Breaking News

ಬೆಳಗಾವಿಗೆ ಆಗಮಿಸಿದ ಕಿತ್ತೂರು ಉತ್ಸವದ ವೀರಜ್ಯೋತಿಗೆ ಸ್ವಾಗತ ಕೋರಿ, ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಲಾಯಿತು.

Spread the love

ಬೆಳಗಾವಿಗೆ ಆಗಮಿಸಿದ ಕಿತ್ತೂರು ಉತ್ಸವದ ವೀರಜ್ಯೋತಿಗೆ ಸ್ವಾಗತ ಕೋರಿ, ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಲಾಯಿತು.

ಅಕ್ಟೋಬರ್ 23 ಮತ್ತು 24ರಂದು ಎರಡು ದಿನಗಳ ಕಿತ್ತೂರು ಉತ್ಸವ ನಡೆಯುವ ಹಿನ್ನೆಲೆಯಲ್ಲಿ ಖಾನಾಪುರದಿಂದ ಆಗಮಿಸಿದ ವೀರಜ್ಯೋತಿಯನ್ನು ಬೆಳಗಾವಿಯಲ್ಲಿ ಅತ್ಯಂತ ಅದ್ಧೂರಿಯಾಗಿ ಬರಮಾಡಿಕೊಳ್ಳಲಾಯಿತು.
ವೀರಜ್ಯೋತಿಯನ್ನು ಬೆಳಗಾವಿಯ ಕಿತ್ತೂರು ರಾಣಿ ಚನ್ನಮ್ಮಾಜಿ ವೃತ್ತದಲ್ಲಿ ಸಕಲ ವಾಧ್ಯ ಮೇಳಗಳೊಂದಿಗೆ ಜಿಲ್ಲಾಡಳಿತ ವತಿಯಿಂದ ಬರಮಾಡಿಕೊಳ್ಳಲಾಯಿತು.

25ನೇ ವರ್ಷದ ಉತ್ಸವ ಬೆಳ್ಳಿಹಬ್ಬವನ್ನು ನಾವು ಆಚರಿಸುತ್ತಿದ್ದೇವೆ. ಮುಖ್ಯಮಂತ್ರಿಗಳು ಕೂಡ ಕಾರ್ಯಕ್ರಮಕ್ಕೆ ಬರುತ್ತಿದ್ದಾರೆ. ವೀರಜ್ಯೋತಿಯ ಮೆರವಣಿಗೆ ಬೈಲಹೊಂಗಲದಿಂದ ಆರಂಭವಾಗಿ ಎಲ್ಲ ತಾಲೂಕುಗಳಲ್ಲಿ ಸಂಚರಿಸಿ ಅಕ್ಟೋಬರ್ 23ಕ್ಕೆ ಕಿತ್ತೂರಿಗೆ ತಲುಪಲಿದೆ. ಕೋವಿಡ್ ಮಾರ್ಗಸೂಚಿ ಅನುಸಾರ ಉತ್ಸವ ಆಚರಿಸುತ್ತಿದ್ದೇವೆ. ಎಲ್ಲರೂ ಇದರಲ್ಲಿ ಭಾಗಿಯಾಗಿ ಉತ್ಸವ ಯಶಸ್ವಿಗೊಳಿಸಬೇಕು ಎಂದು ಮನವಿ.

ಈ ಸಂದರ್ಭದಲ್ಲಿ ಸಂಸದೆ ಶ್ರೀಮತಿ ಮಂಗಲ ಅಂಗಡಿ, ಜಿಲ್ಲಾಧಿಕಾರಿ ಶ್ರೀ ಮಹಾಂತೇಶ ಹಿರೇಮಠ ಅವರು
ಎಸಿ ಶ್ರೀ ರವಿ ಕರಲಿಂಗನವರ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕಿ ಶ್ರೀಮತಿ ವಿದ್ಯಾವತಿ ಭಜಂತ್ರಿ, ಪಾಲಿಕೆ ಆಯುಕ್ತ ಡಾ.ರುದ್ರೇಶ್ ಘಾಳಿ, ಶ್ರೀ ಮಹಾದೇವ ತಳವಾರ, ಶ್ರೀಮತಿ ಕಸ್ತೂರಿ ಭಾಂವಿ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.


Spread the love

About Laxminews 24x7

Check Also

ಗಡಿ ವಿವಾದದಿಂದಾಗಿ ಮತ್ತೆ ಮಹಾರಾಷ್ಟ್ರ ಅಲರ್ಟ್

Spread the loveಬೆಳಗಾವಿ : ಗಡಿ ಸಚಿವರಾಗಿ ಹೆಚ್. ಕೆ. ಪಾಟೀಲ್ ಅವರನ್ನು ಕರ್ನಾಟಕ ಸರ್ಕಾರ ನೇಮಿಸುತ್ತಿದ್ದಂತೆ ಮಹಾರಾಷ್ಟ್ರ ಸರ್ಕಾರ ಮತ್ತೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ