Breaking News

ಇನ್​ಸ್ಟಾಗ್ರಾಂ ರೀಲ್ಸ್​ ಚಟಕ್ಕೆ ಬಿದ್ದು ಪ್ರಾಣವನ್ನೇ ಕಳೆದುಕೊಂಡ ಯುವಕ..! ಸ್ನೇಹಿತನ ಮೊಬೈಲ್​ನಲ್ಲಿ ರೆಕಾರ್ಡ್​ ಆಯ್ತು ಭಯಾನಕ ದೃಶ್ಯ

Spread the love

ಸೋಶಿಯಲ್​ ಮೀಡಿಯಾದಲ್ಲಿ ವಿಡಿಯೋಗಳನ್ನು ಹರಿಬಿಡುವ ಹುಚ್ಚು ಹೊಂದಿದ್ದ ಯುವಕ ಇದಕ್ಕಾಗಿ ಜೀವವನ್ನೇ ತೆತ್ತ ದಾರುಣ ಘಟನೆಯು ಮಧ್ಯ ಪ್ರದೇಶ ಹೋಶಂಗಾಬಾದ್​ನಲ್ಲಿ ನಡೆದಿದೆ.ಸಂಜು ಚೌರಿ ಎಂಬಾತ ತನ್ನ ಗೆಳೆಯನ ಜೊತೆಯಲ್ಲಿ ವಿಡಿಯೋ ರೆಕಾರ್ಡ್​ ಮಾಡಲೆಂದು ರೈಲ್ವೆ ಹಳಿ ಬಳಿ ತೆರಳಿದ್ದ.

ರೈಲ್ವೆ ಬರುತ್ತಿದ್ದ ವೇಳೆ ತಾನು ನಡೆದುಕೊಂಡು ಬರುತ್ತಿರುವ ಹಾಗೆ ವಿಡಿಯೋ ಚಿತ್ರೀಕರಿಸಿ ಅದನ್ನು ಸೋಶಿಯಲ್​ ಮೀಡಿಯಾದಲ್ಲಿ ಹರಿಬಿಡುವುದು ಆತನ ಉದ್ದೇಶವಾಗಿತ್ತು.

ಆದರೆ ವಿಧಿಯ ಆಟ ಬೇರೆಯದ್ದೇ ಇತ್ತು. ರೈಲು ಹಳಿಯ ಪಕ್ಕದಲ್ಲೇ ಇದ್ದ ಸಂಜುಗೆ ಹಿಂಬದಿಯಿಂದ ರೈಲು ಬಂದು ಬಡಿದಿದೆ. ಪರಿಣಾಮ ಗಂಭೀರ ಗಾಯಗೊಂಡಿದ್ದ ಸಂಜುವನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಆತ ಸಾವನ್ನಪ್ಪಿದ್ದಾನೆ. ಈ ದುರಂತದ ಸಂಪೂರ್ಣ ದೃಶ್ಯವನ್ನು ಜೊತೆಯಲ್ಲಿದ್ದ ಗೆಳೆಯ ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದಾನೆ.

ಪಂಜಾರಾ ಕಾಲೋನಿ ನಿವಾಸಿಯಾಗಿದ್ದ ಸಂಜು ಚೌರೆ ಇನ್​ಸ್ಟಾಗ್ರಾಂ ರೀಲ್ಸ್​ ಮಾಡುವ ಹವ್ಯಾಸ ಹೊಂದಿದ್ದ ಎನ್ನಲಾಗಿದೆ. ಹೀಗಾಗಿ ಭಾನುವಾರ ಕೂಡ ರೀಲ್ಸ್​ ಮಾಡಲು ಹೋಗಿ ಜೀವ ತೆತ್ತಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.


Spread the love

About Laxminews 24x7

Check Also

ಡಿಸಿ ಮುಂದೆ ಅಳಲು ತೋಡಿಕೊಂಡ ನಿರಾಶ್ರಿತರು

Spread the loveಬೆಳಗಾವಿ: ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಘಟಪ್ರಭಾ ನದಿ ಉಕ್ಕಿ ಹರಿಯುತ್ತಿದೆ. ಇದರ ಪರಿಣಾಮ ಗೋಕಾಕ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ