Breaking News

ಶಾಲೆಗಳಲ್ಲಿ ʼಮೊಟ್ಟೆ ವಿತರಣೆʼ ಆದೇಶ ವಾಪಸ್‌ ತೆಗೆದುಕೊಳ್ಳಿ, ಇಲ್ಲವಾದ್ರೆ ಹೋರಾಟ ಎದುರಿಸಿ : ಸರ್ಕಾರಕ್ಕೆ ಚನ್ನಬಸವಾನಂದ ಶ್ರೀ ಎಚ್ಚರಿಕೆ

Spread the love

ಬೆಂಗಳೂರು : ಸರ್ಕಾರಿ ಶಾಲೆಗಳಲ್ಲಿ ಮೊಟ್ಟೆ ನೀಡುವ ಯೋಜನೆಗೆ ಮಹಾಸಭಾ ಬಸವ ಮಂಟಪದ ಚನ್ನಬಸವಾನಂದ ಶ್ರೀ ವಿರೋಧ ವ್ಯಕ್ತ ಪಡಿಸಿದ್ದು, ರಾಜ್ಯ ಸರ್ಕಾರ ಕೂಡಲೇ ಮೊಟ್ಟೆ ವಿತರಣೆ ಆದೇಶ ವಾಪಸ್‌ ಪಡೆಯಬೇಕು ಎಂದು ಆಗ್ರಹಿಸಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಚನ್ನಬಸವಾನಂದ ಶ್ರೀಗಳು, ಸರ್ಕಾರ ಮತ್ತು ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ಮಕ್ಕಳಿಗೆ ಮೊಟ್ಟೆ ನೀಡುವ ಯೋಜನೆಯನ್ನ ರಾಜ್ಯ ಸರ್ಕಾರ ಕೂಡಲೇ ಹಿಂತೆಗೆದುಕೊಳ್ಳಬೇಕು.

ಮೊಟ್ಟೆ ಪೂರ್ಣವಾಗಿ ಮಾಂಸಹಾರವಾಗಿದ್ದು, ಶಾಲಾ ಮಟ್ಟದಿಂದ್ಲೆ ಮಕ್ಕಳಿಗೆ ಈ ಪದ್ಧತಿ ಕಲಿಸಬಾರದು. ಮಕ್ಕಳಿಗೆ ಮೊಟ್ಟೆ ಬದಲಾಗಿ ದ್ವಿಗಳ ಧಾನ್ಯಗಳನ್ನ ನೀಡಬೇಕು. ಇನ್ನು ಈ ನಿರ್ಧಾರದಿಂದ ಸರ್ಕಾರ ಹಿಂದೆ ಸರಿಯದಿದ್ರೆ, ಬಸವ ಪೀಠದಿಂದ ಹೋರಾಟದ ಬಗ್ಗೆ ನಿರ್ಧಾರ ಮಾಡ್ತೀವಿ ಎಂದು ಎಚ್ಚರಿಕೆ ನೀಡಿದ್ದಾರೆ.

ಇನ್ನು ಈ ಬಗ್ಗೆ ಉಡುಪಿಯಲ್ಲಿ ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟಾ ಶ್ರೀನಿವಾಸ್‌ ಪೂಜಾರಿ ಪ್ರತಿಕ್ರಿಸಿದ್ದು, ‘ಮಕ್ಕಳಿಗೆ ಮೊಟ್ಟೆ ನೀಡುವ ಯೋಜನೆ ಮುಂದುವರೆಯಲಿದೆ. ಈ ಬಗ್ಗೆ ನಮ್ಮ ನಡುವೆ ಯಾವುದೇ ಗೊಂದಲ ಇಲ್ಲ’ ಎಂದಿದ್ದಾರೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ