ಬೆಳಗಾವಿ – ಇತ್ತೀಚೆಗೆ ಅಕಾಲಿಕವಾಗಿ ಮರಣಹೊಂದಿದ ಖಾನಾಪುರದ ಪತ್ರಕರ್ತ ಯಲ್ಲಪ್ಪ ಕಾನಾರ ಅವರ ಕುಟುಂಬಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಒಂದು ಲಕ್ಷ ರುಪಾಯಿ ಮೊತ್ತದ ಪರಿಹಾರ ಚೆಕ್ ನ್ನು ಬೆಳಗಾವಿಯಲ್ಲಿ ವಿತರಿಸಿದರು.
ಲೋಂಡಾದ ಯಲ್ಲಪ್ಪ ಕಾನಾರ ಕೊರೋನಾದಿಂದಾಗಿ ಈಚೆಗೆ ನಿಧನರಾಗಿದ್ದಾರೆ. ಸುಂಮಾರು 25 ವರ್ಷಗಳ ಕಾಲ ಯಲ್ಲಪ್ಪ ಪತ್ರಿಕಾ ವರದಿಗಾರರಾಗಿ, ಫೋಟೋಗ್ರಾಫರ್ ಆಗಿ ಕೆಲಸ ಮಾಡಿದ್ದರು.
ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಉಪಸ್ಥಿತರಿದ್ದರು.
Laxmi News 24×7