Breaking News

ನಗರದಲ್ಲಿ ನಕಲಿ ದಾಖಲೆ ಸೃಷ್ಟಿಸಿ ಭೂ ಕಬಳಿಕೆ ಮಾಡುವ ರೌಡಿಗಳಿದ್ದಾರೆ : ಅರಗ ಜ್ಞಾನೇಂದ್ರ

Spread the love

ಬೆಂಗಳೂರು: ನಗರದಲ್ಲಿ ರೌಡಿಗಳು ನಕಲಿ ದಾಖಲೆಗಳನ್ನು ಸೃಷ್ಟಿಸಿ ಸಂಬಂಧಿಸಿದವರನ್ನು ಹೆದರಿಸುವ ಕೆಲಸ ಮಾಡುತ್ತಿದ್ದಾರೆ. ಜೊತೆಗೆ ಇಂಥ ಸಮಾಜಘಾತುಕರನ್ನು ಬಳಸಿಕೊಂಡು ಬೆದರಿಸುವ ಕಾರ್ಯಗಳು ನಡೆಯುತ್ತಿವೆ. ಇಂಥವುಗಳು ಕೂಡಲೇ ಬಂದ್ ಆಗಬೇಕು. ಬೆಂಗಳೂರನ್ನು ರೌಡಿಮುಕ್ತ ನಗರವನ್ನಾಗಿಸಬೇಕು ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಇಂದು ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಪರಿಶೀಲನಾ ಸಭೆ ನಡೆಸಿದ ಬಳಿಕ ಅವರು ಸುದ್ದಿಗಾರರ ಜೊತೆ ಮಾತನಾಡಿದರು. ನಗರದಲ್ಲಿ ನಕಲಿ ದಾಖಲೆ ಸೃಷ್ಟಿಸಿ ಭೂ ಕಬಳಿಕೆ ಮಾಡುವ ರೌಡಿಗಳಿದ್ದಾರೆ. ಇಂಥವರನ್ನು ಬಳಸಿಕೊಳ್ಳುವ ವ್ಯಕ್ತಿಗಳು ಇದ್ದಾರೆ ಎಂಬುದು ನನಗೆ ತಿಳಿದುಬಂದಿದೆ. ಇಂಥ ರೌಡಿಗಳೊಂದಿಗೆ ಆಗಲಿ, ಅವರಿಗೆ ಬೆಂಬಲ ನೀಡುವವರ ಜೊತೆಯಾಲಿ ಆಗಲಿ ಪೊಲೀಸರು ಗುರುತಿಸಿಕೊಳ್ಳಬಾರದು. ಇಂಥವುಳಿಗೆ ಆಸ್ಪದವಿರಬಾರದು ಎಂದು ಸೂಚಿಸಿದ್ದೇನೆ ಎಂದರು.


Spread the love

About Laxminews 24x7

Check Also

ಮಾದಕವಸ್ತು ಮಾರಾಟ; ಆಯುಧದೊಂದಿಗೆ ವ್ಯಕ್ತಿಯ ಬಂಧನ

Spread the love ಮಾದಕವಸ್ತು ಮಾರಾಟ; ಆಯುಧದೊಂದಿಗೆ ವ್ಯಕ್ತಿಯ ಬಂಧನ ಮಾದಕ ವಸ್ತುಗಳ ಅಕ್ರಮ ಮಾರಾಟದ ಮೇಲೆ ಬೆಳಗಾವಿ ಮಾಳಮಾರುತಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ