ಹುಬ್ಬಳ್ಳಿ: ಜಿಲ್ಲೆಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮಾತನಾಡಿ.. ಚೆನ್ನಮ್ಮ ವೃತ್ತದಲ್ಲಿ ಫ್ಲೈಓವರ್ ನಿರ್ಮಾಣದ ಕುರಿತು ಇಂದು ಸ್ಥಳೀಯರ ಸಲಹೆ ಸೂಚನೆಗಳನ್ನ ಪಡೆದಿದ್ದೇವೆ. ಫ್ಲೈ ಓವರ್ ನಿರ್ಮಾಣದ ಕುರಿತು ಸ್ಥಳೀಯರು ತಜ್ಞರ ಸಲಹೆ ಪಡೆಯಲಾಗಿದೆ. ಶಾಸಕ ಅರವಿಂದ ಬೆಲ್ಲದ್ ಹಾಗೂ ತಜ್ಞರ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗುವುದು. ಸ್ಥಳೀಯರ ಸಲಹೆ, ದೂರುಗಳಿದ್ರೆ ಅವುಗಳನ್ನ ಪರಿಗಣಿಸಲಾಗುವುದು ಎಂದಿದ್ದಾರೆ.
ಭಾರತ ಬಂದ್ ಕರೆಗೆ ಜೋಶಿ ಆಕ್ರೋಶ ವ್ಯಕ್ತಪಡಿಸಿ.. ಬಹಳಷ್ಟು ಬಾರಿ ಭಾರತ ಬಂದ್ಗೆ ಕರೆ ನೀಡಿದ್ದಾರೆ. ಕಾಲಾ ಕಾನೂನು ಅಂತಾರೆ, ಕಾಲಾ ಕಾನೂನು ಎಲ್ಲಿದೆ ಅಂತಾ ತೋರಿಸಲಿ. ಕೃಷಿ ಕಾಯ್ದೆ ರೈತರ ವಿರೋಧಿಯಾಗಿಲ್ಲ. ಪಂಜಾಬ್ ಹೊರತುಪಡಿಸಿ ಎಲ್ಲಿಯೂ ವಿರೋಧ ಮಾಡುತ್ತಿಲ್ಲ. ಭಾರತ ಬಂದ್ ಕರೆ ನೀಡಿದವರಿಗೆ ದೇವರು ಸದ್ಬುದ್ದಿ ನೀಡಲಿ. ಕೃಷಿ ಕಾಯ್ದೆ ವಿಚಾರದಲ್ಲಿ ಸ್ವಾಮಿನಾಥನ್ ರವರೇ ವರದಿ ನೀಡಿದ್ದಾರೆ. ಭಾರತ ಬಂದ್ ಕರೆಯಲ್ಲಿ ರೈತ ಮುಖಂಡರು ಇಲ್ಲ. ಬೆಲೆ ಎರಿಕೆ ವಿಚಾರದ ಬಗ್ಗೆ ಮೊನ್ನೆ ನೋಟಿಸ್ ನೀಡಿ ಚರ್ಚೆ ಮಾಡಿದ್ದಾರೆ. ಆದ್ರೆ ಬೆಲೆ ಏರಿಕೆ ಕಾಂಗ್ರೆಸ್ ಸರ್ಕಾರ ಇದ್ದಾಗ ಪ್ರತಿ ವರ್ಷ ಏರಿಕೆ ಆಗಿದೆ, ಕಾಂಗ್ರೆಸ್ ಲೂಟಿ ಮಾಡಿದೆ.
ಮೋದಿ ಸರ್ಕಾರದಲ್ಲಿ ಕಳೆದ 7 ವರ್ಷದಲ್ಲಿ ಬೆಲೆ ಏರಿಕೆ ಆಗಿಲ್ಲ. ಈಗ ಹಲವು ವಿಚಾರದಲ್ಲಿ ಬೆಲೆ ಇಳಿಕೆ ಆಗುತ್ತಿದೆ. ಕೋವಿಡ್ ಹಿನ್ನೆಲೆಯಲ್ಲಿ ಕೆಲವು ಬೆಲೆ ಎರಿಕೆ ಆಗಿದೆ. ಪ್ರೆಟ್ರೋಲ್ ಡಿಸೇಲ್ ಬೆಲೆ ಏರಿಕೆ ಸಹ ಕಡಿಮೆ ಆಗುತ್ತೆ. ಆ ನಂಬಿಕೆ ಇಟ್ಟುಕೊಂಡು ನಾವೂ ಕೆಲಸ ಮಾಡುತ್ತಿದ್ದೇವೆ ಎಂದಿದ್ದಾರೆ.