Breaking News

ಶುಭ್​ಮನ್​ ಗಿಲ್​ಗೆ ಕೈ ಕೊಟ್ರಾ ಸಚಿನ್​ ಪುತ್ರಿ ಸಾರಾ ತೆಂಡೂಲ್ಕರ್​?

Spread the love

ನವದೆಹಲಿ: ಬ್ಯಾಟಿಂಗ್​ ಲೆಜೆಂಡ್​ ಸಚಿನ್​ ತೆಂಡೂಲ್ಕರ್​ ಮಗಳು ಸಾರಾ ತೆಂಡೂಲ್ಕರ್​ ಮತ್ತು ಟೀಮ್​​ ಇಂಡಿಯಾ ಹಾಗೂ ಕೋಲ್ಕತ ತಂಡದ ಆಟಗಾರ ಶುಭ್​ಮನ್​ ಗಿಲ್​ ನಡುವೆ ಲವ್​ ಇದೆ ಎಂಬ ವಿಚಾರ ಬಹಳ ದಿನಗಳಿಂದ ಹರಿದಾಡುತ್ತಿದೆ. ಅದಕ್ಕೆ ಪುಷ್ಟಿ ನೀಡುವಂತೆ ಇಬ್ಬರು ಕೆಲವೊಮ್ಮೆ ಒಟ್ಟಿಗೆ ಸಹ ಕಾಣಿಸಿಕೊಂಡಿದ್ದಾರೆ.

ಅಚ್ಚರಿಯೆಂದರೆ ಗೂಗಲ್​ನಲ್ಲಿ ಶುಭ್​ಮನ್​ ಗಿಲ್​ ಪತ್ನಿಯ ಹೆಸರು ಸರ್ಚ್​ ಮಾಡಿದ್ರೆ ಸಾರಾ ತೆಂಡೂಲ್ಕರ್​ ಹೆಸರು ಕಂಪ್ಯೂಟರ್​ ಅಥವಾ ಮೊಬೈಲ್​ ಪರದೆಯ ಮೇಲೆ ತೋರುತ್ತದೆ. ಶುಭ್​ಮನ್​ ಮತ್ತು ಸಾರಾ ಹೆಸರು ಹೆಚ್ಚಾಗಿ ಚರ್ಚೆಯಾಗುತ್ತಿದ್ದು, ಇಬ್ಬರ ನಡುವೆ ಪ್ರೇಮಾಂಕುರವಾಗಿ, ಡೇಟಿಂಗ್​ ಕೂಡ ನಡೆಸುತ್ತಿದ್ದಾರೆಂಬ ಸುದ್ದಿಯಾಗಿದೆ. ಶುಭ್​ಮನ್​, ಸಚಿನ್​ ಅಳಿಯನಾಗ್ತಾರೆ ಎಂಬ ಚರ್ಚೆಯು ನಡೆದಿದೆ.

 

ಹಿಂದೆ ಒಮ್ಮೆ ಸಾರಾ, ಶುಭ್​ಮನ್​ ಫೀಲ್ಡಿಂಗ್​ ಮಾಡುವ ಫೋಟೋವನ್ನು ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿ ಹೃದಯದ ಎಮೋಜಿ ಹಾಕಿದ್ದರು. ಅದರ ಬೆನ್ನಲ್ಲೇ ಪೋಸ್ಟ್​ ಡಿಲೀಟ್​ ಮಾಡಿದ್ದರೂ ಸಹ ಸ್ಕ್ರೀನ್​ಶಾಟ್​ ಹರಿದಾಡಿತ್ತು. ಇದಕ್ಕೂ ಮುಂಚೆ ಶುಭ್​ಮನ್ ಹೊಸ​ ರೇಂಜ್​ ರೋವರ್​ ಕಾರು ಖರೀದಿಸಿದ್ದಾಗ ಸಾರಾ ಅಭಿನಂದನಾ ಸಂದೇಶವನ್ನು ಕಳುಹಿಸಿದ್ದರು. ಹೀಗಾಗಿ ಇಬ್ಬರ ನಡುವೆ ಪ್ರೀತಿ ಇರುವು ಖಚಿತವಾಗಿತ್ತು.

ಆದರೆ, ಇದೀಗ ಇಬ್ಬರ ಲವ್​ ಬ್ರೇಕಪ್​ ಆಗಿದೆ ಎನ್ನಲಾಗಿದೆ. ಅದಕ್ಕೆ ಪುಷ್ಟಿ ನೀಡುವಂತಹ ಫೋಟೋವೊಂದನ್ನು ಶುಭ್​ಮನ್​ ಗಿಲ್​ ತಮ್ಮ ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಫೋಟೋದಲ್ಲಿ ಶುಭ್​ಮನ್​ ಟೀಶರ್ಟ್​ ಧರಿಸಿದ್ದು, ಅದರ ಹಿಂದೆ ‘ದೇವತೆಗಳೊಂದಿಗೆ ಪ್ರೀತಿಯಲ್ಲಿ ಬೀಳಬೇಡಿ’ ಎಂದು ಬರೆಯಲಾಗಿದೆ.

ಶುಭ್​ಮನ್​ ಈ ಫೋಟೋ ಶೇರ್​ ಮಾಡುತ್ತಿದ್ದಂತೆಯೇ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಇಬ್ಬರ ನಡುವೆ ಲವ್​ ಬ್ರೇಕಪ್​ ಆಗಿದೆಯೇ ಎಂದು ನೆಟ್ಟಿಗರು ಕಾಮೆಂಟ್​ಗಳ ಸುರಿಮಳೆಗೈದಿದ್ದಾರೆ. ಸಾರಾ ತೆಂಡೂಲ್ಕರ್​ ನಿಮಗೆ ಕೈ ಕೊಟ್ರಾ ಸಹೋದರಾ? ಎಂದು ಪ್ರಶ್ನಿಸಿದ್ದಾರೆ. ಸಾಕಷ್ಟು ಪ್ರಶ್ನೆಗಳು ಹರಿದುಬಂದಿದ್ದು, ಶುಭ್​ಮನ್​ ಯಾವುದಕ್ಕೂ ಪ್ರತಿಕ್ರಿಯಿಸಿಲ್ಲ. ಶುಭ್​ಮನ್​ ಪ್ರೇಮ ವೈಫಲ್ಯದ ನೋವಿನಲ್ಲಿರಬೇಕೆಂದು ನೆಟ್ಟಿಗರು ಭಾವಿಸಿದ್ದಾರೆ. ಇದಕ್ಕೆಲ್ಲ ಶುಭ್​ಮನ್​ ಸ್ಪಷ್ಟನೆ ನೀಡುತ್ತಾರಾ ಎಂದು ನೆಟ್ಟಿಗರು ಕಾದು ಕುಳಿತಿದ್ದಾರೆ.


Spread the love

About Laxminews 24x7

Check Also

ವಿದೇಶಿ ಪ್ರಜೆಗಳಿಂದ ಮಾದಕ ದ್ರವ್ಯಗಳನ್ನ ಜಪ್ತಿ

Spread the loveಬೆಂಗಳೂರು : ಮಿಂಚಿನ ಕಾರ್ಯಾಚರಣೆ ನಡೆಸಿರುವ ರಾಜಾನುಕುಂಟೆ ಪೊಲೀಸರು ಮೂವರು ವಿದೇಶಿ ಪ್ರಜೆಗಳನ್ನು ಬಂಧಿಸುವ ಮೂಲಕ ಡ್ರಗ್ಸ್ ಜಾಲವನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ