ಯಾದಗಿರಿ: ತರಕಾರಿ ಮಾರುಕಟ್ಟೆಗಳಲ್ಲಿ ಟೊಮೆಟೊ ದರ ಇಳಿಕೆಯಾಗಿದ್ದರೆ, ಬದನೆಕಾಯಿ ಬೆಲೆ ಏರಿಕೆಯಾಗಿದೆ.
ಸೊಪ್ಪುಗಳ ದರ ಕಳೆದ ವಾರದಂತೆ ಯಥಾಸ್ಥಿತಿ ಇದ್ದರೆ, ತರಕಾರಿ ದರ ಮಾತ್ರ ತುಸು ಏರಿಕೆಯಾಗಿದೆ.
ಟೊಮೆಟೊ ದರ ಕೆಜಿಗೆ ಸಗಟುನಲ್ಲಿ ₹30 ಇದ್ದರೆ ಚಿಲ್ಲರೆ ದರ ₹40 ಇದೆ.
ಕಳೆದ ವಾರಕ್ಕಿಂತ ₹10 ಇಳಿಕೆಯಾಗಿದೆ. ಆದರೆ, ಬದನೆಕಾಯಿ ದರ ಕಳೆದ ವಾರಕ್ಕಿಂತ ₹30 ಏರಿಕೆಯಾಗಿ ಕೆಜಿಗೆ ₹120 ಚಿಲ್ಲರೆ ದರ ಇದೆ.
ಬೆಂಡೆ, ದೊಣ್ಣೆಮೆಣಸಿನಕಾಯಿ, ಎಲೆಕೋಸು, ಹೂಕೋಸು, ಚವಳೆಕಾಯಿ ಸೇರಿದಂತೆ ಉಳಿದ ತರಕಾರಿ ದರವೂ ಕೆಜಿಗೆ ₹5ರಿಂದ 10 ಏರಿಕೆಯಾಗಿದೆ. ಕರಿಬೇವು ಕೆಜಿ ₹120 ದರ ಇದೆ. ಶುಂಠಿ ಒಂದು ಕೆಜಿ ₹60, ಬೆಳ್ಳುಳ್ಳಿ ₹80 ಇದೆ.
ಹಣ್ಣುಗಳ ದರ: ನಗರದ ವಿವಿಧ ಕಡೆ ಈಗ ಪೇರಲ ಹಣ್ಣು ತಳ್ಳುಗಾಡಿಗಳಲ್ಲಿ ಇಟ್ಟು ಮಾರಾಟ ಮಾಡಲಾಗುತ್ತಿದೆ. ಕೆಜಿಗೆ ₹40 ದರ ಇದ್ದು, ಹೆಚ್ಚು ಬೇಡಿಕೆ ಬಂದಿದೆ. ಹಣ್ಣುಗಳ ಅಂಗಡಿಗಳಲ್ಲಿಯೂ ಪೇರಲ ಹೆಚ್ಚು ಕಾಣ ಸಿಗುತ್ತವೆ.
ಸೊಪ್ಪುಗಳ ದರ: ಈ ವಾರ ಸೊಪ್ಪುಗಳ ದರ ಯಥಾಸ್ಥಿತಿ ದರ ಇದೆ. ಮೆಂತೆ ಸೊಪ್ಪು ದೊಡ್ಡ ಗಾತ್ರದ್ದು ₹20ಕ್ಕೆ ಒಂದು, ಪಾಲಕ್ ಸೊಪ್ಪು ₹20ಕ್ಕೆ ಮೂರು, ಪುಂಡಿಪಲ್ಯೆ ಒಂದು ಕಟ್ಟು ₹5, ರಾಜಗಿರಿ ಸೊಪ್ಪು ₹5ಗೆ ಒಂದು ಕಟ್ಟು, ಸಬ್ಬಸಿಗಿ ಒಂದು ಕಟ್ಟು ₹5, ಕೊತಂಬರಿ ಸೊಪ್ಪು ಒಂದು ಕಟ್ಟು ₹15-20, ಪುದೀನಾ ಒಂದು ಕಟ್ಟು
₹15-20 ದರ ಇದೆ.
***
ತರಕಾರಿ; ದರ (ಪ್ರತಿ ಕೆ.ಜಿಗೆ ₹ಗಳಲ್ಲಿ)
ಟೊಮೆಟೊ;30-40
ಬದನೆಕಾಯಿ;120-100
ಬೆಂಡೆಕಾಯಿ;70-80
ದೊಣ್ಣೆಮೆಣಸಿನಕಾಯಿ;80-90
ಆಲೂಗಡ್ಡೆ;30-35
ಈರುಳ್ಳಿ;40-35
ಎಲೆಕೋಸು;60-70
ಹೂಕೋಸು; 70-80
ಚವಳೆಕಾಯಿ;70-80
ಬೀನ್ಸ್; 70-80
ಗಜ್ಜರಿ;60-70
ಸೌತೆಕಾಯಿ; 40-50
ಮೂಲಂಗಿ;40-50
ಮೆಣಸಿನಕಾಯಿ;50-40
ಸೋರೆಕಾಯಿ;60-50
ಬಿಟ್‌ರೂಟ್;50-60
ಹೀರೆಕಾಯಿ;70-80
ಹಾಗಲಕಾಯಿ;70-80
ತೊಂಡೆಕಾಯಿ;50-60
ಅವರೆಕಾಯಿ;70-80
***
ಕಳೆದ ವಾರಕ್ಕಿಂತ ಈ ವಾರ ತರಕಾರಿ ಬೆಲೆಯಲ್ಲಿ ಹೆಚ್ಚಳವಾಗಿದೆ. ಸಗಟು ಮಾರಕಟ್ಟೆಯಲ್ಲಿ ಅಧಿಕ ದರವಿದ್ದರಿಂದ ಚಿಲ್ಲರೆ ಮಾರಾಟ ದರ ಹೆಚ್ಚಳವಾಗಿದೆ
ಮುಬಾರಕ್ ಅಹಮದ್, ತರಕಾರಿ ವ್ಯಾಪಾರಿ
***
ಕೆಲ ತರಕಾರಿ ಬೆಲೆ ಮಾತ್ರ ಇಳಿಕೆಯಾಗಿದೆ. ಉಳಿದ ತರಕಾರಿ ದರವೂ ಏರಿಕೆಯಾಗಿದ್ದು, ಗ್ರಾಹಕರಿಗೆ ಹೊರೆಯಾಗಿದೆ ಮಹೇಶ ಕುಮಾರ, ಗ್ರಾಹಕ