ಮತ್ತೊಂದು ಮೋಸ್ಟ್ ಎಕ್ಸೈಟೆಡ್ ಮ್ಯಾಚ್ಗೆ ಸಾಕ್ಷಿಯಾಗಲು ದುಬೈ ಮೈದಾನ ಸಜ್ಜಾಗಿದೆ. ಮೊದಲ ಹಂತದ ದರ್ಬಾರ್ ಮುಂದುವರೆಸಲು ಡೆಲ್ಲಿ ರೆಡಿಯಾಗಿದ್ರೆ, ಪಂತ್ ಪಡೆಗೆ ಬ್ರೇಕ್ ಹಾಕಲು ವಿಲಿಯಮ್ಸನ್ ನೇತೃತ್ವದ ಸನ್ ರೈಸರ್ಸ್ ಗೇಮ್ಪ್ಲಾನ್ ಮಾಡಿಕೊಂಡಿದೆ.
ದಿನದಿಂದ ದಿನಕ್ಕೆ ಐಪಿಎಲ್ ಸೆಕೆಂಡ್ ಹಾಫ್ ರಂಗೇರುತ್ತಿದೆ. ಇಂದು ಮತ್ತೊಂದು ಹೈವೋಲ್ಟೇಜ್ ಮ್ಯಾಚ್ಗೆ ದುಬೈ ಇಂಟರ್ನ್ಯಾಷನಲ್ ಸ್ಟೇಡಿಯಂ ಸಜ್ಜಾಗಿದೆ. ಇಂದಿನ ಐಪಿಎಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ & ಸನ್ ರೈಸರ್ಸ್ ಹೈದ್ರಾಬಾದ್ ಮುಖಾಮುಖಿಯಾಗ್ತಿದೆ. ಯಂಗ್ vs ಎಕ್ಸ್ಪೀರಿಯನ್ಸ್ ನಡುವಿನ ಸಮರ ಅಂತಾನೇ ಬಿಂಬಿತವಾಗಿರುವ ಇಂದಿನ ಪಂದ್ಯದಲ್ಲಿ ಯಾರ್ ಗೆಲ್ತಾರೆ ಎಂಬ ಕುತೂಹಲ ಹೆಚ್ಚಿಸಿದೆ.
ಗೆಲುವಿನ ಲಯ ಮುಂದುವರಿಸುತ್ತಾ ಡೆಲ್ಲಿ ಕ್ಯಾಪಿಟಲ್ಸ್..!
ಫಸ್ಟ್ ಹಾಫ್ನಲ್ಲಿ ಸಾಲಿಡ್ ಪರ್ಫಾಮೆನ್ಸ್ ನೀಡಿ ಪ್ಲೇ ಆಫ್ ಸನಿಹದಲ್ಲಿರುವ ಡೆಲ್ಲಿ, ಸೆಕೆಂಡ್ ಹಾಫ್ನಲ್ಲೂ ಅಂಥದ್ದೇ ಪ್ರದರ್ಶನ ನೀಡೋ ಲೆಕ್ಕಚಾರದಲ್ಲಿದೆ. ಆದ್ರಲ್ಲೂ ಶ್ರೇಯಸ್ ಕಮ್ಬ್ಯಾಕ್ ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ. ಇದರ ಜೊತೆಗೆ ಶಿಖರ್ ಧವನ್, ಪೃಥ್ವಿ ಶಾರ ಅದ್ಬುತ ಫಾರ್ಮ್, ಮಿಡಲ್ ಆರ್ಡರ್ನಲ್ಲಿ ಮಾರ್ಕಸ್ ಸ್ಟೋಯ್ನಿಸ್, ರಿಷಭ್ ಪಂತ್, ಶಿಮ್ರೋನ್ ಹೆಟ್ಮೇಯರ್ರ ಬ್ಯಾಟಿಂಗ್ ತಂಡದ ಬಲವಾಗಿದೆ.
13ನೇ ಅವೃತ್ತಿಯಲ್ಲಿ ಯುಎಇ ಕಂಡೀಷನ್ಸ್ನಲ್ಲಿ ಕಮಾಲ್ ಮಾಡಿದ್ದ ಕಗಿಸೋ ರಬಾಡ, ಎನ್ರಿಚ್ ನೋಕಿಯಾ ಹೈದ್ರಾಬಾದ್ಗೆ ಕಂಟಕವಾಗಬಲ್ಲರು. ಇದರೊಂದಿಗೆ ಸ್ಪಿನ್ನರ್‌ಗಳಾದ ಅಕ್ಷರ್ ಪಟೇಲ್, ಆರ್.ಅಶ್ವಿನ್, ಅಮಿತ್ ಮಿಶ್ರಾ ಮೋಡಿ ಮಾಡಿದ್ದೇ ಆದ್ರೆ, ಡೆಲ್ಲಿ ವಿಜಯಯಾತ್ರೆ ಮುಂದುವರೆಯುವುದರಲ್ಲಿ ಅನುಮಾನವೇ ಇಲ್ಲ.
ಸನ್ ರೈಸರ್ಸ್ ಪಾಲಿಗೆ ಡು ಆರ್ ಡೈ ಮ್ಯಾಚ್
ಮೊದಲ ಹಂತದಲ್ಲಿ ಹೀನಾಯ ಪ್ರದರ್ಶನ ನೀಡಿರುವ ಸನ್ ರೈಸರ್ಸ್ಗೆ ಪ್ರತಿಯೊಂದು ಪಂದ್ಯವೂ ಡು ಆರ್ ಡೈ ಮ್ಯಾಚ್ ಆಗಿದೆ. ಸೆಕೆಂಡ್ ಹಾಫ್ನಲ್ಲಿ ಒಂದೇ ಒಂದು ಪಂದ್ಯವನ್ನೂ ಸೋತರೂ ಪ್ಲೇ ಆಫ್ ಹಾದಿ ಕಠಿಣವಾಗಲಿದೆ. ಹೀಗಾಗಿಯೇ ತಂಡದಲ್ಲಿನ ಪ್ರತಿಯೊಬ್ಬರು ಸಕೆಂಡ್ ಹಾಫ್ನಲ್ಲಿ ಉತ್ತಮ ಪರ್ಫಾಮೆನ್ಸ್ ನೀಡಬೇಕಿದೆ.
ಡೇವಿಡ್ ವಾರ್ನರ್, ಮನೀಶ್ ಪಾಂಡೆ, ಕೇನ್ ವಿಲಿಯಮ್ಸನ್, ರಶೀದ್ ಖಾನ್ ಮೇಲೆ ನಿರೀಕ್ಷೆಯ ಭಾರವೇ ಇದೆ. ಇನ್ನು ನಟರಾಜನ್, ಭುವನೇಶ್ವರ್ ಕಮ್ಬ್ಯಾಕ್ ಮಾಡಿರೋದು ಬೌಲಿಂಗ್ ವಿಭಾಗಕ್ಕೆ ಬಲತಂದಿದೆ. ತಂಡದ ಸ್ಟಾರ್ಗಳು ಸಾಮರ್ಥ್ಯಕ್ಕೆ ತಕ್ಕ ಆಟವಾಡಿದ್ರೆ, ಡೆಲ್ಲಿ ಕ್ಯಾಪಿಟಲ್ಸ್ ಸೋಲಿಸೋದು ಕಷ್ಟದ ಕೆಲಸವೇನಲ್ಲ.