Breaking News

SSLC ಮರು ಪರೀಕ್ಷೆ ಫಲಿತಾಂಶ ಪ್ರಕಟ; 53,155 ವಿದ್ಯಾರ್ಥಿಗಳಲ್ಲಿ 29,522 ಮಂದಿ ಪಾಸ್

Spread the love

ಬೆಂಗಳೂರು: ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಎಸ್​​ಎಸ್​​ಎಲ್​ಸಿ ಮರು ಪರೀಕ್ಷೆಯ ಫಲಿತಾಂಶವನ್ನ ಪ್ರಕಟಿಸಿದ್ದಾರೆ.

ಈ ವೇಳೆ ಪರೀಕ್ಷೆಯ ಫಲಿತಾಂಶದ ಬಗ್ಗೆ ಮಾತನಾಡಿರುವ ಶಿಕ್ಷಣ ಸಚಿವರು 27.9.2021 ರಿಂದ 29.09.2021 ಪರೀಕ್ಷೆ ನಡೆಸಲಾಯ್ತು. 352 ಪರೀಕ್ಷೆ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಯಿತು. 53155 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ರು. 29522 ಉತ್ತೀರ್ಣರಾಗಿ ಶೇ. 55.54 ಫಲಿತಾಂಶ ತಂದು ಕೊಟ್ಟಿದ್ದಾರೆ ಎಂದರು.

ಹೊಸಬರು 18,417 ಅಭ್ಯರ್ಥಿಗಳು ನೊಂದಾಯಿಸಿಕೊಂಡಿದ್ರು, ಅವರಲ್ಲಿ 9182 ಉತ್ತೀರ್ಣರಾಗಿದ್ದಾರೆ. ರಿಪೀಟರ್ಸ್ 23334 ನೋಂದಾಯಿಸಿಕೊಂಡಿದ್ರು. ಅವರಲ್ಲಿ 13866 ಉತ್ತೀರ್ಣರಾಗಿದ್ದಾರೆ. ಸರ್ಕಾರಿ ಶಾಲೆಯ ಮಕ್ಕಳೇ ಹೆಚ್ಚಿನ ಸಾಧನೆ ಮಾಡಿದ್ದಾರೆ. ಶೇಕಡಾ 58.05ರಷ್ಟು ಸರ್ಕಾರಿ ಶಾಲೆಯ ಮಕ್ಕಳ ಪಾಸ್ ಆಗಿದ್ದರು. ಇಲ್ಲಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ ಅಂತಾ ಮಾಹಿತಿ ನೀಡಿದರು.

ಶಾಲೆ ಆರಂಭದ ಬಗ್ಗೆ ಏನಂದ್ರು..?
ಇನ್ನು ಒಂದನೇ ತರಗತಿ ಶಾಲೆ ಆರಂಭಿಸುವ ಬಗ್ಗೆ ಮಾತನಾಡಿದ ಶಿಕ್ಷಣ ಸಚಿವರು.. ದಸರಾ‌ ಹಬ್ಬದ ನಂತರ ತಾಂತ್ರಿಕ ಸಲಹೆ ಸಮಿತಿ ಸಭೆ ಇದೆ. ಅಕ್ಟೋಬರ್ 20ವರೆಗೂ ಶಾಲೆ‌ ರಜೆ ಇರಲಿದೆ. 21 ರಿಂದ ಮಧ್ಯಾಹ್ನದ ಬಿಸಿ ಊಟ ಆರಂಭ ಮಾಡಲಾಗುತ್ತದೆ. 10ನೇ ತರಗತಿವರೆಗೂ ಆಹಾರ ನೀಡಲಾಗುತ್ತದೆ. ಈಗೀಗ ಮಕ್ಕಳೇ ಶಾಲೆ ಪ್ರಾರಂಭಿಸಿ ಅಂತ ಕೇಳೋಕೆ ಶುರು ಮಾಡಿದ್ದಾರೆ. 1 ರಿಂದ 5ನೇ ತರಗತಿ ಆರಂಭಕ್ಕೆ ಅವಕಾಶ ಕೇಳ್ತೀವಿ. ಈಗಾಗಲೇ ನಾವು ತಯಾರಿ ಮಾಡಿಕೊಂಡಿದ್ದೇವೆ ಎಂದರು.


Spread the love

About Laxminews 24x7

Check Also

ಸರ್ಕಾರಿ ಶಾಲೆಗಳನ್ನು ಉಳಿಸಿ-ಬೆಳೆಸಿ : ಜಿಲ್ಲಾಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ

Spread the love ಸರ್ಕಾರಿ ಶಾಲೆಗಳನ್ನು ಉಳಿಸಿ-ಬೆಳೆಸಿ : ಜಿಲ್ಲಾಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಕೊಳವಿ ಗ್ರಾಮದ ನಮ್ಮೂರ ಸರಕಾರಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ