Breaking News

ಭಾರತೀನಗರದಲ್ಲಿ ದುನಿಯಾವಿಜಯ್‌ಗೆ ಅದ್ಧೂರಿ ಸ್ವಾಗತ

Spread the love

ಭಾರತೀನಗರ: ಬೆಂಗಳೂರಿನಿಂದ ಕೊಳ್ಳೆಗಾಲಕ್ಕೆ ತೆರಳುತ್ತಿದ್ದ ಮಾರ್ಗಮಧ್ಯೆ ಭಾರತೀನಗರದಲ್ಲಿ ಚಿತ್ರನಟ ದುನಿಯಾ ವಿಜಯ್‌ಗೆ ಅಭಿಮಾನಿಗಳಿಂದ ಅದ್ದೂರಿ ಸ್ವಾಗತ ಸಿಕ್ಕಿತು.

ಬೆಂಗಳೂರಿನಿಂದ ಕೊಳ್ಳೇಗಾಲಕ್ಕೆ ಖಾಸಗೀ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ದುನಿಯಾ ವಿಜಯ್ ಅವರನ್ನು ಭಾರತೀನಗರದ ಕಾಲೇಜ್ ಗೇಟ್‌ನಲ್ಲಿ ಅಭಿಮಾನಿಗಳು ಅಡ್ಡಗಟ್ಟಿ ಅದ್ದೂರಿಯಾಗಿ ಸ್ವಾಗತಿಸಿ ಜೈಕಾರ ಹಾಕಿದರು. ನಂತರ ಕಾರಿನಿಂದ ಇಳಿಯುವಂತೆ ಅಭಿಮಾನಿಗಳು ದುನಿಯಾವಿಜಯ್‌ಗೆ ಒತ್ತಡ ಹೇರಿದ ಮೇಲೆ ಕಾರಿನಿಂದ ಇಳಿದು ಅಭಿಮಾನಿಗಳತ್ತ ಕೈಬೀಸಿ ನಮಸ್ಕರಿಸಿ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ತೆರೆಕಾಣಲಿರುವ ಸಲಗ ಚಿತ್ರವನ್ನು ವೀಕ್ಷಿಸಿ ಯಶಸ್ವಿಗಳಿಸಬೇಕೆಂದು ಅಭಿಮಾನಿಗಳಿಗೆ ಕೋರಿದ ನಂತರ ಕೊಳ್ಳೇಗಾಲಕ್ಕೆ ಅಭಿಮಾನಿಗಳು ಬೀಳ್ಕೊಟ್ಟರು.


Spread the love

About Laxminews 24x7

Check Also

ಸಾರ್ವಜನಿಕರಿಗೆ ಸಮಸ್ಯೆಯಾಗದಂತೆ ಕಾಮಗಾರಿ ಕೈಗೊಳ್ಳಿ :ಶಾಸಕ ರಾಜು ಶೆಠ್

Spread the love ಫ್ಲೈಓವರ್ ಕಾಮಗಾರಿಗೆ ಸಂಬಂಧಿಸಿದ ಪ್ರಮುಖ ಪ್ರದೇಶಗಳ ಪರಿಶೀಲನೆ ನಾಗರಿಕರ ಸುರಕ್ಷತೆ, ತುರ್ತು ಸೇವೆಗಳ ಪ್ರವೇಶ ಮಾರ್ಗ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ