ಬೆಳಗಾವಿ: ಹಿಂದೆ ಬ್ರಿಟಿಷರು ಮಾಡುತ್ತಿದ್ದ ಕೆಲಸವನ್ನು, ಇಂದು ಕಾಂಗ್ರೆಸ್ ಪಕ್ಷದವರು ಮಾಡ್ತಿದ್ದಾರೆ ಎಂದು ಬಿಜೆಪಿ ಮುಖಂಡ ಧನಂಜಯ್ ಜಾದವ್ ಹೇಳಿದ್ದಾರೆ.
ಎಲ್ಲಿ ಧ್ವಜ ಹಚ್ಚಿದ್ರೆ ಬೆಂಕಿ ಹೊತ್ತುತ್ತೆ, ಯಾವ ಮೂರ್ತಿ ಇಟ್ರೆ ಬೆಂಕಿ ಹೊತ್ತುತ್ತೆ ಅನ್ನೋದು ಕಾಂಗ್ರೆಸ್ ಅವರಿಗೆ ಚೆನ್ನಾಗಿ ಗೊತ್ತು. ಮಹಾರಾಷ್ಟ್ರದಲ್ಲಿ ಕಾಂಗ್ರೆಸ್, ಶಿವಸೇನೆ ಕನ್ನಡ ಧ್ವಜಕ್ಕೆ ಬೆಂಕಿ ಇಟ್ಟಿತು. ಬೆಂಗಳೂರಲ್ಲಿ ಜಮೀರ್ ಅಹ್ಮದ್ ಬಲಗೈ ಬಂಟ ನವೀನ್ ಗೌಡ ಛತ್ರಪತಿ ಶಿವಾಜಿ ಮಹಾರಾಜರ್ ಮೂರ್ತಿಗೆ ಕಪ್ಪು ಮಸಿ ಬಳಿದ ಎಂದು ವಿವರಿಸಿದರು.
ಮಹಾರಾಷ್ಟ್ರದಲ್ಲಿ ಕರ್ನಾಟಕ ಧ್ವಜ ಸುಟ್ಟವರು ಕಾಂಗ್ರೆಸ್ ಪಕ್ಷದವರು ಎಂದು ವಾಗ್ದಾಳಿ ಮಾಡಿದ ಅವರು, ಕೆಲ ರಾಜಕಾರಿಣಿಗಳು ಇದನ್ನ ತಮ್ಮ ಸ್ವಾರ್ಥಕ್ಕೆ ಬಳಸಿ ಕೊಂಡು ಕನ್ನಡ ಹಾಗೂ ಮರಾಠಿ ಭಾಷೆ ಮಧ್ಯೆ ಜಗಳ ಹಚ್ಚಿದ್ದಾರೆ. ಇವರಿಗೆ ನಾಚಿಕೆ ಬರಬೇಕಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.