ಬೆಂಗಳೂರು: ಬೇಗೂರು ಠಾಣಾ ವ್ಯಾಪ್ತಿಯ ಅಶ್ರೀತ್ ಅಪಾರ್ಟ್ಮೆಂಟ್ನಲ್ಲಿ ಸಿಲಿಂಡರ್ ಸ್ಫೋಟ ಪ್ರಕರಣ ಇಡೀ ಸಿಲಿಕಾನ್ ಸಿಟಿ ಜನರನ್ನೇ ಶಾಕ್ಗೆ ಒಳಗಾಗುವಂತೆ ಮಾಡಿದೆ. ನಿನ್ನೆ ಮಧ್ಯಾಹ್ನ ದೇವರ ಚಿಕ್ಕನಹಳ್ಳಿಯ ಅಶ್ರೀತ್ ಅಪಾರ್ಟ್ಮೆಂಟ್ನ ಮೂರನೇ ಮಹಡಿಯಲ್ಲಿ ಸಂಭವಿಸಿರೋ ಫೈರ್ ಆಕ್ಸಿಡೆಂಟ್ನಲ್ಲಿ ಇಬ್ಬರು ಮೃತಪಟ್ಟಿದ್ದಾರೆ.. ಲಕ್ಷ್ಮಿದೇವಿ ಅನ್ನೋ 82 ವರ್ಷದ ವೃದ್ಧೆ ಹಾಗೂ 51 ವರ್ಷದ ಭಾಗ್ಯ ರೇಖಾ ಅನ್ನೋ ಮಹಿಳೆ ಸಾವನ್ನಪ್ಪಿದ್ದಾರೆ.
ಅಷ್ಟಕ್ಕೂ ಭೀಕರ ದುರಂತಕ್ಕೆ ಕಾರಣವೇನು? ಅಪಾರ್ಟ್ಮೆಂಟ್ನಲ್ಲಿ ಸೇಫ್ಟಿ ಮೆಸರ್ಸ್ ಇರಲಿಲ್ವಾ? ಅಪಾರ್ಟ್ಮೆಂಟ್ ಬಗ್ಗೆ ಬಿಬಿಎಂಪಿಯೂ ನಿರ್ಲಕ್ಷ್ಯ ವಹಿಸಿತ್ತಾ? ನಿರ್ಲಕ್ಷ್ಯಕ್ಕೆ ಕಣ್ಮುಂದೆಯೆ ಎರಡು ಅಮಾಯಕ ಜೀವಗಳು ಬಲಿ ಆದ್ವಾ? ಅನ್ನೋ ಪ್ರಶ್ನೆಗಳು ಕೂಡ ಎದ್ದಿವೆ. ಇದರ ಜೊತೆಗೆ ಕೆಲವೊಮ್ಮೆ ಜನರು ಕೂಡ ಸಿಲಿಂಡರ್ ಬಳಸುವ ವಿಧಾನದಲ್ಲಿ ತಪ್ಪು ಮಾಡುತ್ತಲೇ ಇರುತ್ತಾರೆ.
Laxmi News 24×7