Breaking News

ನನ್ನ 125 ಸಿನಿಮಾಗೆ ಹರ್ಷ ಅವರೇ ನಿರ್ದೇಶನ ಮಾಡಲಿದ್ದಾರೆ’:ಶಿವರಾಜ್​ಕುಮಾರ್​.

Spread the love

ಹರ್ಷ ಹಾಗೂ ಶಿವರಾಜ್​​ಕುಮಾರ್​ ಕಾಂಬಿನೇಷನ್​ನಲ್ಲಿ ಮೂಡಿ ಬಂದ ಮೂರನೇ ಸಿನಿಮಾ ‘ಭಜರಂಗಿ 2’. ಈಗ ಇವರ ಕಾಂಬಿನೇಷನ್​​ನಲ್ಲಿ ನಾಲ್ಕನೇ ಸಿನಿಮಾ ಬರುತ್ತಿದೆಪುನೀತ್​ ರಾಜ್​ಕುಮಾರ್​ ಅವರನ್ನು ಕಳೆದುಕೊಂಡು ಶಿವರಾಜ್​ಕುಮಾರ್​ ಸೈಲೆಂಟ್​ ಆಗಿದ್ದಾರೆ. ಈ ಸಾವು ಅವರಿಗೆ ತೀವ್ರ ನೋವನ್ನು ತಂದಿದೆ.

ಇದನ್ನು ಅರಗಿಸಿಕೊಳ್ಳೋಕೆ ಯಾರಿಂದಲೂ ಸಾಧ್ಯವಾಗುತ್ತಿಲ್ಲ. ಈ ಕಾರಣಕ್ಕೆ ಅವರು ‘ಭಜರಂಗಿ 2’ ಸಿನಿಮಾ ನೋಡೋಕೆ ಸಾಧ್ಯವಾಗಿರಲಿಲ್ಲ. ಈಗ ಶಿವರಾಜ್​ಕುಮಾರ್ ಬಿಡುವು ಮಾಡಿಕೊಂಡು ಸಿನಿಮಾ ವೀಕ್ಷಣೆ ಮಾಡಿದ್ದಾರೆ. ಇಂದು (ನವೆಂಬರ್​ 14) ಅಭಿಮಾನಿಗಳ ಜತೆ ಕುಳಿತು ಶಿವರಾಜ್​ಕುಮಾರ್​ ಸಿನಿಮಾ ವೀಕ್ಷಣೆ ಮಾಡಿದ್ದಾರೆ. ಇದಾದ ನಂತರ ಅವರು ಸಾಕಷ್ಟು ವಿಚಾರ ಮಾತನಾಡಿದ್ದಾರೆ. ಹರ್ಷ ಹಾಗೂ ಶಿವರಾಜ್​​ಕುಮಾರ್​ ಕಾಂಬಿನೇಷನ್​ನಲ್ಲಿ ಮೂಡಿ ಬಂದ ಮೂರನೇ ಸಿನಿಮಾ ‘ಭಜರಂಗಿ 2’. ಈಗ ಇವರ ಕಾಂಬಿನೇಷನ್​​ನಲ್ಲಿ ನಾಲ್ಕನೇ ಸಿನಿಮಾ ಬರುತ್ತಿದೆ. ಇದು ವಿಳಂಬವಾಗಲಿದೆ ಎನ್ನಲಾಗಿತ್ತು. ಇದನ್ನು, ಶಿವಣ್ಣ ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ. ‘ನನ್ನ 125 ಸಿನಿಮಾಗೆ ಹರ್ಷ ಅವರೇ ನಿರ್ದೇಶನ ಮಾಡಲಿದ್ದಾರೆ’ ಎಂದಿದ್ದಾರೆ ಶಿವರಾಜ್​ಕುಮಾರ್​.


Spread the love

About Laxminews 24x7

Check Also

ಬೆಳಗಾವಿಯಲ್ಲಿ ಜಿಲ್ಲಾ ಮಟ್ಟದ ಯುವಜನೋತ್ಸವ 2025-26

Spread the love ಬೆಳಗಾವಿಯಲ್ಲಿ ಜಿಲ್ಲಾ ಮಟ್ಟದ ಯುವಜನೋತ್ಸವ 2025-26 ಮೊಬೈಲ್ ಗೀಳಿನಿಂದ ಹೊರ ಬಂದು ಕ್ರೀಡೆ-ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಕ್ರಿಯರಾಗಿ; …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ