ಉಪೇಂದ್ರ ನಟಿಸಿರುವ ಬುದ್ದಿವಂತ ಸಿನಿಮಾ ಮಾದರಿಯಲ್ಲಿ ಇಲ್ಲೊಬ್ಬ ರೌಡಿ, ಮದುವೆ ನಾಟಕವಾಡಿ ಆಂಟಿಗಳ ಜೊತೆ ಆಟ ಆಡಿಕೊಂಡಿದ್ದ. ಈಗ ಆತನನ್ನು ಕೊರೊನಾ ಎಂಬ ಮಹಾಮಾರಿ ಬಲಿ ಪಡೆಯುತ್ತಿದ್ದಂತೆ ಆತನ ಅಸಲಿಯತ್ತು ಬೆಳಕಿಗೆ ಬಂದಿದ್ದು, ಆಸ್ತಿಗಾಗಿ ಮೂವರು ಪತ್ನಿಯರು ಪರದಾಡುವಂತಾಗಿದೆ.
ನಾನೇ ಮೊದಲನೇ ಹೆಂಡತಿ ನನಗೆ ಆಸ್ಥಿ ನನಗೆ ಸೇರಬೇಕು ಎಂದು ಪೊಲೀಸ್ ಠಾಣೆ ಸುತ್ತಲು ಗಿರಕಿ ಹೊಡೆಯುತ್ತಿರುವ ಮಹಿಳೆಯರು ಈ ಎಲ್ಲಾ ದೃಶ್ಯಗಳು ಕಂಡುಬಂದಿದ್ದು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಬಟ್ಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಬೊಮ್ಮೇಪಲ್ಲಿ ಗ್ರಾಮದಲ್ಲಿ.
ಈತನ ಹೆಸರು ಮಂಜುನಾಥರೆಡ್ಡಿ ಅಲಿಯಾಸ್ ಬಳ್ಳಾರಿ ಮಂಜ ಆಂದ್ರಪ್ರದೇಶದ ಗಡಿ ಗ್ರಾಮವಾದ ಬೊಮ್ಮೇಪಲ್ಲಿ ಈತನ ಜನ್ಮ ಸ್ಥಳ, ಹುಟ್ಟು ರೌಡಿಯಾಗಿದ್ದ ಈತ ರಾಜ್ಯದ ಹಲವಾರು ಕಡೆ ರೌಡಿಸಂ ಮಾಡಿ ಸಾಕಷ್ಟು ಆಸ್ಥಿ ಪಾಸ್ಥಿ ಸಂಪಾದಿಸಿದ್ದ , ರೌಡಿಸಂ ಜೊತೆಗೆ ಆಂಟಿಗಳ ಹುಚ್ಚು ಬೇರೆ ಇತ್ತಂತೆ. ಹೋದಕಡೆ ಎಲ್ಲಾ ಒಂದೊಂದು ಆಂಟಿಗಳನ್ನು ಮೇಂಟೇನ್ ಮಾಡ್ತಿದ್ದ. ಮಂಜನ ಕಾಟಕ್ಕೆ ಬೊಮ್ಮೇಪಲ್ಲಿ ಗ್ರಾಮಸ್ಥರ ಬದುಕು ದೊಂಬರಾಟ ಆಗೋಗಿದಿಯಂತೆ .
ಲೆಕ್ಕಕ್ಕೆ ಈತನಿಗೆ ಮೂವರು ಹೆಂಡತೀರು. ಲೆಕ್ಕಕ್ಕೆ ಇಲ್ಲದೆ ಅದೆಷ್ಟು ಹೆಂಡತೀಯರಿದ್ದಾರೋ ಎಂಬ ಅನುಮಾನ ಬೊಮ್ಮೇಪಲ್ಲಿ ಗ್ರಾಮಸ್ಥರಿಗೆ ಕಾಡುತ್ತಿದೆ. ಮಂಜನ ಮೊದಲನೇ ಹೆಂಡತಿ ಅನುಸೂಯಮ್ಮ, ಎರಡನೇ ಹೆಂಡತಿ ಗೀತಾ, ಮೂರನೇ ಹೆಂಡತಿ ನಳಿನಿ. ಮೂರನೇ ಹೆಂಡತಿಗೆ ವರ್ಜಿನಲ್ ಗಂಡ ಗೋವರ್ಧನ್ ರೆಡ್ಡಿ ಜೀವಂತವಾಗಿ ಇರುವಾಗಲೇ ಮಂಜ ನಳಿನಿಯನ್ನು ಹೈಜಾಕ್ ಮಾಡಿದ್ನಂತೆ.
ಅನುಸೂಯಮ್ಮನನ್ನು ಸಾಂಪ್ರದಾಯಿಕವಾಗಿ ಮಧುವೆಯಾಗಿದ್ದ ಮಂಜ , ಮೊದಲನೇ ಹೆಂಡತಿಯನ್ನು ಸೈಡ್ ರೋಲ್ ಮಾಡಿ ಮೂರನೆ ಹೆಂಡತಿ ನಳಿನಿಯನ್ನು ಮೇನ್ ರೋಲ್ ಮಾಡಿಕೊಂಡಿದ್ದ , ನಳಿನಿಯನ್ನು ಬೊಮ್ಮೇಪಲ್ಲಿ ಗ್ರಾಮಕ್ಕೆ ಕೆರತಂದು ಗ್ರಾಮಪಂಚಾಯ್ತಿ ಮೆಂಬರ್ ಮಾಡಿದ್ದ ಮೂರು ತಿಂಗಳಿಗೆ ಮಂಜ ಕೊರೋನ ಏಟಿಗೆ ಬಲಿಯಾದ. ಇದಾದ ಬಳಿಕ ಗ್ರಾಮಕ್ಕೆ ಶುರುವಾಯಿತು ವಕ್ರದೆಸೆ. ಮಂಜ ಸತ್ತಿದ್ದೆ ತಡ ನಳಿನಿ ತನ್ನ ಅಸಲೀ ಆಟ ಶುರು ಹಚ್ಚಿಕೊಂಡಿದ್ದಾಳೆ. ಗ್ರಾಮದ ಅಮಾಯಕರ ಬಳಿ ಇದ್ದ ಅಷ್ಟೋ ಇಷ್ಟು ಜಮೀನುಗಳನ್ನು ಆಸೆ ಆಮೀಷಗಳನ್ನು ತೋರಿ ಲಪಟಾಯಿಸಿದ್ದಾಳಂತೆ. ಕೇಳಿದರೆ ರೌಡಿಗಳನ್ನು ಕೆರಸಿ ಗ್ರಾಮದಲ್ಲಿ ದಾಂಧಲೆ ನಡೆಸ್ತಾಳಂತೆ, ನಳಿನಿ ವಿರುದ್ದ ಪೊಲೀಸರಿಗೆ ದೂರು ಕೊಟ್ಟರೂ ನ್ಯಾಯ ಸಿಕ್ಕಿಲ್ಲ ಎಂದು ಆರೋಪಿಸುತ್ತಿದ್ದಾರೆ.
ಗ್ರಾ.ಪ ಸದಸ್ಯೆ ನಳಿನಿ ಕಾಟಕ್ಕೆ ಇಡೀ ಗ್ರಾಮಕ್ಕೆ ಗ್ರಾಮವೇ ತತ್ತರಿಸಿ ಹೋಗಿದಿಯಂತೆ. ಗ್ರಾಮದಲ್ಲಿ ವಾಹನಗಳಿಗೆ ಬೆಂಕಿ ಹಚ್ಚುವಷ್ಟರ ಮಟ್ಟಿಗೆ ಗ್ರಾಮದಲ್ಲಿ ಹೊಡೆದಾಟ ನಡೆಯುವ ಹಂತ ತಲುಪಿತ್ತು. ಮೊದಲನೇ ಹೆಂಡತಿ ಅನುಸೂಯಮ್ಮ ಎರಡನೇ ಹೆಂಡತಿ ಗೀತಾ ಬಟ್ಲಹಳ್ಳಿ ಠಾಣೆಯಲ್ಲಿ ದೂರು ನೀಡಿದರೂ ಕ್ರಮ ಕೈಗೊಳ್ಳದೇ ಇರುವುದು ಅಸಮಾಧಾನಕ್ಕೆ ಕಾರಣವಾಗಿದೆ.