Breaking News

ಪೆಟ್ರೋಲ್ ಬಂಕ್‌ ಮಾದರಿಯಲ್ಲಿ ಬ್ಯಾಟರಿ ಬದಲಾವಣೆ ನಿಲ್ದಾಣಗಳ ಸ್ಥಾಪನೆಗೆ ಮುಂದಾದ ಬೌನ್ಸ್

Spread the love

ಎಲೆಕ್ಟ್ರಿಕ್ ಸ್ಕೂಟರ್ ಬಾಡಿಗೆ ನೀಡುವ ಸ್ಟಾರ್ಟ್‌ಅಪ್ ಬೌನ್ಸ್ ತನ್ನದೇ ನಿರ್ಮಾಣದ ಮೊದಲ ಇ-ಸ್ಕೂಟರ್‌ ಆದ ಇನ್ಫಿನಿಟಿಯನ್ನು ಮುಂದಿನ ತಿಂಗಳು ಬಿಡುಗಡೆ ಮಾಡಲಿದೆ. ಪಾರ್ಕಿಂಗ್ ಪರಿಹಾರಗಳನ್ನು ನೀಡುವ ಪ್ಲಾಟ್‌ಫಾರಂ ಪಾರ್ಕ್+ ಜೊತೆಗೆ ಸಹಯೋಗ ಮಾಡಿಕೊಂಡಿರುವ ಬೌನ್ಸ್‌, 10ಕ್ಕಿಂತ ಹೆಚ್ಚು ನಗರಗಳ 3,500‌ ರಷ್ಟು ಸ್ಥಳಗಳಲ್ಲಿ ಬ್ಯಾಟರಿ ಬದಲಾವಣೆಗೆ ಮೂಲಸೌಕರ್ಯ ಅಭಿವೃದ್ಧಿಪಡಿಸಲು ಮುಂದಾಗಿದೆ.

 

ಈ ಸ್ಮಾರ್ಟ್ ಸವಲತ್ತು ವಸತಿ ಸಮುದಾಯಗಳು, ಪಾರ್ಕಿಂಗ್ ನಿಲ್ದಾಣಗಳು, ಮಾಲ್‌ಗಳು, ಕಾರ್ಪೋರೇಟ್ ಕಚೇರಿಗಳು ಸೇರಿದಂತೆ ಜನಸಮೂಹ ಸೇರುವ ಅನೇಕ ಜಾಗಗಳಲ್ಲಿ ಲಭ್ಯವಿರುವಂತೆ ಮಾಡಲು ಬೌನ್ಸ್‌ ಸಿದ್ಧತೆ ಮಾಡಿಕೊಳ್ಳುತ್ತಿದೆ. ಇಂಥ ಜಾಗಗಳನ್ನು ಲೊಕೇಟ್ ಮಾಡಲು ಬೌನ್ಸ್‌ ಅಪ್ಲಿಕೇಶನ್ ಅಥವಾ ಪಾರ್ಕ್+ ಅಪ್ಲಿಕೇಶನ್ ಉಪಯೋಗಕ್ಕೆ ಬರಲಿದೆ ಎಂದು ಕಂಪನಿ ತಿಳಿಸಿದೆ.

ಬ್ಯಾಟರಿ ಸ್ವಾಪಿಂಗ್ ನಿಲ್ದಾಣಗಳು ಇಂಧನ ಭರ್ತಿ ನಿಲ್ದಾಣಗಳಂತೆ ಕೆಲಸ ಮಾಡಲಿವೆ. ಬೌನ್ಸ್ ಬ್ಯಾಟರಿ ನಿಲ್ದಾಣಗಳಲ್ಲಿ ಚಾರ್ಜ್ ಆಗಿ ಸಿದ್ಧವಿರುವ ಬ್ಯಾಟರಿಗಳು ಲಭ್ಯವಿರಲಿದ್ದು, ಗ್ರಾಹಕರು ಇವುಗಳನ್ನು ತಮ್ಮಲ್ಲಿರುವ ಬ್ಯಾಟರಿಗಳೊಂದಿಗೆ ಸುಲಭವಾಗಿ ಬದಲಿಸಿಕೊಳ್ಳಬಹುದು. ಈ ವ್ಯವಸ್ಥೆಯಿಂದ ಗ್ರಾಹಕರು ತಮ್ಮ ಬ್ಯಾಟರಿಗಳು ಚಾರ್ಜ್ ಆಗಲು ಕಾಯಬೇಕಾದ ಅಗತ್ಯವಿರುವುದಿಲ್ಲ ಎಂದು ಬೌನ್ಸ್ ತಿಳಿಸಿದೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ