Breaking News

ನಾನು ಐದಾರು ಜನರ ತಲೆ ತೆಗಿಯಬೇಕಿದೆ. ಇದಕ್ಕೆ ಅನುಮತಿ ಕೊಡ್ಸಿ: ರಮೇಶ್‌ ಕುಮಾರ್‌

Spread the love

ಬೆಂಗಳೂರು: ನಾನು ಐದಾರು ಜನರ ತಲೆ ತೆಗಿಯಬೇಕಿದೆ. ಇದಕ್ಕೆ ಅನುಮತಿ ಕೊಡ್ಸಿ ಎಂದು ಸ್ಪೀಕರ್‌ಗೆ ಶ್ರಿನಿವಾಸಪುರ ಶಾಸಕ ರಮೇಶ್‌ ಕುಮಾರ್‌ ಮನವಿ ಮಾಡಿದರು.

ರಸ್ತೆಗಳಲ್ಲಿ ಅವೈಜ್ಞಾನಿಕವಾಗಿ ಹಂಪ್ಸ್​ ಹಾಕಿರುವ ಬಗ್ಗೆ ಸೋಮವಾರ ವಿಧಾನಸಭೆ ಕಲಾಪದಲ್ಲಿ ಪ್ರಸ್ತಾಪಿಸಿದ ರಮೇಶ್​ ಕುಮಾರ್​, ನಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ 52 ಕಿಲೋ ಮೀಟರ್‌ಗೆ 47 ಸ್ಪೀಡ್‌ ಹಂಪ್ಸ್‌ ಹಾಕಲಾಗಿದೆ. ಈ ಬಗ್ಗೆ ಒಂದೇ ವರ್ಷದಲ್ಲಿ 2ನೇ ಬಾರಿ ಪ್ರಶ್ನೆ ಮಾಡುತ್ತಿದ್ದೇನೆ. ಈ ರೋಡ್‌ಗೆ ವಾರಸುದಾರರು ಯಾರು? ನಿಮ್ಮ ಜೆಇಗಳು ಇರೋದಿಲ್ವಾ, ಎಡಬ್ಲ್ಯು ಇಲ್ವಾ? ಎಕ್ಸಿಕ್ಯೂಟಿವ್‌ ಇಂಜಿನಿಯರ್ಸ್​ ಇಲ್ವಾ? ಅವರ ಆಸ್ತಿ ಅಲ್ವಾ ಅದು? ಪ್ರತಿ ಕಿಲೋ ಮೀಟರ್‌, ಅರ್ಧ ಕಿಲೋ ಮೀಟರ್‌ಗೆ ಸ್ಪೀಡ್‌ ಹಂಪ್ಸ್​ ಹಾಕಿಸುತ್ತಾರೆ. ಕೋಟ್ಯಂತರ ರೂಪಾಯಿ ಖರ್ಚು ಮಾಡಿ ರಸ್ತೆಯನ್ನು ಏಕೆ ನಿರ್ಮಿಸಬೇಕು? ಎಂದರು. ಈ ಸದನದಲ್ಲಿನ ಪ್ರಶ್ನೋತ್ತರಕ್ಕೆ ಗೌರವ ಬರಬೇಕಾದರೆ ಎಕ್ಸಿಕ್ಯೂಟಿವ್‌ ಇಂಜಿನಿಯರ್‌ನಿಂದ ಹಿಡಿದು ಎಲ್ಲರನ್ನೂ ಅಮಾನತು ಮಾಡಿ ಎಂದು ಆಗ್ರಹಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸ್ಪೀಕರ್‌, ಬೇರೆ ಬೇರೆ ಸಂದರ್ಭದಲ್ಲಿ ನಾನು ಪ್ರವಾಸ ಮಾಡಿದಾಗ ಸ್ಥಳೀಯರ ಆಗ್ರಹ, ಬೇಡಿಕೆಗಳ ಮೇರೆಗೆ ಅವರೇ ರಸ್ತೆಗೆ ಸ್ಪೀಡ್‌ ಹಂಪ್ಸ್​ ಹಾಕಲಾಗುತ್ತಿದೆ. ಶಾಸಕರು, ಸಂಸದರೂ ಈ ಬಗ್ಗೆ ಒತ್ತಡ ಹಾಕುತ್ತಾರೆ. ಹಾಗಾಗಿ ನಮಗೆ ಬಹಳ ಇಕ್ಕಟ್ಟಾಗಿದೆ ಎಂದು ಅಧಿಕಾರಿಗಳೇ ಹೇಳಿದ್ದಾರೆ ಎನ್ನುತ್ತಿದ್ದಂತೆ ಗರಂ ಆದ ರಮೇಶ್​ಕುಮಾರ್​, ಶಾಸಕರು-ಸಂಸದರು ಹೇಳೋದೆಲ್ಲಾ ಮಾಡೋದಾದ್ರೆ ನಾನೊಂದು ಐದಾರು ಜನರ ತಲೆ ತೆಗಿಬೇಕಿದೆ ಪರ್ಮೀಷನ್‌ ಕೊಡ್ಸಿ ಎಂದರು.

ಒಂದು ಗ್ರಾಮದಲ್ಲಿ ಅಪಘಾತ ಆಗುತ್ತೆ. ಅಲ್ಲಿ ರೌಡಿಗಳು ಗಲಾಟೆ ಮಾಡಿದ್ರೆ ಅವರಿಗೆ ಹೆದರಿ ಅಲ್ಲೊಂದು ಸ್ಪೀಡ್‌ ಹಂಪ್ಸ್​ ಹಾಕಿಸೋದು. ಯಾರ ಕೈಗೆ ಕೊಟ್ಟಿದ್ದೀರಿ ನೀವು ರಾಜ್ಯವನ್ನ? ರಸ್ತೆಗಳನ್ನೆಲ್ಲ ಅವರಿಗೇ ಕೊಟ್ಬಿಡಿ. ಎಲ್ಲಿ ಬೇಕಾದ್ರೂ ಉಳುಮೆ ಮಾಡಿಕೊಳ್ಳಲ್ಲಿ, ಎಲ್ಲಿ ಬೇಕಾದ್ರೂ ಸ್ಪೀಡ್‌ ಹಂಪ್ಸ್​ ಹಾಕ್ಸಿಕೊಳ್ಳಲಿ ಎನ್ನತ್ತಾ ಅವೈಜ್ಞಾನಿಕ ಹಂಪ್ಸ್​ಗಳ ವಿರುದ್ಧ ಆಕ್ರೋಶ ಹೊರಹಾಕಿದರು.

ಪ್ರತಿಕ್ರಿಯಿಸಿದ ಸ್ಪೀಕರ್‌, ಹೊಸ ಸಚಿವರು ಈ ಸಮಸ್ಯೆ ಪರಿಹಾರಕ್ಕೆ ಏನಾದ್ರೂ ಮಾಡಿ ಎಂದರು. ಇದಕ್ಕೆ ಓಕೆ ಅಂದ ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್‌, ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳು ಹಾಗೂ ಎಸ್​ಪಿಗಳಿಗೆ ರಸ್ತೆ ಹಂಪ್ಸ್​ ಸಮಸ್ಯೆ ಸರಿಪಡಿಸಲು ಸೂಚಿಸಲಾಗಿದೆ ಎಂದರು.


Spread the love

About Laxminews 24x7

Check Also

ಗೋಲಿಹಳ್ಳಿಯ ಶ್ರೀ ಶಿವ ಮಂದಿರದಲ್ಲಿ ನೂತನ ಶಿವ ಮುಖವಾಡ ಮತ್ತು ನಂದಿ ಮೂರ್ತಿ ಪ್ರತಿಷ್ಠಾಪನೆ

Spread the love ಗೋಲಿಹಳ್ಳಿಯ ಶ್ರೀ ಶಿವ ಮಂದಿರದಲ್ಲಿ ನೂತನ ಶಿವ ಮುಖವಾಡ ಮತ್ತು ನಂದಿ ಮೂರ್ತಿ ಪ್ರತಿಷ್ಠಾಪನೆ ಖಾನಾಪೂರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ