Breaking News

ಡಿಕೆಶಿ ಅವರೇ ನೀವು ಕುಡುಕರೇ? ಕಾಂಗ್ರೆಸ್ ಕಚೇರಿಯಲ್ಲೇ ಎದ್ದಿರುವ ಅನುಮಾನ ಬಗೆಹರಿಸಿ.’

Spread the love

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ ಕುರಿತು ಕಾಂಗ್ರೆಸ್​ ನಾಯಕರಾದ ಸಲೀಂ ಮತ್ತು ಉಗ್ರಪ್ಪ ಇಬ್ಬರೂ ಒಟ್ಟಿಗೆ ಮಾತನಾಡಿರುವ ಸಂಭಾಷಣೆ ರಾಜ್ಯ ರಾಜಕೀಯದಲ್ಲಿ ಕೋಲಾಹಲ ಎಬ್ಬಿಸಿದೆ. ಸ್ವಪಕ್ಷದವರಿಂದಲೇ ಡಿಕೆಶಿ ಡೀಲ್​ ರಹಸ್ಯ ಬಯಲಾಗಿದ್ದು, ಡಿಕೆಶಿಗೆ ಬಿಜೆಪಿ ತಿರುಗೇಟು ಕೊಟ್ಟಿದೆ. #ಭ್ರಷ್ಟಾಧ್ಯಕ್ಷ ಎಂದು ಹ್ಯಾಷ್​ಟ್ಯಾಗ್​ ಮಾಡಿ ಸರಣಿ ಟ್ವೀಟ್​ ಮಾಡಿರುವ ಕರ್ನಾಟಕ ಬಿಜೆಪಿ, ‘ಮುಖ್ಯಮಂತ್ರಿಯಾಗುವ @DKShivakumar ಅವರ ಕನಸಿಗೆ @INCKarnataka ಪಕ್ಷದ ನಾಯಕರೇ ಎಳ್ಳು ನೀರು ಬಿಟ್ಟಿದ್ದಾರೆ. ನಿಮ್ಮ ಅಧ್ಯಕ್ಷ ಗಿರಿಯ ತಕ್ಕಡಿ ಏಳುತ್ತಲೇ ಇಲ್ಲ ಎಂದು‌ ಸ್ಬಪಕ್ಷೀಯರೇ ಷರಾ ಬರೆದುಬಿಟ್ಟಿದ್ದಾರೆ. ಈ ಮಾತುಗಳು, ಸಿದ್ದರಾಮಯ್ಯ ಅವರ ಬಹುದಿನಗಳ ‘ಡಿಕೆಶಿ ಪದಚ್ಯುತಿ’ ಎಂಬ ಮಾಸ್ಟರ್‌ ಪ್ಲ್ಯಾನ್‌ನ ಭಾಗವೇ?’ ಎಂದು ಪ್ರಶ್ನಿಸಿದೆ.

‘ಪ್ರತಿ ಬಾರಿ ದೆಹಲಿ ಭೇಟಿಯ ಬಳಿಕ ಡಿಕೆಶಿ ಅವರ ಪದಚ್ಯುತಿಗೆ ಸಿದ್ದರಾಮಯ್ಯ ತಂತ್ರ‌ ಹೆಣೆಯುತ್ತಾರೆ. ತಂತ್ರದ ಭಾಗವಾಗಿ ಇಂದಿನ ಪ್ರಹಸನ ಬಿಡುಗಡೆಯಾಗಿದೆ. ಡಿಕೆಶಿ ಅವರ ಬಗ್ಗೆ ಇಂದು ಕೆಪಿಸಿಸಿ ಕಚೇರಿಯಲ್ಲಿ ಸತ್ಯ ಬಿಚ್ಚಿಟ್ಟವರು ಸಿದ್ದರಾಮಯ್ಯ ಅವರ ಶಿಷ್ಯರು! ಮಾನ್ಯ ಡಿಕೆಶಿ ಅವರೇ, ನೀವು ಕುಡುಕರೇ, ನೀವು ಭ್ರಷ್ಟರೇ? ಕಾಂಗ್ರೆಸ್ ಕಚೇರಿಯಲ್ಲೇ ಎದ್ದಿರುವ ಅನುಮಾನಗಳನ್ನು ಬಗೆಹರಿಸಿ’.
‘ಸಿದ್ದರಾಮಯ್ಯ ಖಡಕ್ !!!
ಶಿವಕುಮಾರ್ ಕುಡುಕ !!!
ಕಳ್ಳರು ಕಳ್ಳರು ಸೇರಿ ಸಂತೆಗೆ ಹೊರಟಂತಾಗಿದೆ’.
‘ಡಿಕೆಶಿ ಅವರೇ, ನಿಮ್ಮ ಹುಡುಗರ ಬಳಿ 50 ರಿಂದ 100 ಕೋಟಿ ಇದೆಯಂತೆ. ಹಾಗಾದರೆ ಕೆಪಿಸಿಸಿ ಅಧ್ಯಕ್ಷರಾದ ನಿಮ್ಮ ಬಳಿ ಎಷ್ಟಿರಬಹುದು? ಇದು ಕೆಪಿಸಿಸಿ ಕಚೇರಿಯಿಂದಲೇ ಎದ್ದಿರುವ ಅಧಿಕೃತ ಅನುಮಾನ. ಈ ಪ್ರಶ್ನೆ ರಾಜ್ಯದ ಜನತೆಯನ್ನೂ ಕಾಡುತ್ತಿದೆ. ಇದಕ್ಕೆ ನೀವಲ್ಲದೆ ಇನ್ಯಾರು ಉತ್ತರಿಸುತ್ತಾರೆ?’ ಎಂದು ಬಿಜೆಪಿ ಲೇವಡಿ ಮಾಡಿದೆ.

ಡಿಕೆಶಿ ವಿರುದ್ಧ ಕಾಂಗ್ರೆಸ್​ ನಾಯಕರ ಹೇಳಿಕೆ ಕುರಿತು ಸರಣಿ ಟ್ವೀಟ್​ ಮಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್​ ಕುಮಾರ್​ ಕಟೀಲ್​, ‘@DKShivakumar ಬಗ್ಗೆ ಕುಡುಕ, ಕಲೆಕ್ಷನ್ ಗಿರಾಕಿ, ಭ್ರಷ್ಟಾಚಾರಿ, ತನಿಖೆ ಮಾಡಿದರೆ ತುಂಬಾ ಹಗರಣ ಹೊರಗೆ ಬರುತ್ತವೆ ಎಂದು ಅವರದ್ದೇ ಪಕ್ಷದ ಮುಖಂಡರು ಹೇಳಿದ್ದಾರೆ. ಸತ್ಯ ಯಾವತ್ತಾದರೂ ಹೊರಗೆ ಬರಲೇಬೇಕು ಎಂದು ಸಾಬೀತಾಗಿದೆ. ಕಾಂಗ್ರೆಸ್ ರಾಜ್ಯಾಧ್ಯಕ್ಷ @DKShivakumar ಬಗ್ಗೆ ಅವರ ಪಕ್ಷದವರೇ ಹೇಳಿರುವ ಮಾತುಗಳನ್ನು ರಾಜ್ಯದ ಜನ ಕೇಳುತ್ತಿದ್ದಾರೆ. ಡಿಕೆಶಿ ಮೇಲೆ ಇಡಿ, ಸಿಬಿಐ ದಾಳಿಯಾದಾಗ ರಾಜಕೀಯ ಪ್ರೇರಿತ ಎಂದವರಿಗೆ ಅವರದ್ದೇ ಪಕ್ಷದ ಮುಖಂಡರು ಸಾಕ್ಷ್ಯ ನೀಡಿದ್ದಾರೆ’ ಎಂದು ಲೇವಡಿ ಮಾಡಿದ್ದಾರೆ.

‘ಬಹುಕೋಟಿ ಮೊತ್ತದ ಬಹುಭಾಷಾ ರಾಜಕೀಯ ಚಲನಚಿತ್ರದ ಚಿತ್ರೀಕರಣ ಆರಂಭಗೊಂಡಿದೆ.
ನಿರ್ಮಾಣ, ನಿರ್ದೇಶನ- ಸಿದ್ದರಾಮಯ್ಯ
ತಾರಾಗಣ- ಉಗ್ರಪ್ಪ, ಸಲೀಂ
ಅಕ್ರಮ ಸಂಪಾದನೆಯ ಅಸಲಿ ಕಥೆಯ ಟ್ರೈಲರ್‌ ಕೆಪಿಸಿಸಿ ಕಚೇರಿಯಿಂದಲೇ ಬಿಡುಗಡೆಯಾಗಿದೆ. #ಭ್ರಷ್ಟಾಧ್ಯಕ್ಷರೇ , ನಿಮ್ಮ ಥಿಯೇಟರ್‌ನಲ್ಲೇ ಸಿನೇಮಾ ಬಿಡುಗಡೆಯಾಗಲಿದೆಯೇ?’ ಎಂದು ಬಿಜೆಪಿ ಟ್ವೀಟ್​ ಮಾಡಿದೆ.


Spread the love

About Laxminews 24x7

Check Also

ಸರ್ಕಾರ ಸಲ್ಲಿಸಿರುವ ಅರ್ಜಿ ವಿಲೇವಾರಿವರೆಗೂ ಸಿಎಟಿ ಆದೇಶ ಜಾರಿಗೆ ಒತ್ತಾಯಿಸದಂತೆ ವಿಕಾಸ್ ಕುಮಾರ್​ಗೆ ಸೂಚನೆ

Spread the loveಬೆಂಗಳೂರು: ಆರ್​​ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯಲೋಪ ಎಸಗಿದ್ದ ಆರೋಪದಡಿ ಕೆಲವು ಅಧಿಕಾರಿಗಳನ್ನು ಅಮಾನತು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ