಮಿತಿ | 25-40 ವರ್ಷ | 
| ವೇತನ | ಮಾಸಿಕ ₹ 48,170-69,810 | 
| ಅರ್ಜಿ ಸಲ್ಲಿಕೆ ವಿಧಾನ | ಆನ್‌ಲೈನ್ | 
| ಅರ್ಜಿ ಸಲ್ಲಿಕೆ ಆರಂಭ ದಿನಾಂಕ | 24/12/2021 | 
| ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 07/01/2022 | 
BOI ಭದ್ರತಾ ಅಧಿಕಾರಿ ನೇಮಕಾತಿ 2022 ವರ್ಗವಾರು ವಿವರಗಳು
SC: 02
ST: 02
OBC: 09
EWS: 01
ಸಾಮಾನ್ಯ: 11
ಒಟ್ಟು: 25
: MGNREGA Recruitment 2022: ನರೇಗಾ ಯೋಜನೆಯಡಿ ಗದಗದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
ಅರ್ಹತಾ ಮಾನದಂಡ:
ಅಭ್ಯರ್ಥಿಯು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಪದವಿ ಅಥವಾ ತತ್ಸಮಾನ ಪದವಿಯನ್ನು ಪಡೆದಿರಬೇಕು ಮತ್ತು ಅಭ್ಯರ್ಥಿಯು ಸೇನೆ/ನೌಕಾಪಡೆ/ವಾಯುಸೇನೆಯಲ್ಲಿ ಕನಿಷ್ಠ 05 ವರ್ಷಗಳ ಕಮಿಷನ್ಡ್ ಸೇವೆಯನ್ನು ಹೊಂದಿರುವ ಅಧಿಕಾರಿಯಾಗಿರಬೇಕು.
ವಯೋಮಿತಿ:
BOI ಭದ್ರತಾ ಅಧಿಕಾರಿ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಯ ವಯಸ್ಸು 25-40 ವರ್ಷದೊಳಗಿರಬೇಕು.
ಅನುಭವ:
ಅಭ್ಯರ್ಥಿಯು ಸೇನೆ/ನೌಕಾಪಡೆ/ವಾಯುಸೇನೆಯಲ್ಲಿ ಕನಿಷ್ಠ ಐದು ವರ್ಷಗಳ ಕಮಿಷನ್ಡ್ ಸೇವೆಯನ್ನು ಹೊಂದಿರುವ ಅಧಿಕಾರಿಯಾಗಿರಬೇಕು ಅಥವಾ ಅಭ್ಯರ್ಥಿಯು ಕನಿಷ್ಠ ಉಪ ಪೊಲೀಸ್ ಅಧೀಕ್ಷಕ ಶ್ರೇಣಿಗಿಂತ ಕಡಿಮೆಯಿಲ್ಲದ ಪೊಲೀಸ್ ಅಧಿಕಾರಿಯಾಗಿ ಐದು ವರ್ಷಗಳ ಸೇವೆ ಸಲ್ಲಿಸಿರಬೇಕು. ಅಥವಾ ಅಭ್ಯರ್ಥಿಯು ಅರೆಸೈನಿಕ ಪಡೆಗಳಲ್ಲಿ ಕನಿಷ್ಠ 5 ವರ್ಷಗಳ ಸೇವೆಯೊಂದಿಗೆ ಸಹಾಯಕ ಕಮಾಂಡೆಂಟ್‌ಗೆ ಸಮನಾದ ಶ್ರೇಣಿಯನ್ನು ಹೊಂದಿರಬೇಕು.
ಅರ್ಜಿ ಶುಲ್ಕ:
ಆನ್‌ಲೈನ್ ನೆಟ್ ಬ್ಯಾಂಕಿಂಗ್/ಡೆಬಿಟ್ ಕಾರ್ಡ್/ಕ್ರೆಡಿಟ್ ಕಾರ್ಡ್ ಇತ್ಯಾದಿಗಳ ಮೂಲಕ ಅರ್ಜಿ ಶುಲ್ಕವನ್ನು ಪಾವತಿಸಬೇಕು.
SC/ST ಅಭ್ಯರ್ಥಿಗಳಿಗೆ- 175 ರೂ.
ಸಾಮಾನ್ಯ/EWS/OBC ಅಭ್ಯರ್ಥಿಗಳಿಗೆ- 850 ರೂ. ಅರ್ಜಿ ಶುಲ್ಕ
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 24/12/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 07/01/2022
:KSP Recruitment 2022: ಕರ್ನಾಟಕ ರಾಜ್ಯ ಪೊಲೀಸ್ ನೇಮಕಾತಿ, ತಿಂಗಳಿಗೆ ₹ 78,000 ಸಂಬಳ, PG ಆದವರಿಗೆ ಅವಕಾಶ
ಅರ್ಜಿ ಸಲ್ಲಿಸುವುದು ಹೇಗೆ?
ಆಸಕ್ತ ಅಭ್ಯರ್ಥಿಗಳು ವೆಬ್‌ಸೈಟ್ bankofindia.co.in ಮೂಲಕ ಜನವರಿ 07, 2022 ರವರೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ಬೇರೆ ಬೇರೆ ಉದ್ಯೋಗ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.
ಆಯ್ಕೆ ಪ್ರಕ್ರಿಯೆ:
ಆಯ್ಕೆಯು ವೈಯಕ್ತಿಕ ಸಂದರ್ಶನ ಮತ್ತು/ಅಥವಾ ಗುಂಪು ಚರ್ಚೆಯ ಆಧಾರದ ಮೇಲೆ ಇರುತ್ತದೆ.
Laxmi News 24×7