ಹಾವೇರಿ: ಜಿಲ್ಲೆಯ ಬ್ಯಾಡಗಿಯ ವಿನಾಯಕ ನಗರದಲ್ಲಿ ಅಕ್ಕ- ತಮ್ಮ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
16 ವರ್ಷದ ನಾಗರಾಜ ಚಲವಾದಿಗೆ ಅಕ್ಕ ಭಾಗ್ಯಶ್ರೀ ಚೆನ್ನಾಗಿ ಓದು ಶಾಲೆಗೆ ಹೋಗು ಎಂದು ಬುದ್ದಿ ಹೇಳಿದ್ದಾಳೆ. ಇದರಿಂದ ಮನನೊಂದ ನಾಗರಾಜ ಮನೆಯ ಮೇಲಿನ ಕೊಠಡಿಯಲ್ಲಿ ನೇಣಿಗೆ ಶರಣಾಗಿದ್ದಾನೆ. ತಮ್ಮನ ಸಾವಿನ ಸುದ್ದಿ ತಿಳಿದು ಮನೆಗೆ ಬಂದ ಅಕ್ಕ 18 ವರ್ಷದ ಭಾಗ್ಯಶ್ರಿ ಮನನೊಂದು ನೇಣಿಗೆ ಶರಣಾಗಿದ್ದಾಳೆ. ಬ್ಯಾಡಗಿ ಪಟ್ಟಣದ ವಿನಾಯಕ ನಗರದಲ್ಲಿ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಮರಣೋತ್ತರ ಪರೀಕ್ಷೆ ನಂತರ ಕುಟುಂಬಸ್ಥರು ಅಕ್ಕ ತಮ್ಮನ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಬೆಳಗ್ಗೆ ಹತ್ತು ಗಂಟೆಗೆ ಮೃತಪಟ್ಟಿದ್ದ ನಾಗರಾಜ ಸುದ್ದಿ ಕೇಳಿ ಅಕ್ಕ 12 ಗಂಟೆ ವೇಳೆಗೆ ತಮ್ಮನ ಹಾದಿಯನ್ನೇ ತುಳಿದಿದ್ದಾಳೆ. ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Laxmi News 24×7