ಬೆಂಗಳೂರು: ಭಾರತ್ ಬಂದ್ ಪ್ರತಿಭಟನೆ ವೇಳೆ ಡಿಸಿಪಿ ಧರ್ಮೇಂದ್ರ ಕುಮಾರ್ ಮೀನಾ ಅವರು ದೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ರೈತ ಸಂಘಟನೆಗಳಿಂದ ಬಂದ್ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ನಗರದ ಗೊರಗುಂಟೆ ಪಾಳ್ಯ ಜಂಕ್ಷನ್ನಲ್ಲಿ ಪ್ರತಿಭಟನಾ ಜಾಥಾ ನಡೆಯುತ್ತಿತ್ತು. ಈ ವೇಳೆ ಕೆಲವು ಪ್ರತಿಭಟನಾಕಾರರನ್ನ ಪೊಲೀಸರು ವಶಕ್ಕೆ ಪಡೆಯಲು ಮುಂದಾಗಿದ್ದಾರೆ.
ಈ ವೇಳೆ ರೈತ ಮುಖಂಡನ ಕಾರನ್ನ ಅಡ್ಡ ಹಾಕಲು ಡಿಸಿಪಿ ಧರ್ಮೇಂದ್ರ ಕುಮಾರ್ ಮುಂದಾಗಿದ್ದಾರೆ. ಆಗ ಕಾರು ಚಾಲಕ ಗಾಡಿಯನ್ನ ನಿಲ್ಲಿಸದೇ ಮುನ್ನುಗ್ಗಿಸಿದ್ದಾನೆ. ಇದರಿಂದ ಕಾರಿನ ಟೈರ್ ಡಿಸಿಪಿ ಕಾಲಿನ ಮೇಲೆ ಹರಿದಿದೆ. ಕೂಡಲೇ ಎಚ್ಚೆತ್ತ ಧರ್ಮೇಂದ್ರ ಕುಮಾರ್ ತಮ್ಮ ಕಾಲನ್ನ ಎಳೆದುಕೊಂಡು ಅಪಾಯದಿಂದ ಪಾರಾಗಿದ್ದಾರೆ. ಬಳಿಕ ಕಾರಿನ ಡ್ರೈವರ್ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.