Breaking News

ಶಾಲೆಗೆ ದಿಢೀರ್ ಭೇಟಿ ನೀಡಿದ ಶಾಸಕ : ಗೈರಾದ ಶಿಕ್ಷಕರಿಗೆ ನೋಟಿಸ್

Spread the love

ಕುಷ್ಟಗಿ: ಶಿಕ್ಷಕರು ಸಮಯ ಪಾಲನೆ ಮಾಡದ ಹಿನ್ನೆಲೆಯಲ್ಲಿ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ವಿವಿಧ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲಿಸಿ ಗೈರಾದ ಶಿಕ್ಷಕರಿಗೆ ನೋಟೀಸ್ ಜಾರಿ ಮಾಡಲು ಕ್ಷೇತ್ರ ಶಿಕ್ಷಣಾಧಿಕಾರಿಗೆ ಸೂಚಿಸಿದರು.

ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ, ಕುಷ್ಟಗಿ ಪಟ್ಟಣದ 3ನೇ ವಾರ್ಡ್ ನ ಗೌರಿ ನಗರ, ನೆರೆಬೆಂಚಿ, ಕುರಬನಾಳ ದಿಢೀರ್ ಭೇಟಿ ನೀಡಿ ಮಕ್ಕಳ ಹಾಜರಿ, ಶಿಕ್ಷಕರ ಹಾಜರಿ ದಾಖಲೆ ಪರಿಶೀಲಿಸಿದರಲ್ಲದೇ ಶಾಲೆಯ ಕುಂಧು ಕೊರತೆಗಳ ಬಗ್ಗೆ ವಿಚಾರಿಸಿದರು.

ಗೌರಿ ನಗರದ ಶಾಲೆಯಲ್ಲಿ ಶಿಕ್ಷಕರೊಬ್ಬರು ಗೈರಾಗಿದ್ದರಿಂದ ಸದರಿ ಶಿಕ್ಷಕರಿಗೆ ನೋಟೀಸ್ ಜಾರಿ ಮಾಡಲು, ಕ್ಷೇತ್ರ ಶಿಕ್ಷಣಾಧಿಕಾರಿಗೆ ಮೋಬೈಲ್ ನಲ್ಲಿ ಸಂಪಕರ್ಿಸಿ ಸೂಚಿಸಿದರು. ಇದೇ ವೇಳೆ ಮಕ್ಕಳಿಗೆ ಗುಣಮಟ್ಟದ ಬಿಸಿಊಟ, ಕ್ಷೀರ ಭಾಗ್ಯ, ಶಿಕ್ಷಕರು ಗುಣಮಟ್ಟದ ಶಿಕ್ಷಣದ ಬಗ್ಗೆ ವಿಚಾರಿಸಿದರು. ಶಾಲೆಗೆ ಅಗತ್ಯವಿರುವ ಮೂಲಸೌಕರ್ಯಗಳ ಬಗ್ಗೆ ವಿಚಾರಿಸಿದರಲ್ಲದೇ ಶಿಕ್ಷಕರು ನಿಯಮಿತವಾಗಿ ಶಾಲೆಗೆ ಹಾಜರಾಗಿರಲು ಸೂಚಿಸಿದರು. ಇದೇ ವೇಳೆ ತಾ.ಪಂ. ಇಓ ಡಾ. ಜಯರಾಮ್ ಚೌವ್ಹಾಣ ಹಾಜರಿದ್ದರು


Spread the love

About Laxminews 24x7

Check Also

ಕೊಪ್ಪಳದ ಗಾಂಜಾ ಪ್ರಕರಣ ಶಿಫ್ಟ್ ವಿಚಾರ: ಗಂಗಾವತಿಗೆ ಮಸಿ ಬಳಿಯುವ ಯತ್ನ ಎಂದ ಜನಾರ್ದನ ರೆಡ್ಡಿ

Spread the loveಗಂಗಾವತಿ: ರಾಮಾಯಣದಂತ ಪೌರಾಣಿಕ ಹಿನ್ನೆಲೆ, ವಿಜಯನಗರದ ಐತಿಹಾಸಿಕ ಹಿನ್ನೆಲೆಯ ನಂಟು ಹೊಂದಿರುವ ಗಂಗಾವತಿಯಂಥ ಕ್ಷೇತ್ರಕ್ಕೆ ಪೊಲೀಸ್ ಮತ್ತು ಅಬಕಾರಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ