Breaking News

ಪಕ್ಷಿಗಳಿಗೆ ಪುನರ್ಜನ್ಮ ನೀಡುತ್ತಿರುವ ರಾಯಚೂರಿನ ಪಕ್ಷಿಪ್ರೇಮಿ ಸಲ್ಲಾವುದ್ದೀನ್

Spread the love

ರಾಯಚೂರು: ಮಾನ್ವಿ ಪಟ್ಟಣದ ಪಕ್ಷಿ ಪ್ರೇಮಿ ಪಬ್ಲಿಕ್ ಹೀರೋ ಸಲ್ಲಾವುದ್ದೀನ್ ಗಾಯಗೊಂಡಿದ್ದ ನವಿಲೊಂದನ್ನ ಮನೆಯಲ್ಲಿಟ್ಟುಕೊಂಡು ಆರೈಕೆ ಮಾಡಿ ಪುನಃ ಕಾಡಿಗೆ ಬಿಡುವ ಮೂಲಕ ಪಕ್ಷಿ ಪ್ರೇಮ ಮೆರೆದಿದ್ದಾರೆ. ಪಕ್ಷಿಗಳ ರಕ್ಷಣೆಯಲ್ಲಿ ತೊಡಗಿಕೊಂಡಿರುವ ಸಲ್ಲಾವುದ್ದೀನ್ ಈಗ ನವಿಲೊಂದಕ್ಕೆ ಪುನರ್ಜನ್ಮ ನೀಡಿದ್ದಾರೆ.

ಸೆಪ್ಟೆಂಬರ್ 26 ರಂದು ಮಾನ್ವಿ ತಾಲೂಕಿನ ಬಾಪೂರಿನ ಜಮೀನೊಂದರಲ್ಲಿ ಅನಾರೋಗ್ಯದಿಂದ ಬಿದ್ದಿದ್ದ ನವಿಲನ್ನು ಸ್ಥಳೀಯರಾದ ಫಯಾಜ್ ರುಮಾಲ್ ವಾಲೆ ಹಾಗೂ ಅವರ ಸ್ನೇಹಿತರು ಸಲ್ಲಾವುದ್ದೀನ್ ಅವರಿಗೆ ತಂದು ಒಪ್ಪಿಸಿದ್ದಾರೆ. ಬಳಿಕ ಅರಣ್ಯಾಧಿಕಾರಿ ರಾಜೇಶ್ ನಾಯಕ್‍ಗೆ ಮಾಹಿತಿ ನೀಡಿ ಪಶು ಚಿಕಿತ್ಸಾಲಯದಲ್ಲಿ ಚಿಕಿತ್ಸೆ ಕೊಡಿಸಿ ಬಳಿಕ ಆರೈಕೆ ಶುರು ಮಾಡಿದ್ದಾರೆ.

ಪಕ್ಷಿಧಾಮದಂತೆ ಮಾಡಿಕೊಂಡಿರುವ ತಮ್ಮ ಮನೆಯಲ್ಲಿ ಕೋಳಿಗಳ ಜೊತೆ ನವಿಲನ್ನು ಬಿಟ್ಟು ಆರೈಕೆ ಮಾಡಿದ್ದಾರೆ. ಜೊತೆಗೆ ಚಿಕಿತ್ಸೆಯನ್ನೂ ಕೊಡಿಸಿ ಗುಣಮುಖ ಮಾಡಿದ್ದಾರೆ. ಈಗ ನವಿಲು ಸಂಪೂರ್ಣ ಗುಣಮುಖವಾದ ಹಿನ್ನೆಲೆ ವಲಯ ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಸಮ್ಮುಖದಲ್ಲಿ ಪುನಃ ಕಾಡಿಗೆ ಬಿಡಲಾಗಿದೆ.

ಇದೇ ರೀತಿ ಎಲ್ಲೇ ಪಕ್ಷಿಗಳು ಗಾಯಗೊಂಡು ಬಿದ್ದಿದ್ದರೂ ಜನ ಸಲ್ಲಾವುದ್ದೀನ್ ಬಳಿ ತರುತ್ತಾರೆ. ಅವುಗಳಿಗೆ ಚಿಕಿತ್ಸೆ ಕೊಡಿಸಿ ಆರೈಕೆ ಮಾಡಿ ಪುನಃ ಕೆಲಸದಲ್ಲಿ ನಿರತರಾಗಿದ್ದಾರೆ. ವೃತ್ತಿಯಲ್ಲಿ ಗುತ್ತಿಗೆದಾರರಾಗಿರುವ ಸಲಾವುದ್ದೀನ್ ಪಕ್ಷಿಪ್ರೇಮ ಕುರಿತು ಈ ಹಿಂದೆ ಪಬ್ಲಿಕ್ ಟಿವಿ ಪಬ್ಲಿಕ್ ಹೀರೋ ಕಾರ್ಯಕ್ರಮದಲ್ಲಿ ವರದಿ ಪ್ರಸಾರ ಮಾಡಲಾಗಿತ್ತು.


Spread the love

About Laxminews 24x7

Check Also

ಸರ್ಕಾರ ಸಲ್ಲಿಸಿರುವ ಅರ್ಜಿ ವಿಲೇವಾರಿವರೆಗೂ ಸಿಎಟಿ ಆದೇಶ ಜಾರಿಗೆ ಒತ್ತಾಯಿಸದಂತೆ ವಿಕಾಸ್ ಕುಮಾರ್​ಗೆ ಸೂಚನೆ

Spread the loveಬೆಂಗಳೂರು: ಆರ್​​ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯಲೋಪ ಎಸಗಿದ್ದ ಆರೋಪದಡಿ ಕೆಲವು ಅಧಿಕಾರಿಗಳನ್ನು ಅಮಾನತು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ