Breaking News

ಡಾ.ರಾಜ್ ಕುಮಾರ್ ವೃತ್ತಿ ಜೀವನ ಆರಂಭಿಸಿದ ದೇವಸ್ಥಾನ ಇದೆ ನೋಡಿ

Spread the love

ಈಶ್ವರ ದೇವಸ್ಥಾನ ವಾಣಿಜ್ಯ ನಗರಿ ಹುಬ್ಬಳ್ಳಿಯ ಸ್ಟೇಷನ್ ರಸ್ತೆಯಲ್ಲಿದೆ. ಸ್ಟೇಷನ್ ರೋಡ್​ನಲ್ಲಿರುವ ಈಶ್ವರ ದೇವಸ್ಥಾನಕ್ಕೆ ಒಂದು ವಿಶೇಷವಾದ ಶಕ್ತಿ ಇದೆ.

ಹುಬ್ಬಳ್ಳಿ: ಜಿಲ್ಲೆಯಲ್ಲಿರುವ ಈಶ್ವರ ದೇವಸ್ಥಾನ (Ishwara Temple) ಒಂದು ಸಾವಿರ ವರ್ಷಗಳ ಇತಿಹಾಸ ಹೊಂದಿದೆ. ಪ್ರಸಿದ್ಧ ಆರೂಢ ಸಂಪ್ರದಾಯದ ಸಿದ್ದರೋಡ ಮಹಾಸ್ವಾಮಿಗಳು ತಪ್ಪಸ್ಸು ಮಾಡಿರುವ ದೇವಸ್ಥಾನ. ಚಾಲುಕ್ಯರ ಕಾಲದಲ್ಲಿ ಸ್ಥಾಪಿತವಾದ ದೇವಸ್ಥಾನ ಬಹಳ ಪ್ರಸಿದ್ಧಿಯನ್ನ ಪಡೆದಿದ್ದು, ಈ ದೇವಸ್ಥಾನಕ್ಕೆ ಪ್ರತಿನಿತ್ಯ ಸಾವಿರಾರು ಭಕ್ತರು ಬಂದು ದೇವರ ದರ್ಶನ ಪಡೆದು ಪುನೀತರಾಗುತ್ತಾರೆ.

ಈಶ್ವರ ದೇವಸ್ಥಾನ ವಾಣಿಜ್ಯ ನಗರಿ ಹುಬ್ಬಳ್ಳಿಯ ಸ್ಟೇಷನ್ ರಸ್ತೆಯಲ್ಲಿದೆ. ಸ್ಟೇಷನ್ ರೋಡ್​ನಲ್ಲಿರುವ ಈಶ್ವರ ದೇವಸ್ಥಾನಕ್ಕೆ ಒಂದು ವಿಶೇಷವಾದ ಶಕ್ತಿ ಇದೆ. ಪುರಾಣ ಪ್ರಸಿದ್ಧ ದೇವಸ್ಥಾನ, ಪೂರ್ವಾಭಿ ಮುಖವಾಗಿ ಇರುವ ಈ ಈಶ್ವರ ದೇವಸ್ಥಾನವನ್ನ ಕಲ್ಯಾಣ ಚಾಲುಕ್ಯರ ಕಾಲದಲ್ಲಿ ನಿರ್ಮಾಣ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಕಲ್ಯಾಣ ಚಾಲಕ್ಯರು ಬಾಗಲಕೋಟೆ ಜಿಲ್ಲೆಯ ಬಾದಾಮಿಯಲ್ಲಿ ತಮ್ಮ ಆಡಳಿತವನ್ನ ನಡೆಸುತ್ತಿರುತ್ತಾರೆ. ಆ ವೇಳೆ ಪ್ರವಾಸಕ್ಕೆ ಬಂದಾಗ ಹೂಬಳ್ಳಿಯಲ್ಲಿ 12 ಗಜ ಸ್ತಂಭಗಳನ್ನು ಹೊಂದಿರುವ ದೇವಸ್ಥಾನ ಗರ್ಭಗುಡಿ, ಹೋರಾಂಗಣ ಹಾಗೂ ಪಡಸಾಲೆಯನ್ನು ಹೊಂದಿರುವ ದೇವಸ್ಥಾನವನ್ನು ಕಟ್ಟುತ್ತಾರೆ ಎಂದು ಇಲ್ಲಿನ ಸ್ಥಳೀಯರು ಹೇಳುತ್ತಾರೆ.

ದೇವಸ್ಥಾನದ ನಾಲ್ಕು ದಿಕ್ಕಿನಲ್ಲಿ ಅಶ್ವತ ವೃಕ್ಷಗಳಿವೆ. ಈಶ್ವರನ ಮುಂದೆ ನಂದಿ ಇದ್ದು, ಸದಾಕಾಲ ಈ ಈಶ್ವರನನ್ನ ನಂದಿ ಕಾಯುತ್ತಾ ಇರುತ್ತಾನೆ. ಬಂದ ಭಕ್ತರ ಕಷ್ಟಗಳನ್ನ ದೂರ ಮಾಡುತ್ತಾನೆ ಈ ಭಗವಂತ ಅಂತ ಜನರು ನಂಬಿದ್ದಾರೆ. ಗೋಕರ್ಣದ ಮಹಾಬಲೇಶ್ವರ ರೀತಿ ಈ ದೇವಸ್ಥಾನ ಪ್ರಸಿದ್ಧಿಯನ್ನ ಪಡೆದಿದೆ. ಈ ದೇವಸ್ಥಾನದಲ್ಲಿ ಇನ್ನೊಂದು ವಿಶೇಷ ಇದೆ. ಕೇವಲ ಈಶ್ವರನ ಮೂರ್ತಿ ಮಾತ್ರ ಅಲ್ಲ, ದೇವಸ್ಥಾನದ ಬಲಭಾಗದಲ್ಲಿ ಗಣಪತಿ ದೇವಸ್ಥಾನ ಇದೆ. ಎಡಭಾಗದಲ್ಲಿ ನವಗ್ರಹಗಳ ದೇವಸ್ಥಾನ ಇದೆ. ಮುಂಭಾಗ ಶ್ರೀರಾಮನ ದೇವಸ್ಥಾನ ಇದೆ. ಚಂದ್ರ ಗ್ರಹಣ ಮತ್ತು ಸೂರ್ಯ ಗ್ರಹಣ ಇದ್ದಾಗ ಅನೇಕ ಪೂಜಾ ಕರ್ಯಕ್ರಮಗಳು ಈ ಈಶ್ವರನ ಸನ್ನಿಧಿಯಲ್ಲಿ ನಡೆಯುತ್ತವೆ.

ಗ್ರಹಣದಲ್ಲಿ ಭಕ್ತರ ದಂಡು
ಬೇರೆ ದೇವಸ್ಥಾನದಲ್ಲಿ ಗ್ರಹಣ ಇದ್ದ ಸಮಯದಲ್ಲಿ ಭಕ್ತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇಳಿಮುಖವಾಗಿರುತ್ತದೆ. ಆದರೆ ಈ ಸನ್ನಿಧೊಯಲ್ಲಿ ಭಕ್ತರ ಸಂಖ್ಯೆ ಹೆಚ್ಚಿಗೆ ಆಗುತ್ತದೆ. ಗ್ರಹಣದ ವೇಳೆ ಆಸಕ್ತರಿಂದ ಹೋಮ, ಹವನ, ಭಜನೆ, ಪಾರಾಯಣ, ಪಠಣಗಳಲ್ಲಿ ತೊಡಗಿಕೊಳ್ಳುತ್ತಾರೆ. ಎಂತಹ ಕಷ್ಟಗಳನ್ನು ಇಟ್ಟುಕೊಂಡು ದೇವರ ದರ್ಶನ ಪಡೆದರೆ ಅವರ ಕಷ್ಟಗಳು ದೂರವಾಗುತ್ತವೆ ಎಂಬ ನಂಬಿಕೆ ಭಕ್ತರಿಗಿದೆ.

ಡಾ.ರಾಜ್ ಕುಮರ್ ವೃತ್ತಿ ಜೀವನ ಆರಂಭ
ಮೇರುನಟ ಡಾ.ರಾಜ್ ಕುಮರ್ ಸಹ ಈ ದೇವಸ್ಥಾನಕ್ಕೆ ಬಂದು ಹೋಗಿದ್ದಾರೆ. ಅಲ್ಲದೇ ಅವರು ತಮ್ಮ ವೃತ್ತಿ ಜೀವನವನ್ನ ಆರಂಭ ಮಾಡಿದ್ದು ಇದೇ ದೇವಸ್ಥಾನದಿಂದ. ಅಂದರೆ ಈ ದೇವಸ್ಥಾನದ ಆವರಣದಲ್ಲಿ ಅವರು ಅನೇಕ ನಾಟಕಗಳನ್ನು ಪ್ರದರ್ಶನ ಮಾಡಿ, ಈ ಈಶ್ವರ ದೇವರ ಆಶೀರ್ವಾದ ಪಡೆದುಕೊಂಡ ನಂತರ ಅವರಿಗೆ ಚಿತ್ರರಂಗದಲ್ಲಿ ನಟಿಸುವ ಅವಕಾಶ ಸಿಕ್ಕಿತು ಎನ್ನುವ ಮಾತಿದೆ. ಕೇವಲ ರಾಜ್ ಕುಮಾರ್ ಅಷ್ಟೇ ಅಲ್ಲದೇ ಅನೇಕ ರಂಗಭೂಮಿ ಕಲಾವಿದರು ಈ ದೇವಸ್ಥಾನಕ್ಕೆ ಬಂದು ಹೋಗಿದ್ದಾರೆ. ವರ್ಷದಿಂದ ಪ್ರತಿ ವರ್ಷಕ್ಕೆ ಇಲ್ಲಿಗೆ ಬರುವ ಭಕ್ತರ ಸಂಖ್ಯೆ ದಿನನಿತ್ಯ ಹೆಚ್ಚಾಗುತ್ತಿದೆ.


Spread the love

About Laxminews 24x7

Check Also

ಕೆಎಸ್ಆರ್​ಟಿಸಿಯಲ್ಲಿ ಲಂಚಾವತಾರಗೂಗಲ್ ಪೇ, ಫೋನ್ ಪೇ ಮೂಲಕ ಲಂಚ ಪಡೆದ ಅಧಿಕಾರಿಗಳು!

Spread the loveಬೆಂಗಳೂರು, ಆಗಸ್ಟ್ 25: ಈ ಹಿಂದೆ ಬಿಎಂಟಿಸಿಯಲ್ಲಿ ಕರ್ತವ್ಯ ವಹಿಸಲು ಅಧಿಕಾರಿಗಳು ಚಾಲಕ, ನಿರ್ವಾಹಕರಿಂದ ಲಕ್ಷಾಂತರ ರೂಪಾಯಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ